Footwear and Vastu Shastra In Kannada: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಸಹ ಬಹಳ ಪ್ರಾಮುಖ್ಯತೆ ಇದೆ. ಮನೆ ಕಟ್ಟುವುದರಿಂದ ಹಿಡಿದು ಮನೆಯಲ್ಲಿ ಯಾವ ವಸ್ತುಗಳು ಯಾವ ಜಾಗದಲ್ಲಿ, ಯಾವ ದಿಕ್ಕಿನಲ್ಲಿರಬೇಕು ಎಂಬ ಎಲ್ಲಾ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ನಾವು ಧರಿಸುವ ಚಪ್ಪಲಿ, ಶೂ ಸಹ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ಪಾದರಕ್ಷೆಗಳ ಕುರಿತ ಸಣ್ಣ ತಪ್ಪುಗಳು ಕೂಡ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಬಹುದು ಎಂದು ಹೇಳಲಾಗುತ್ತದೆ. 


ವಾಸ್ತುವಿನಲ್ಲಿ ಶೂ ಮತ್ತು ಚಪ್ಪಲಿಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಇವುಗಳ ನಿರ್ಲಕ್ಷ್ಯದಿಂದ ಜೀವನದಲ್ಲಿ ಭಾರೀ ಅನಾಹುತ ಸಂಭವಿಸಬಹುದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಫ್ಲಾಟ್ ಖರೀದಿಸುವಾಗ ಈ 9 ವಿಷಯಗಳನ್ನು ನೆನಪಿನಲ್ಲಿಡಿ..!


ವಾಸ್ತುಶಾಸ್ತ್ರದ ಪ್ರಕಾರ, ಅಪ್ಪಿತಪ್ಪಿಯೂ ಪಾದರಕ್ಷೆಗಳಿಗೆ ಸಂಬಂಧಿಸಿದ ಈ ತಪ್ಪುಗಳನ್ನು ಮಾಡಲೇಬಾರದು: 
* ಉಡುಗೊರೆ: 

ವಾಸ್ತು ಶಾಸ್ತ್ರದ ಪ್ರಕಾರ, ಯಾರಿಗೂ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಬಾರದು. ಇದು ವ್ಯಕ್ತಿಯ ಹಣಕಾಸಿನ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ. 


* ಇಂತಹ ಪಾದರಕ್ಷೆಗಳ ಬಗ್ಗೆ ವಿಶೇಷ ಗಮನವಿರಲಿ: 
ನೀವು ಸಂದರ್ಶನಕ್ಕಾಗಿ ಅಥವಾ ವ್ಯವಹಾರಕ್ಕೆ ಇಲ್ಲವೇ ಯಾವುದೇ ಶುಭ ಕೆಲಸಕ್ಕೆ  ಹೋಗುತ್ತಿದ್ದರೆ, ಹರಿದ ಅಥವಾ ಕೊಳಕು ಬೂಟುಗಳನ್ನು ಧರಿಸಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ಇರಲಿ. ವಾಸ್ತು ಪ್ರಕಾರ, ಇದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. 


* ಕಚೇರಿಗೆ ಹೋಗುವಾಗ ಈ ಬಣ್ಣದ ಬೂಟುಗಳನ್ನು ಧರಿಸಬಾರದು: 
ಕಂದು ಅಥವಾ ಬೂದು ಬಣ್ಣದ ಬೂಟುಗಳನ್ನು ಧರಿಸಿ ಕಚೇರಿಗೆ ಹೋಗಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿ ಮಾಡುವುದರಿಂದ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ. ಇದು ನಿಮ್ಮ ಯಶಸ್ಸನ್ನು ಕುಂಠಿತಗೊಳಿಸುತ್ತವೆ. 


ಇದನ್ನೂ ಓದಿ- ಮನೆಯಲ್ಲಿ ಟೈಲ್ಸ್ ಹಾಕಬೇಕೆ? ವಾಸ್ತು ಶಾಸ್ತ್ರದ ಈ ಸಂಗತಿಗಳನ್ನು ನೆನಪಿನಲ್ಲಿಡಿ!


* ಮನೆಯೊಳಗೆ ಚಪ್ಪಲಿ: 
ಮನೆ ಪ್ರವೇಶಿಸಿದ ಕೂಡಲೇ ಅನೇಕರು ಶೂ, ಚಪ್ಪಲಿಗಳನ್ನು ಅಲ್ಲಿ ಇಲ್ಲಿ ಎಸೆಯುತ್ತಾರೆ. ಹೀಗೆ ಮಾಡುವುದರಿಂದ ಶತ್ರುಗಳ ಸಂಖ್ಯೆ ಹೆಚ್ಚುತ್ತದೆ ಮತ್ತು ಶತ್ರುಗಳು ಯಾವಾಗಲೂ ನಿಮಗೆ ತೊಂದರೆ ಕೊಡುತ್ತಲೇ ಇರುತ್ತಾರೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.