2023 ರಲ್ಲಿ ಈ ರಾಶಿಯವರನ್ನು ಮತ್ತೆ ಕಾಡಲಿದ್ದಾನೆ ಶನಿದೇವ .! ಬಹಳ ಎಚ್ಚರಿಕೆಯಿಂದ ಇರಬೇಕು ಈ ಎರಡು ರಾಶಿಯವರು
ಶನಿ ಧೈಯ್ಯಾ ಎರಡೂವರೆ ವರ್ಷಗಳವರೆಗೆ ಇರುತ್ತದೆ. ಅಂದರೆ ಎರಡೂವರೆ ವರ್ಷಗಳವರೆಗೆ ಶನಿದೇವ ವ್ಯಕ್ತಿಯನ್ನು ಬಿಡದೇ ಕಾಡುತ್ತಾನೆ. ಈ ಸಂದರ್ಭದಲ್ಲಿ ಶನಿಯ ವಕ್ರ ದೃಷ್ಟಿ ವ್ಯಕ್ತಿಯ ಮೇಲೆ ಬೀಳುತ್ತದೆ ಎಂದು ಹೇಳಲಾಗುತ್ತದೆ.
ಬೆಂಗಳೂರು : ನವಗ್ರಹಗಳ ಪೈಕಿ ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಶನಿ ಎರಡೂವರೆ ವರ್ಷವನ್ನು ತೆಗೆದುಕೊಳ್ಳುತ್ತಾನೆ. ಇದೀಗ ಮಕರ ರಾಶಿಯಲ್ಲಿರುವ ಶನಿದೇವ ಜನವರಿ 17 ರಂದು ತನ್ನ ರಾಶಿಯನ್ನು ಬದಲಾಯಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಂಭ ರಾಶಿಯಲ್ಲಿ ಜನವರಿ 29, 2025 ರವರೆಗೆ ಇರಲಿದ್ದಾನೆ. ಪ್ರಸ್ತುತ, ಮಿಥುನ ಮತ್ತು ತುಲಾ ರಾಶಿಯವರ ಜಾತಕದಲ್ಲಿ ಎರಡೂವರೆ ಶನಿ ಅಥವಾ ಶನಿ ಧೈಯ್ಯಾ ನಡೆಯುತ್ತಿದೆ. ಶನಿಯು ರಾಶಿ ಬದಲಾಯಿಸುವುದರೊಂದಿಗೆ ಈ ಎರಡು ರಾಶಿಯವರು ಶನಿ ದೆಸೆಯಿಂದ ಮುಕ್ತಿ ಹೊಂದಲಿದ್ದಾರೆ. ಆದರೆ ಶನಿ ಮಹಾತ್ಮ ಕುಂಭ ರಾಶಿಯನ್ನು ಪ್ರವೇಶಿಸುವುದರೊಂದಿಗೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ದೆಸೆ ಆರಂಭವಾಗಲಿದೆ.
ಎರಡೂವರೆ ಶನಿ ಅಥವಾ ಶನಿ ಧೈಯ್ಯಾ ಎಂದರೇನು ? :
ಶನಿಯ ಸಾಡೇಸಾತಿ ಏಳೂವರೆ ವರ್ಷಗಳವರೆಗೆ ಇರುತ್ತದೆ. ಅದರಲ್ಲಿ ಒಂದು ರಾಶಿಯು ಮುಂದೆ ಮತ್ತು ಒಂದು ರಾಶಿಯು ತನ್ನ ಸ್ಥಾನದಿಂದ ಹಿಂದುಳಿದಂತೆ ಕಾಣುತ್ತದೆ. ಶನಿ ಧೈಯ್ಯಾ ಎರಡೂವರೆ ವರ್ಷಗಳವರೆಗೆ ಇರುತ್ತದೆ. ಅಂದರೆ ಎರಡೂವರೆ ವರ್ಷಗಳವರೆಗೆ ಶನಿದೇವ ವ್ಯಕ್ತಿಯನ್ನು ಬಿಡದೇ ಕಾಡುತ್ತಾನೆ. ಈ ಸಂದರ್ಭದಲ್ಲಿ ಶನಿಯ ವಕ್ರ ದೃಷ್ಟಿ ವ್ಯಕ್ತಿಯ ಮೇಲೆ ಬೀಳುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : Ashubh Yog : ಈ ಯೋಗದಲ್ಲಿ ಹುಟ್ಟಿದವರ ಕೈಯಲ್ಲಿ ನಿಲ್ಲುವುದಿಲ್ಲ ಹಣ : ಅದಕ್ಕೆ ಇಲ್ಲಿದೆ ಪರಿಹಾರ
ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರು ಈ ವಿಷಯಗಳ ಬಗ್ಗೆ ಗಮನ ಹರಿಸಬೇಕು :
ಅಹಂಕಾರವನ್ನು ಶನಿದೇವ ಎಂದಿಗೂ ಸಹಿಸುವುದಿಲ್ಲ. ಈ ಕಾರಣದಿಂದಾಗಿ ಅಹಂಕಾರವನ್ನು ತ್ಯಜಿಸಬೇಕು. ಸುಖಾ ಸುಮ್ಮನೆ ಘರ್ಷಣೆಗಳಲ್ಲಿ ಭಾಗಿಯಾಗಬಾರದು. ಇದರಿಂದ ಪರಸ್ಪರ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ನೀವು ಅಂದು ಕೊಂಡ ಗುರಿಯನ್ನು ಕಠಿಣ ಪರಿಶ್ರಮದ ಮೂಲಕವೇ ಸಾಧಿಸಬೇಕು. ಹಾಗಾದರೆ ಮಾತ್ರ ನಿಮಗೆ ಬೇಕಾದ ಫಲಿತಾಂಶ ಸಿಗುವುದು ಸಾಧ್ಯವಾಗುತ್ತದೆ. ಲಾಭವಾಗುತ್ತದೆ ಎಂಬ ಕಾರಣಕ್ಕೆ ಅನೈತಿಕ ಕೆಲಸ ಮಾಡಲು ಹೋಗಬೇಡಿ. ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುವುದು ಅಗತ್ಯ.
ಅಲ್ಲದೆ ನಿಮ್ಮ ದಿನಚರಿಯನ್ನು ಉತ್ತಮವಾಗಿ ಇರಿಸಿಕೊಳ್ಳಿ. ಯೋಗ ಮತ್ತು ಧ್ಯಾನವನ್ನು ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಿಸಬೇಕು. ಏಕೆಂದರೆ ಕೋಪದ ಭರದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಸುಲಭವಾಗಿ ಜೀರ್ಣವಾಗುವಂಥಹ ಆಹಾರವನ್ನೇ ಸೇವಿಸಿ. ಮಾತ್ರವಲ್ಲ ಆರೋಗ್ಯಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸಿ. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ : Swapna Shastra : ನಿಮ್ಮ ಕನಸಿನಲ್ಲಿ ಸಾವು ಅಥವಾ ಮೃತ ದೇಹ ಕಂಡರೆ ಏನು ಅರ್ಥ ಗೊತ್ತಾ? ಇಲ್ಲಿದೆ ನೋಡಿ
ಸಮಸ್ಯೆ ಪರಿಹಾರಕ್ಕೆ ಏನು ಮಾಡಬೇಕು ? :
1. ಸುಂದರಕಾಂಡವನ್ನು ಪಠಿಸಿ.
2. ಪ್ರತಿ ಶನಿವಾರ ಸಂಜೆ ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ.
3. ಸಾಧ್ಯವಾದರೆ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಂಗವಿಕಲರಿಗೆ, ಬಡ ಜನರಿಗೆ ಸಹಾಯ ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.