ಕನಸಿನಲ್ಲಿ ಚಂದ್ರನನ್ನು ಯಾವ ರೀತಿ ಕಂಡರೆ ಏನು ಫಲ!
Moon Dream Meaning: ಯಾವುದೇ ಒಬ್ಬ ವ್ಯಕ್ತಿ ಕಣ್ತುಂಬ ನಿದ್ರೆ ಮಾಡುವಾಗ ಕನಸು ಕಾಣುತ್ತಾನೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕಾಣುವ ಕೆಲವು ಸನ್ನಿವೇಶಗಳು ನಮ್ಮ ಭೂತ, ಭವಿಷ್ಯದ ಬಗ್ಗೆಯೂ ಮಾಹಿತಿ ನೀಡುತ್ತದೆ ಎಂದು ಹೇಳಲಾಗುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನ ಅರ್ಥಗಳನ್ನು ಕೂಡ ಉಲ್ಲೇಖಿಸಲಾಗಿದೆ.
Moon Dream Meaning: ಪ್ರತಿಯೊಬ್ಬ ಮನುಷ್ಯನೂ ಕನಸು ಕಾಣುತ್ತಾನೆ. ಕನಸಿಗೂ ನಮ್ಮ ಭವಿಷ್ಯಕ್ಕೂ ಮಹತ್ತರವಾದ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರಿಗೂ ಕನಸು ಒಂದೇ ರೀತಿ ಆಗಿರುವುದಿಲ್ಲ. ಪದೇ ಪದೇ ಒಂದೇ ರೀತಿಯ ಕನಸುಗಳು ಕೂಡ ಬೀಳುವುದಿಲ್ಲ. ಆದರೆ, ಸ್ವಪ್ನ ಶಾಸ್ತ್ರದಲ್ಲಿ ಕನಸಿನ ಅರ್ಥಗಳನ್ನು ಕೂಡ ಉಲ್ಲೇಖಿಸಲಾಗಿದೆ. ಇಂದು ಈ ಲೇಖನದಲ್ಲಿ ಕನಸಿನಲ್ಲಿ ಚಂದ್ರನನ್ನು ನೋಡಿದರೆ ಏನು ಫಲ ಎಂದು ತಿಳಿಯೋಣ...
ವಾಸ್ತವವಾಗಿ, ಕನಸಿನಲ್ಲಿ ಚಂದ್ರನನ್ನು ಕಾಣುವುದು ಶುಭವೋ, ಅಶುಭವೋ ಎಂಬ ಗೊಂದಲ ನಿಮ್ಮಲ್ಲಿ ಇರಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಚಂದ್ರನನ್ನು ನೋಡುವುದು ತುಂಬಾ ಮಂಗಳಕರ. ಅತಿ ಶೀಘ್ರದಲ್ಲೇ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಆದರೆ, ನೀವು ಕನಸಿನಲ್ಲಿ ಚಂದ್ರನ ಯಾವ ರೂಪವನ್ನು ನೋಡಿದರೆ ಏನು ಫಲ ಎಂದು ತಿಳಿಯಿರಿ.
ಕನಸಿನಲ್ಲಿ ಅರ್ಧ ಚಂದ್ರನ ಗೋಚರ:
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಅರ್ಧ ಚಂದ್ರನ ಗೋಚಾರವು ನಿಮ್ಮ ವೃತ್ತಿ ರಂಗದಲ್ಲಿ ತಲೆದೋರಿರುವ ಸಮಸ್ಯೆಗಳು ಶೀಘ್ರದಲ್ಲೇ ಪರಿಹಾರವಾಗಲಿವೆ ಎಂಬುದನ್ನು ಸೂಚಿಸುತ್ತದೆ. ಮಾತ್ರವಲ್ಲ, ನೀವು ಯಾವುದೇ ಹೊಸ ವ್ಯಾಪಾರವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಕನಸಿನಲ್ಲಿ ಅರ್ಧ ಚಂದ್ರನ ಗೋಚರ ಅದೃಷ್ಟದ ಸಂಕೇತವಾಗಿದೆ.
ಇದನ್ನೂ ಓದಿ- Dream Astrology : ನೀವು ಈ ರೀತಿಯ ಕನಸುಗಳು ಕಂಡರೆ ನಿಮಗೆ ಅದೃಷ್ಟ : ಜೀವನವೇ ಬದಲಾಗುತ್ತೆ!
ಹುಣ್ಣಿಮೆ ಚಂದ್ರ:
ಹುಣ್ಣಿಮೆ ಚಂದ್ರನನ್ನು ನೋಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕನಸಿನಲ್ಲಿ ಹುಣ್ಣಿಮೆ ಚಂದ್ರನ ದರ್ಶನ ನಿಮ್ಮ ಮನದ ಬಯಕೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂಬುದನ್ನು ಸೂಚಿಸುತ್ತದೆ.
ಮೋಡಗಳ ನಡುವೆ ಚಂದ್ರ:
ಕನಸಿನಲ್ಲಿ ಮೋಡಗಳ ನಡುವೆ ಚಂದ್ರನನ್ನು ಕಂಡರೆ ನೀವು ನಿಮ್ಮ ಗುರಿಯನ್ನು ಸಾಧಿಸಲು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ. ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸಿನ ಕದತಟ್ಟಬಹುದು ಎಂದರ್ಥ.
ಕೆಂಪು ಚಂದ್ರ:
ಕನಸಿನಲ್ಲಿ ಕೆಂಪು ಚಂದ್ರನ ದರ್ಶನವು ನಿಮ್ಮ ಮನಸ್ಥಿತಿಯನ್ನು ಬಿಂಬಿಸುತ್ತದೆ. ಈ ಸಂದರ್ಭದಲ್ಲಿ ವಿವಾದಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀವು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಇದು ಸೂಚಿಸುತ್ತದೆ.
ಇದನ್ನೂ ಓದಿ- ಕನಸಿನಲ್ಲಿ ಪಿತೃಗಳನ್ನು ಕಾಣುವುದು ಶುಭವೋ ಅಶುಭವೋ ?
ಚಂದ್ರ ಇದ್ದಕ್ಕಿದ್ದಂತೆ ಮರೆಯಾಗುವುದು:
ಕನಸಿನಲ್ಲಿ ಚಂದ್ರ ಇದ್ದಕ್ಕಿದ್ದಂತೆ ಮರೆಯಾಗುವುದನ್ನು ಕಾಣುವುದು ತುಂಬಾ ಅಮಂಗಳಕರ. ಇದು ನಿಮ್ಮ ಜೀವನದಲ್ಲಿ ಅತಿ ಶೀಘ್ರದಲ್ಲಿಯೇ ಸಂಕಷ್ಟಗಳು ಎದುರಾಗಬಹುದು ಎಂಬುದರ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.