Scorpion in dreams : ರಾತ್ರಿ ಒಳ್ಳೆ ನಿದ್ರೆ ಬಂದ್ರೆ ಸಾಕು. ಯಾವುದೇ ಕೆಟ್ಟ ಕನಸು ಬೀಳದೇ ಇರಲಿ ಅಂತ ಪ್ರತಿಯೊಬ್ಬರೂ ಕೂಡ ದೇವರಿಗೆ ನಮಸ್ಕರಿಸಿ ನಿದ್ದೆ ಮಾಡುತ್ತಾರೆ. ಆದ್ರೆ ಕೆಲವೊಮ್ಮೆ ಕಾಣೋ ಕನಸು ಇಡೀ ರಾತ್ರಿಯ ನಿದ್ದೆಯನ್ನ ನುಂಗಿ ನೀರು ಕುಡಿದು ಬಿಡುತ್ತೆ ಅಂದ್ರೆ ತಪ್ಪಿಲ್ಲ ನೋಡಿ. ಹೌದು ಕೆಲವು ಕನಸುಗಳು ನಿಜವಾಗಿ ಬಿಡುತ್ತೆ ಅಂತ ಅದರ ಯೋಚನೆಯಲ್ಲೇ ಕೆಲವರು ಮಾನಸಿಕವಾಗಿಯೂ ಕೊರಗಿಹೋಗುತ್ತಾರೆ.


COMMERCIAL BREAK
SCROLL TO CONTINUE READING

ದೇವರೇ ಯಾಕಪ್ಪ ಇಂತಹ ಕೆಟ್ಟ ಡ್ರೀಮ್ ಅಂತ ದೇವರ ಮೊರೆ ಹೋಗಿ ಪೂಜೆ ಹೋಮ ಅಂತ ಮಾಡಿಸಿಬಿಡುತ್ತಾರೆ. ಕೆಲವೊಂದು ವಸ್ತು, ಪ್ರಾಣಿಗಳು ಹೀಗೆ ಹಲವು ಕನಸಿನಲ್ಲಿ ಕಾಣಬಾರದು ಕಂಡರೆ ಕೆಟ್ಟದ್ದು ಜೀವನದಲ್ಲಿ ನಡೆಯುತ್ತೆ ಅಂತಾರೆ. ಅಂತೆಯೇ ನಿಮ್ಮ ಕನಸಿನಲ್ಲಿ ಕಪ್ಪು ಬಣ್ಣದ ಚೇಳು ಕಂಡಿದ್ದೀಯ..? ಚೇಳುಗಳು ಪ್ರಕೃತಿಯಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ ಎಂದು ನಮಗೆ ತಿಳಿದಿದೆ.


ಇದನ್ನೂ ಓದಿ: Astro Tips: ಈ ರಾಶಿಯವರಿಗೆ ದೇವರ ಕೃಪೆಯಿಂದ ಅದೃಷ್ಟದ ಜೊತೆಗೆ ಧನಲಾಭವಾಗಲಿದೆ!


ಸಾಮಾನ್ಯ ನಿಯಮದಂತೆ, ನಿಮ್ಮ ಕನಸಿನಲ್ಲಿ ಚೇಳು ಕಾಣಿಸಿಕೊಂಡಾಗ ನೀವು ಬಹಳ ಕೆಟ್ಟ ಸಮಯವನ್ನು ಅನುಭವಿಸಲಿದ್ದೀರಿ ಅಂತಾನೂ ಹೇಳಲಾಗುತ್ತೆ. ಜೊತೆಗೆ ಕನಸಿನಲ್ಲಿ ಚೇಳು ಬಂದರೆ ಸಂಪತ್ತಿನ ಸೂಚನೆ ಅಂತಾನೂ ಹೇಳಲಾಗುತ್ತೆ. ಒಂದು ಅರ್ಥದಲ್ಲಿ ಹೇಳೋದಾದರೆ ಇಂತಹ ಕನಸು ಆತಂಕವನ್ನು ಉಂಟುಮಾಡುವ ದುಃಸ್ವಪ್ನವಾಗಿರುತ್ತದೆ. ಅದೇನೇ ಇರಲಿಪ್ರಾಕ್ಟಿಕಲ್ ಆಗಿ ಯೋಚಿಸಿ ಏನೇ ಆದರೂ ಅನುಭವಿಸಲು ನಾವು ಸಿದ್ದರಾಗಿರಬೇಕು ಅಂತ ಮುಂದೆ ಸಾಗೋದು ಒಳಿತು. ಸುಮ್ಮನೆ ಯೋಚಿಸಿ ಮಾನಸಿಕ ಹಿಂಸೆ ಅನುಭವಿಸೋದು ಯಾಕೆ ಅಲ್ಲವೇ..?https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ