ಬೆಂಗಳೂರು : ದೇವಗುರು ಬೃಹಸ್ಪತಿಯನ್ನು ಸಂಪತ್ತು, ಆಸ್ತಿ, ಶಿಕ್ಷಣ, ಮಕ್ಕಳು, ಜೀವನ ಸಂಗಾತಿ ಮತ್ತು ಉನ್ನತ ಸ್ಥಾನದ ಪ್ರತೀಕ ಎಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಈ ಗ್ರಹವು ಪ್ರಬಲ ಸ್ಥಾನದಲ್ಲಿದ್ದರೆ, ಮಾಡುವ ಕೆಲಸಗಳಲ್ಲಿ ಶುಭ ಫಲಿತಾಂಶಗಳನ್ನೇ ನೀಡುತ್ತದೆ. ಪ್ರತಿಯೊಂದು ಗ್ರಹವು ಕೆಲವು ರಾಶಿಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಗ್ರಹವು ಉದಯಿಸುವಾಗ ಅಥವಾ ಅಸ್ತವಾದಾಗ ಅದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಸ್ತವಾಗಿರುವ ಗುರು ಮಾರ್ಚ್ ನಲ್ಲಿ ಉದಯಿಸಲಿದ್ದಾನೆ. ಗುರು ಉದಯವಾಗುತ್ತಿದ್ದಂತೆಯೇ ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆ. 


COMMERCIAL BREAK
SCROLL TO CONTINUE READING

ಕಟಕ ರಾಶಿ : 
ಗುರುವಿನ ಉದಯದಿಂದ ಕರ್ಕಾಟಕ ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಅದೃಷ್ಟ ಜೊತೆಗಿರುವ ಕಾರಣದಿಂದಾಗಿ ಅಂದುಕೊಂಡ ಕಾರ್ಯವನ್ನು ಪೂರೈಸುವುದು ಸಾಧ್ಯವಾಗುತ್ತದೆ. ಮಾತ್ರವಲ್ಲ ಆ ಕೆಲಸದಲ್ಲಿ ಯಶಸ್ಸು ಪಡೆಯುವುದು ಕೂಡಾ ಸಾಧ್ಯವಾಗುತ್ತದೆ. 


ಇದನ್ನೂ ಓದಿ : Vastu Tips : ನಿಮ್ಮ ಮನೆಯ ಕನ್ನಡಿಯಲ್ಲಿ ಅಡಗಿದೆ ನೀವು ಶ್ರೀಮಂತರಾಗುವ ರಹಸ್ಯ, ಅದೃಷ್ಟಕ್ಕೆ ಈ ಕೆಲಸ


ಮಿಥುನ ರಾಶಿ :
ಗುರುಗ್ರಹದ ಉದಯದಿಂದ ಮಿಥುನ ರಾಶಿಯವರ ಪಾಲಿಗೆ ಒಳ್ಳೆಯ ದಿನಗಳ ಆಗಮನವಾಗಲಿದೆ. ವೃತ್ತಿಜೀವನದ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿರಲಿದೆ. ಹೊಸ ಉದ್ಯೋಗಾವಕಾಶಗಳು ಲಭ್ಯವಾಗಲಿದೆ.  


ಕುಂಭ ರಾಶಿ :
ಗುರುಗ್ರಹದ ಉದಯದಿಂದಾಗಿ ಕುಂಭ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವಿಶೇಷವಾಗಿ ಶಿಕ್ಷಣ, ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಬಹಳಷ್ಟು ಪ್ರಯೋಜನ ಸಿಗಲಿದೆ. 


ಇದನ್ನೂ ಓದಿ : Astro Tips: ಲಾಲ್ ಕಿತಾಬ್‌ನ ಈ ಸಲಹೆ ಪಾಲಿಸಿದ್ರೆ ನಿಮ್ಮ ಬಡತನ ದೂರವಾಗಿ ಸಿರಿವಂತಿಕೆ ಹೆಚ್ಚುತ್ತದೆ!


ಮೀನ ರಾಶಿ :
ಗುರುಗ್ರಹದ ಉದಯದಿಂದಾಗಿ ಮೀನ ರಾಶಿಯವರಿಗೆ ಅನಿರೀಕ್ಷಿತ ಲಾಭವಾಗಲಿದೆ. ಬಹಳ ದಿನಗಳಿಂದ ಕೈ ಸೇರದೆ ಹೊರಗೆ ಉಳಿದಿರುವ ಹಣ ಕೈ ಸೇರಲಿದೆ. ಇದರೊಂದಿಗೆ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಬಿಕ್ಕಟ್ಟನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ. ಈ ಸಮಯದಲ್ಲಿ, ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. 


 


https://bit.ly/3hDyh4G


Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.