ಜನ್ಮಾಷ್ಟಮಿ 2022 ಶುಭ ಯೋಗ: ಈ ನಾಲ್ಕು ರಾಶಿಯವರಿಗೆ ಸಿಗಲಿದೆ ಶ್ರೀ ಕೃಷ್ಣನ ವಿಶೇಷ ಆಶೀರ್ವಾದ
Janmashtami 2022 Auspicious Yoga: ಈ ಬಾರಿಯ ಜನ್ಮಾಷ್ಟಮಿಯ ದಿನವು ಕೆಲವು ರಾಶಿಚಕ್ರದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಜನ್ಮಾಷ್ಟಮಿಯಲ್ಲಿ ರೂಪುಗೊಳ್ಳುತ್ತಿರುವ ಶುಭ ಯೋಗದಿಂದ ನಾಲ್ಕು ರಾಶಿಯವರು ಶ್ರೀಕೃಷ್ಣನ ಅನುಗ್ರಹದಿಂದ ಬಹಳಷ್ಟು ಯಶಸ್ಸು ಮತ್ತು ಅಪಾರ ಸಂಪತ್ತನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭ ಯೋಗ: ಈ ವರ್ಷ ಜನ್ಮಾಷ್ಟಮಿಯಂದು 8 ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಅದರಲ್ಲೂ ಆಗಸ್ಟ್ 19 ರ ಮಧ್ಯರಾತ್ರಿಯಲ್ಲಿ ರೂಪುಗೊಂಡ ಯೋಗ ಬಹಳ ವಿಶೇಷವಾಗಿದೆ. ಈ ಯೋಗದಲ್ಲಿ ಶ್ರೀ ಕೃಷ್ಣನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸುಖ-ಸಂತೋಷ- ಸಮೃದ್ಧಿ ತುಂಬಲಿದೆ ಎಂದು ನಂಬಲಾಗಿದೆ. ಇದೇ ವೇಳೆ ಶ್ರೀಕೃಷ್ಣನ ಜನ್ಮಾಷ್ಟಮಿಯಂದು ರೂಪುಗೊಳ್ಳುತ್ತಿರುವ ಶುಭ ಯೋಗದಿಂದ ನಾಲ್ಕು ರಾಶಿಯವರು ಶ್ರೀಕೃಷ್ಣನ ಅನುಗ್ರಹದಿಂದ ಬಹಳಷ್ಟು ಯಶಸ್ಸು ಮತ್ತು ಅಪಾರ ಸಂಪತ್ತನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಜನ್ಮಾಷ್ಟಮಿ 2022 ಶುಭ ಯೋಗ- ಈ ನಾಲ್ಕು ರಾಶಿಯವರಿಗೆ ಸಿಗಲಿದೆ ಶ್ರೀ ಕೃಷ್ಣನ ವಿಶೇಷ ಆಶೀರ್ವಾದ :
ವೃಷಭ ರಾಶಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ರಾತ್ರಿ ಚಂದ್ರನು ವೃಷಭ ರಾಶಿಯಲ್ಲಿ ಇರುತ್ತಾನೆ. ಇದು ವೃಷಭ ರಾಶಿಯವರ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ಬಹಳ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವರು. ಆರ್ಥಿಕ ಭಾಗವು ಪ್ರಯೋಜನಕಾರಿ ಆಗಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ದೀರ್ಘಕಾಲದ ಸ್ಥಗಿತಗೊಂಡ ಯೋಜನೆಗಳು ಪೂರ್ಣಗೊಳ್ಳಲಿವೆ.
ಇದನ್ನೂ ಓದಿ- Janmashtami 2022: ಜನ್ಮಾಷ್ಟಮಿಯಂದು ರೂಪುಗೊಳ್ಳಲಿದೆ ವಿಶೇಷ ಯೋಗ
ಕರ್ಕಾಟಕ ರಾಶಿ: 2022ರ ಕೃಷ್ಣ ಜನ್ಮಾಷ್ಟಮಿಯು ಕರ್ಕಾಟಕ ರಾಶಿಯವರ ಜೀವನದಲ್ಲಿ ಸಂತೋಷದ ಹೊಳೆಯನ್ನೇ ಹರಿಸಲಿದೆ. ಆರ್ಥಿಕ ಮುಗ್ಗಟ್ಟುಗಳು ಕೊನೆಗೊಳ್ಳಲಿವೆ. ಜೊತೆಗೆ ಆದಾಯ ಕೂಡ ಹೆಚ್ಚಾಗಲಿದ್ದು ಮನೆ-ವಾಹನ ಯೋಗವೂ ಇದೆ.
ಸಿಂಹ ರಾಶಿ: ಈ ಜನ್ಮಾಷ್ಟಮಿಯಲ್ಲಿ ಶ್ರೀಕೃಷ್ಣನು ಸಿಂಹ ರಾಶಿಯವರಿಗೆ ಅಪಾರ ದಯೆ ತೋರುತ್ತಾನೆ. ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ನೀವು ಕೆಲಸ ಮಾಡುವ ಜಾಗದಲ್ಲಿ ಗೌರವ ವೃದ್ಧಿಯಾಗಲಿದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಆರೋಗ್ಯಕರ ವಾತಾವರಣದಿಂದ ನಿಮ್ಮ ಮನಸ್ಸೂ ಕೂಡ ಸಂತೋಷಗೊಳ್ಳಲಿದೆ.
ಇದನ್ನೂ ಓದಿ- Krishna Janmashtami: ಈ ದಿನದಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಅನಿರೀಕ್ಷಿತ ಮೂಲಗಳಿಂದ ಧನಲಾಭಾವಾಗಲಿದೆ. ಸಂಬಂಧಗಳಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ. ಜನ್ಮಾಷ್ಟಮಿ ಪೂಜೆಯ ನಂತರ ಪಂಚಾಮೃತವನ್ನು ಸೇವಿಸಿದರೆ ಹೆಚ್ಚಿನ ಪ್ರಯೋಜನವಾಗುತ್ತದೆ. ನೀವು ಮಾಡುವ ಕೆಲಸದಲ್ಲಿ ಕುಟುಂಬದವರು ಮಾತ್ರವಲ್ಲದೆ ಸ್ನೇಹಿತರ ಸಹಕಾರವೂ ಇರಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ