ನವದೆಹಲಿ: ಯಾವುದೇ ಒಬ್ಬ ವ್ಯಕ್ತಿಯ ಜೀವನದಲ್ಲಿ ಜಾತಕವು ಬಹಳ ಮುಖ್ಯವಾದ ಪಾತ್ರವನ್ನು ಹೊಂದಿರುತ್ತದೆ. ವ್ಯಕ್ತಿಯ ಪ್ರಗತಿಯು ಅವನ ಜಾತಕದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜಾತಕದಲ್ಲಿ ಸೂರ್ಯನ ಗ್ರಹ ದುರ್ಬಲನಾಗಿದ್ದರೆ ಆ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೌಕರಿಯಲ್ಲಿ ಮೇಲಧಿಕಾರಿಗಳ ಮೂದಲಿಕೆಗೆ ಗುರುಯಾಗುವುದು, ಮೇಲಧಿಕಾರಿಗಳು ಮತ್ತು ಉದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಸಾಧ್ಯವಾಗದಿರುವುದು, ಕಷ್ಟಪಟ್ಟು ಕೆಲಸ ಮಾಡಿದರೂ ಬಡ್ತಿ ಸಿಗದಿರುವುದು ಮತ್ತು ವ್ಯಾಪಾರದಲ್ಲಿ ಲಾಭ ಪಡೆಯಲು ಸಾಧ್ಯವಾಗದಿರುವುದು ಇತ್ಯಾದಿ ಸಮಸ್ಯೆಗಳು ಕಾಡುತ್ತವೆ.


COMMERCIAL BREAK
SCROLL TO CONTINUE READING

ಗ್ರಹದ ದೌರ್ಬಲ್ಯದಿಂದ ಇದು ವ್ಯಕ್ತಿಯ ಕೆಲಸದ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಗ್ರಹವು ದುರ್ಬಲಗೊಂಡರೆ ಯಾವ ಪರಿಣಾಮ ಬೀರುತ್ತದೆ ಮತ್ತು ಅದನ್ನು ಬಲಶಾಲಿಯಾಗಿ ಮಾಡುವ ಮೂಲಕ ವ್ಯಕ್ತಿಯು ಹೇಗೆ ಯಶಸ್ಸನ್ನು ಸಾಧಿಸಬಹುದು ಎಂಬುದರ ಬಗ್ಗೆ ತಿಳಿಯಿರಿ.


ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಸ್ನೇಕ್‌ ಪ್ಲಾಂಟ್‌ ಇದೇನಾ? ಹಾಗಾದ್ರೆ ಇದರಿಂದಾಗುವ ತೊಂದರೆಗಳನ್ನು ತಿಳಿಯಿರಿ!


ಸೂರ್ಯನ ದೌರ್ಬಲ್ಯದ ಸ್ಥಾನ ತಿಳಿಯಿರಿ: ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಗ್ರಹ ದುರ್ಬಲವಾಗಿದ್ದರೆ, ಆತನ ಆತ್ಮವಿಶ್ವಾಸ ಕ್ರಮೇಣ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ರೀತಿಯ ನಷ್ಟಗಳನ್ನು ಎದುರಿಸಬೇಕಾಗಬಹುದು. ಯಾವುದೇ ಯಶಸ್ಸನ್ನು ಸಾಧಿಸಲು ವ್ಯಕ್ತಿ ಕಷ್ಟಪಡಬೇಕಾಗುತ್ತದೆ. ಸೂರ್ಯನ ಗ್ರಹದ ಸ್ಥಾನವನ್ನು ಸುಧಾರಿಸುವ ಮೂಲಕ ವ್ಯಕ್ತಿಯು ಈ ತೊಂದರೆಗಳನ್ನು ನಿವಾರಿಸಲು ಕೆಲವು ಕ್ರಮಗಳಿವೆ. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ.


ಜಾತಕದಲ್ಲಿ ಸೂರ್ಯನನ್ನು ಬಲಪಡಿಸುವ ಮಾರ್ಗಗಳು: ಯಾವುದೇ ಒಬ್ಬ ವ್ಯಕ್ತಿಯು ಜಾತಕದಲ್ಲಿ ಸೂರ್ಯಗ್ರಹವನ್ನು ಬಲಪಡಿಸಲು ಬಯಸಿದರೆ, ಆತ ಪ್ರತಿದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ಈ ಪರಿಹಾರವನ್ನು ನೀವು ಭಾನುವಾರದಂದು ಮಾಡಬೇಕು. 2ನೇಯದಾಗಿ ವ್ಯಕ್ತಿಯು ಸೂರ್ಯ ದೇವರ ಮಂತ್ರವನ್ನು ಪಠಿಸುತ್ತಿರಬೇಕು. ಭಾನುವಾರ ಬೆಲ್ಲ ಮತ್ತು ತುಪ್ಪವನ್ನು ದಾನ ಮಾಡುವ ಮೂಲಕ ಸೂರ್ಯಗ್ರಹವನ್ನು ಬಲಪಡಿಸಬೇಕು.


ಇದನ್ನೂ ಓದಿ: ತೆಂಗಿನ ಜುಟ್ಟಿನಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.