ಗುರು ಮಾರ್ಗಿ 2022: ದೇವರ ಗುರು ಎಂದೇ ಪರಿಗಣಿತವಾಗಿರುವ ಗುರು ಗ್ರಹವು ಶೀಘ್ರದಲ್ಲೇ ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಬೃಹಸ್ಪತಿಯು ಈ ಸಮಯದಲ್ಲಿ  ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. ಅವರಿಗೆ ವೃತ್ತಿ ಜೀವನದಲ್ಲಿ ಯಶಸ್ಸಿನ ಜೊತೆಗೆ ಅಪಾರ ಸಂಪತ್ತನ್ನು ಸಹ ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮೂರು ರಾಶಿಯ ಜನರು ಬಂಪರ್ ಲಾಭ ಪಡೆಯಲಿದ್ದಾರೆ ಎನ್ನಲಾಗುತ್ತಿದ್ದು ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...


COMMERCIAL BREAK
SCROLL TO CONTINUE READING

ವೃಷಭ ರಾಶಿಯವರಿಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ:-
ಗುರುವಿನ ಚಲನೆಯಲ್ಲಿ ಬದಲಾವಣೆಯಿಂದಾಗಿ ವೃಷಭ ರಾಶಿಯ ಜನರು ಭಾರೀ ಲಾಭ ಪಡೆಯಲಿದ್ದಾರೆ. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅಷ್ಟೇ ಅಲ್ಲ, ಆಸ್ತಿ, ವಾಹನ ಖರೀದಿಸುವ ಯೋಗವಿದೆ. ಈ ಸಮಯದಲ್ಲಿ ಈ ರಾಶಿಯವರು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ.


ಇದನ್ನೂ ಓದಿ- ದೀಪಾವಳಿ ಭವಿಷ್ಯ: ಅಕ್ಟೋಬರ್‌ನಲ್ಲಿ ಬಂಪರ್ ಲಾಭ ಗಳಿಸಲಿದ್ದಾರೆ ಈ ರಾಶಿಯ ಜನ


ಮಿಥುನ ರಾಶಿಯವರಿಗೆ ಹೊಸ ಉದ್ಯೋಗಾವಕಾಶ ಸಿಗಬಹುದು:
ಬೃಹಸ್ಪತಿ ಸಂಚಾರದಿಂದ ಮಿಥುನ ರಾಶಿಯವರಿಗೆ ಹೊಸ ಹೊಸ ಉದ್ಯೋಗಾವಕಾಶ ದೊರೆಯಬಹುದು. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ನೀವು ಇನ್ಕ್ರಿಮೆಂಟ್ ಅಥವಾ ಬೋನಸ್ ಪಡೆಯಬಹುದು. ವ್ಯಾಪಾರದಲ್ಲಿ ಲಾಭ ಮತ್ತು ಹೊಸ ವ್ಯವಹಾರಗಳನ್ನು ಕಾಣಬಹುದು. ಕುಟುಂಬದಲ್ಲಿ ಏಕತೆ ಇರುತ್ತದೆ, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುತ್ತೀರಿ.


ಇದನ್ನೂ ಓದಿ- ಶನಿಯ ಕೃಪೆಯಿಂದ ರೂಪುಗೊಳ್ಳಲಿದೆ 'ಅಖಂಡ ಸಾಮ್ರಾಜ್ಯ ರಾಜಯೋಗ' ಈ ಮೂರು ರಾಶಿಯವರಿಗೆ ಅದೃಷ್ಟ


ಕರ್ಕಾಟಕ ರಾಶಿಯ ವ್ಯಾಪಾರಸ್ಥರಿಗೆ ಲಾಭ: 
ಗುರುವಿನ ಸಂಚಾರವು ಕರ್ಕಾಟಕ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಬುಸಿನೆಸ್ ಸಂಬಂಧಿತ ಪ್ರಯಾಣಗಳು ಲಾಭದಾಯಕ ಎಂದು ಸಾಬೀತುಪಡಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಗಳಿಸುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.