Jupiter in Aries Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ಕೂಡ ನಿಗದಿತ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಈ ಸಮಯದಲ್ಲಿ ಕೆಲವು ಶುಭ-ಅಶುಭ ಯೋಗಗಳು ಕೂಡ ನಿರ್ಮಾಣವಾಗುತ್ತವೆ. ಪ್ರಸ್ತುತ ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ಶುಭ ಒಂಭತ್ತನೇ ದೃಷ್ಟಿಯನ್ನು ಬೀರುತ್ತಿದ್ದಾನೆ. ಧನು ರಾಶಿಯು ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು, ಅವರ ಅಧಿಪತಿ ದೇವಗುರು. ಈ ಶುಭ ಸಂಯೋಜನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ಬಂಗಾರದ ಸಮಯ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯಲ್ಲಿ ಗುರು ಸಂಕ್ರಮಣ: ಮೂರು ರಾಶಿಯವರಿಗೆ ಭಾಗ್ಯೋದಯದ ಸಮಯ: 
ಮೇಷ ರಾಶಿ: 

ಸದ್ಯ ಸ್ವ ರಾಶಿಯಲ್ಲಿ ಗುರು ಸಂಕ್ರಮಣವಾಗಿದೆ. ಇದಲ್ಲದೆ, ದೇವಗುರು ಬೃಹಸ್ಪತಿಯ ಒಂಬತ್ತನೇ ದೃಷ್ಟಿಯು ಮೇಷ ರಾಶಿಯ ಜನರಿಗೆ ಬಂಗಾರದ ಸಮಯ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಧನು ರಾಶಿಯು ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು, ಇದನ್ನು ಅದೃಷ್ಟದ ಮನೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಸಮಯದಲ್ಲಿ, ಮೇಷ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದು, ಪ್ರಯಾಣದಿಂದ ಲಾಭವಾಗಲಿದೆ.  ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ.  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಯಶಸ್ಸು ನಿಮ್ಮದಾಗಲಿದೆ. 


ಇದನ್ನೂ ಓದಿ- Mangal Gochara: ಸೂರ್ಯನ ರಾಶಿಯಲ್ಲಿ ಮಂಗಳನ ಪ್ರವೇಶ ಈ 4 ರಾಶಿಯವರಿಗೆ ಅದೃಷ್ಟ


ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಏಳನೇ ಮನೆಯಲ್ಲಿ ಗುರು ದೃಷ್ಟಿ ಬೀರುತ್ತಿದ್ದು, ಇದು ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ-ಸಂತೋಷವನ್ನು ತರಲಿದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಬಂಪರ್ ಲಾಭವಾಗಲಿದೆ. ಇನ್ನೂ ವಿವಾಹವಾಗದ ಯುವ ಜನರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಆತ್ಮವಿಶ್ವಾಸದಿಂದ ಮಾಡಿದ ಯಾವುದೇ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. 


ಇದನ್ನೂ ಓದಿ- ಮಿಥುನ ರಾಶಿಗೆ ಬುಧ ಪ್ರವೇಶ: ಈ ರಾಶಿಯವರಿಗೆ ಧನಯೋಗ-ಸಂಪತ್ತು ಹರಿದುಬರುವುದು!


ಸಿಂಹ ರಾಶಿ: 
ದೇವಗುರು ಬೃಹಸ್ಪತಿಯ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೂ ಕೂಡ ಪ್ರತಿ ಕ್ಷೇತ್ರದಲ್ಲೂ ಉತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಹಾಗೂ ಗುರು ನಡುವೆ ಸ್ನೇಹ ಬಂಧನವಿದ್ದು ಈ ರಾಶಿಯವರಿಗೆ ಐದನೇ ಮನೆಯ ದೃಷ್ಟಿ ನೆಟ್ಟಿರುವ ಗುರುವು ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲಿದ್ದಾನೆ. ಉದ್ಯೋಗಿಗಳಿಗೆ ಬಡ್ತಿ ಪ್ರಯೋಜನವಾಗಲಿದೆ. ಒಟ್ಟಾರೆಯಾಗಿ ಇದು ನಿಮಗೆ ಬಂಗಾರದ ಸಮಯ ಎಂತಲೇ ಹೇಳಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.