ದಿನಭವಿಷ್ಯ 02-12-2024: ಸೋಮವಾರದಂದು ಜ್ಯೇಷ್ಠಾ ನಕ್ಷತ್ರ, ಧೃತಿ ಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್ ಶಿವನ ಆಶೀರ್ವಾದ
Today Horoscope 02nd December 2024: ಸೋಮವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಧೃತಿ ಯೋಗ, ಬಾಲವ ಕರಣ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪ್ರತಿಪದಾ ತಿಥಿ, ಸೋಮವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಧೃತಿ ಯೋಗ, ಬಾಲವ ಕರಣ. ಇಂದಿನ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಭರವಸೆಯ ಪ್ರಜ್ಞೆ ಈ ನಿಮ್ಮ ದಿನವನ್ನು ಬೆಳಗಲಿದೆ. ಆರ್ಥಿಕವಾಗಿ ಇಂದು ಕುಟುಂಬದ ಹಿರಿಯರ ಬೆಂಬಲ ದೊರೆಯಲಿದೆ. ಸದಾ ಬೇರೆಯವರಿಗಾಗಿ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ವಿವಾಹಿತರು ಸಂಗಾತಿಯೊಂದಿಗೆ ಉತ್ತಮ ದಿನವನ್ನು ಆನಂದಿಸುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ದೂರದ ಪ್ರಯಾಣವನ್ನು ತಪ್ಪಿಸಿ. ವ್ಯಾಪಾರಸ್ಥರು ಈ ದಿನ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು. ವ್ಯಾಪಾರವನ್ನು ಸುಧಾರಿಸಲು ಹೆಚ್ಚುವರಿ ಹಣವನ್ನ್ ಹೂಡಿಕೆ ಮಾಡಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧಕ್ಕೆ ಗಮನ ಕೊಡಿ. ಹಿಂದಿನ ಹೂಡಿಕೆಗಳಿಂದ ಲಾಭ ನಿರೀಕ್ಷಿಸಬಹುದು.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನಿಮ್ಮ ಕನಸುಗಳನ್ನು ಬರೀ ಕಲ್ಪನೆ ಮಾಡಿಕೊಳ್ಳುವ ಬದಲು ಅವುಗಳನ್ನು ವಾಸ್ತವಿಕ ಆಲೋಚನೆಗಳಿಗೆ ತಿರುಗಿಸಲು ಪ್ರಯತ್ನಿಸಿ. ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯೋನ್ಮುಖರಾಗಿ. ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ನಿಮ್ಮ ಆರೋಗ್ಯವನ್ನು ಹೆಚ್ಚಿಸುವ ದೈಹಿಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಿ. ವ್ಯಾಪಾರದಲ್ಲಿ ಕೆಲವು ಸವಾಲಿನ ಸಮಯವನ್ನು ಎದುರಿಸಬೇಕಾಗಬಹುದು. ಭಾವನಾತ್ಮಕವಾಗಿ ಇಂದು ನಿಮ್ಮನ್ನು ನೀವು ಸುಧಾರಿಸಿಕೊಳ್ಳಬೇಕಾದ ದಿನ.
ಇದನ್ನೂ ಓದಿ- ಮಂಗಳ ಚಂದ್ರ ಯುತಿ: ಈ ರಾಶಿಯವರಿಗೆ ಭೂಮಿ ಪ್ರಾಪ್ತಿ, ಹಠಾತ್ ಧನ ಲಾಭದಿಂದ ಮಿಲೇನಿಯರ್ ಆಗುವ ಯೋಗ
ಸಿಂಹ ರಾಶಿಯವರ ಭವಿಷ್ಯ (Leo Horoscope):
ನಿಮ್ಮನ್ನು ನೀವು ರಿಫ್ರೆಶ್ ಮಾಡಿಕೊಳ್ಳಲು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಧ್ಯಾನ ಮತ್ತು ಯೋಗವನ್ನು ನಿತ್ಯ ರೂಢಿಸಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಹೊಂದಿದ್ದರೆ ಇದನ್ನು ನಿಮ್ಮ ಪೋಷಕರೊಂದಿಗೆ ಚರ್ಚಿಸಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಸವಾಲಿನ ದಿನವಾಗಿದ್ದು, ಈ ಸಂದರ್ಭದಲ್ಲಿ ತಾಳ್ಮೆಯಿಂದ ಇರುವುದು ಒಳ್ಳೆಯದು. ಕಠಿಣ ಸಮಯವನ್ನು ನಿಭಾಯಿಸಲು ಹಣಕಾಸಿನ ಸ್ಥಿರತೆ ನಿರ್ಣಾಯಕವಾಗಲಿದೆ. ಹಾಗಾಗಿ, ಭವಿಷ್ಯದ ತೊಂದರೆಗಳನ್ನು ನಿಭಾಯಿಸಲು ಇಂದು ಹೂಡಿಕೆ ಬಗ್ಗೆ ಗಮನವಹಿಸಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ನಿಮ್ಮ ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಇದು ನಿಮ್ಮ ಒಂಟಿತನದ ಭಾವನೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಆದಾಗ್ಯೂ, ಹಣಕಾಸಿನ ಸವಾಲುಗಳು ಕೆಲೌವ್ ಪ್ರಮುಖ ಕೆಲಸಗಳನ್ನು ಸ್ಥಗಿತಗೊಳಿಸಬಹುದು. ನಿಮ್ಮ ಆಕರ್ಷಕ ವ್ಯಕ್ತಿತ್ಯವು ಮೆಚ್ಚುಗೆಗೆ ಪಾತ್ರವಾಗಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮ್ಮ ಮುಕ್ತ ಮನಸ್ಸು ಮತ್ತು ತಾಳ್ಮೆಗೆ ಸ್ನೇಹಿತರು ಸವಾಲು ಹಾಕಬಹುದು. ನಿಮ್ಮ ಮೌಲ್ಯಗಳಲ್ಲಿ ದೃಢವಾಗಿರಿ. ಪ್ರತಿ ನಿರ್ಧಾರವನ್ನು ತರ್ಕಬದ್ಧವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ಅಜಾಗರೂಕತೆಯಿಂದ ಹಣ ಖರ್ಚು ಮಾಡುವವರಿಗೆ ಆರ್ಥಿಕ ಮುಗ್ಗಟ್ಟು ಎದುರಾಗಬಹುದು.
ಇದನ್ನೂ ಓದಿ- 2025ರಲ್ಲಿ ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ, ಬುಧನಿಂದ ಜಾಗೃತಗೊಳ್ಳಲಿದೆ ಅದೃಷ್ಟ, ಕೈಸೇರಲಿದೆ ಅಪಾರ ಸಂಪತ್ತು
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ದಾನ ಕಾರ್ಯಗಳಲ್ಲಿ ತೊಡಗುವುದರಿಂದ ನಿಮಗೆ ಶಾಂತಿ, ತೃಪ್ತಿಯ ಭಾವನೆ ದೊರೆಯುತ್ತದೆ. ನಿಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಇಡಿ. ಆದಾಗ್ಯೂ, ನಿಮ್ಮ ಕುಟುಂಬವನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಯೋಗ, ಧ್ಯಾನದಿಂದ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಇಡೀ ದಿನ ಹೆಚ್ಚಿನ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಪೋಷಕರೊಂದಿಗೆ ಹಣಕಾಸಿನ ತಂತ್ರಗಳನ್ನು ಚರ್ಚಿಸುವುದನ್ನು ಪರಿಗಣಿಸಿ. ಮೊಂಡುತನದಿಂದ ಕುಟುಂಬದ ಸಾಮರಸ್ಯ ಹದಗೆಡಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ನೀವು ಶಕ್ತಿಯ ಉಲ್ಬಣವನ್ನು ಅನುಭವಿಸುವಿರಿ. ಕೆಲಸದ ಒತ್ತಡವನ್ನು ಸುಲಭವಾಗಿ ನಿಭಾಯಿಸುವಿರಿ. ನಿಮ್ಮ ಸಂಬಂಧಗಳ ಬಗ್ಗೆ ಜಾಗರೂಕರಾಗಿರಿ. ಸಂಸಾರದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ತಪ್ಪಿಸಿ. ನಿಮ್ಮ ಸಂಗಾತಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮ್ಮ ಹೆಚ್ಚಿನ ಆತ್ಮವಿಶ್ವಾಸವನ್ನು ಉತ್ಪಾದಕ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಿ. ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನಿಮ್ಮ ಶಕ್ತಿ ಸ್ಥಿರವಾಗಿ ಉಳಿಯುತ್ತದೆ. ನಿಮ್ಮ ದಿನವನ್ನು ಸ್ಮರಣೀಯವಾಗಿ ಪರಿವರ್ತಿಸಲು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.