Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿಯ ಈ ದಿನ ಬುಧವಾರ ಜ್ಯೇಷ್ಠಾ ನಕ್ಷತ್ರ, ಪ್ರೀತಿ ಯೋಗ ನಿಮ್ಮ ರಾಶಿಗೆ ಹೇಗಿದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರಿಗೆ ಇಂದು ಆನಂದದಾಯಕ ದಿನ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಕುಟುಂಬದ ಸದಸ್ಯರಿಗೆ ಹೊಸ ಉದ್ಯೋಗ ದೊರೆಯಬಹುದು. ಹಣವನ್ನು ಉಳಿಸಲು ಪ್ರಯತ್ನಿಸಿ, ಇಲ್ಲವೇ ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ರಾಶಿಯ ರಾಜಕಾರಣಿಗಳಿಗೆ ಶುಭ ದಿನ. ಆದರೆ, ಉದ್ಯೋಗಸ್ಥರು ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮೇಲಾಧಿಕಾರಿಗಳ ಕೋಪಕ್ಕೆ ತುತ್ತಾಗಬಹುದು. ಸಂಜೆ ವೇಳೆ ಸಂಗಾತಿಯೊಂದಿಗೆ ಡಿನ್ನರ್ ಔಟ್ ಪ್ಲಾನ್ ಮಾಡಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಈ ರಾಶಿಯವರಿಗೆ ಇಂದು ಮಹತ್ವದ ದಿನ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಸಂಗಾತಿಯ ಸಂಪೂರ್ಣ ಬೆಂಬಲ ದೊರೆಯಲಿದೆ. ನಿಮ್ಮ ಕುಟುಂಬದ ಸಮಸ್ಯೆಗಳ ಬಗ್ಗೆ ನೀವು ಸ್ವಲ್ಪ ಗೊಂದಲದಲ್ಲಿರುತ್ತೀರಿ. ಆದಾಗ್ಯೂ, ಸರಿಯಾಗಿ ಯೋಚಿಸಿ ನಿರ್ಧರಿಸಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯ ಜನರಿಗೆ ಇಂದು ಕೆಲಸಗಳು ಅಂದುಕೊಂಡಂತೆ ಮುಗಿದು, ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ಕೌಟುಂಬಿಕ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳಲಿವೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ದಿನ. 


ಇದನ್ನೂ ಓದಿ- ಬುಧ ಸಂಚಾರದಿಂದ ಭದ್ರ ರಾಜಯೋಗ, 5 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಧನಾಗಮನದಿಂದ ಸಂಪತ್ತು ವೃದ್ಧಿ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರಿಗೆ ಇಂದು ಮಿಶ್ರ ಫಲಪ್ರದವಾದ ದಿನ. ವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತರಲ್ಲಿ ಒಬ್ಬರ ಮಾತು ಮನಸ್ಸಿಗೆ ನೋವುಂಟು ಮಾಡಬಹುದು. ಆದರೆ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯ ಜನರಿಗೆ ಇಂದು ವೃತ್ತಿ ಬದುಕಿನಲ್ಲಿ ಅನುಕೂಲಕರ ದಿನ. ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಗೆ ಶುಭ ಫಲಗಳು ದೊರೆಯಲಿವೆ. ಆದರೆ, ಕುಟುಂಬದಲ್ಲಿ ಬೇರೆಯವರೊಂದಿಗೆ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಿ. ಯಾವುದೇ ರೀತಿಯ ಆತುರದ ನಿರ್ಧಾರವನ್ನು ತಪ್ಪಿಸಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯವರಿಗೆ ಇಂದು ಸಂತೋಷದಾಯಕ ದಿನ. ಸಂಗಾತಿಯೊಂದಿಗೆ ನೀವು ಕೆಲವು ಮೋಜಿನ ಕ್ಷಣಗಳನ್ನು ಕಳೆಯುತ್ತೀರಿ. ಹೊಸ ವಾಹನವನ್ನು ಖರೀದಿಸುವ ಬಗ್ಗೆ ಇಂದು ಯೋಚಿಸಬಹುದು. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವುವು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿದರೆ ದಿನ ನಿಮಗೆ ಉತ್ತಮವಾಗಿರುತ್ತದೆ. ಹೊಸ ಕೆಲಸದ ಬಗ್ಗೆ ಯೋಚಿಸುತ್ತಿರುವವರಿಗೆ ಶುಭ ದಿನ. ಕೆಲಸದ ಮೇಲೆ ಹೆಚ್ಚಿನ ಗಮನವಹಿಸುವ ನಿಟ್ಟಿನಲ್ಲಿ ವಿಶ್ರಾಂತಿಗೆ ಸಮಯ ನೀಡುವುದನ್ನು ಮರೆಯಬೇಡಿ. 


ಇದನ್ನೂ ಓದಿ- ಒಂದೇ ನಕ್ಷತ್ರದಲ್ಲಿ ಸೂರ್ಯ ಮತ್ತು ಶುಕ್ರನ ಸಂಚಾರ; ಈ 4 ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!


ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ನಿಮಗೆ ಅತ್ಯಂತ ಫಲಪ್ರದವಾದ ದಿನ. ಕುಟುಂಬಕ್ಕೆ ಹೊಸ ಅತಿಥಿ ಆಗಮನ. ವ್ಯವಹಾರದಲ್ಲಿ ಸ್ಥಗಿತಗೊಂಡಿದ್ದ ಯೋಜನೆಗಳು ವೇಗವನ್ನು ಪಡೆಯಲಿವೆ. ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ವೃತ್ತಿ ಬದುಕಿನಲ್ಲಿ  ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿ ಮುನ್ನುಗ್ಗುವಿರಿ. ಮನೆಯ ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರಡುವುದರಿಂದ ಶುಭವಾಗಲಿದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯ ಜನರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಇದರ ಹೊರತಾಗಿ, ಈ ದಿನ ಸಂತೋಷದಿಂದ ತುಂಬಿದ ದಿನ. ಕುಟುಂಬ ವ್ಯವಹಾರಗಳಲ್ಲಿ ಬಂಪರ್ ಲಾಭವನ್ನು ಕಾಣುವಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯವರಿಗೆ ಇಂದು ದಾನ ಕಾರ್ಯಗಳಿಗೆ ಪುಣ್ಯ ಸಿಗಲಿದೆ. ಮಕ್ಕಳ ವಿಷಯದಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು. ಸಂಗಾತಿ ಜೊತೆಗೆ ಸಂಜೆ ಹೊರಗಡೆ ಸುತ್ತಾಡಲು ಯೋಜಿಸಬಹುದು. ಒಟ್ಟಾರೆ ಇಂದು ಈ ರಾಶಿಯವರಿಗೆ ಸಂತೋಷದ ದಿನ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.