ನವದೆಹಲಿ: ಇಂದು (ಅ.13) ಅಂದರೆ ಗುರುವಾರ ಕರ್ವಾ ಚೌತ್. ಕರ್ವಾ ಚೌತ್‌ನಲ್ಲಿ ಉಪವಾಸವನ್ನು ಹಿಂದೂ ತಿಂಗಳ ಕಾರ್ತಿಕದಲ್ಲಿ ಕೃಷ್ಣ ಪಕ್ಷ ಚತುರ್ಥಿಯ 4ನೇ ದಿನದಂದು ಮಾಡಲಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ನಿರ್ಜಲ ವ್ರತವನ್ನು ಆಚರಿಸುತ್ತಾರೆ ಮತ್ತು ಇಡೀ ದಿನ ನೀರು ಸಹ ಕುಡಿಯುವುದಿಲ್ಲ. ಸಂಜೆ ಕರ್ವಾ ಚೌತ್ ಪೂಜೆ ನಡೆಯುತ್ತದೆ. ಚಂದ್ರನನ್ನು ನೋಡಿದ ನಂತರ ಮಣ್ಣಿನ ಪಾತ್ರೆಯಿಂದ ನೀರನ್ನು ಚಂದ್ರ ದೇವರಿಗೆ ಅರ್ಪಿಸಲಾಗುತ್ತದೆ. ಚಂದ್ರನ ಉದಯದ ನಂತರ ಜರಡಿ ಮೂಲಕ ಮಹಿಳೆಯರು ಚಂದ್ರನನ್ನು ನೋಡುತ್ತಾರೆ. ನಂತರ ತಮ್ಮ ಗಂಡನ ಮುಖಗಳನ್ನು ನೋಡುತ್ತಾರೆ. ಇದರ ನಂತರ ಪತಿದೇವರು ಆಹಾರವನ್ನು ನೀಡಿದಾಗ ಮಹಿಳೆಯರು ತಮ್ಮ ಉಪವಾಸವನ್ನು ಕೊನೆಗೊಳಿಸುತ್ತಾರೆ.


COMMERCIAL BREAK
SCROLL TO CONTINUE READING

ಕರ್ವಾ ಚೌತ್‍​ನ್ನು ಬಹುತೇಕ ಎಲ್ಲಾ ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಇದನ್ನು ತುಂಬಾ ಮಂಗಳಕರ ಹಬ್ಬವೆಂದು ನಂಬುತ್ತಾರೆ. ಈ ವಿಶೇಷ ಸಂದರ್ಭದಲ್ಲಿ ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ದೇವರಲ್ಲಿ ಪ್ರಾರ್ಥಿಸುತ್ತಾರೆ.  


ಇದನ್ನೂ ಓದಿ: ದೀಪಾವಳಿಗಿಂತ ಮೊದಲು ಈ 5 ವಸ್ತುಗಳನ್ನು ಮನೆಯಿಂದ ಹೊರ ಹಾಕಿ.! ಸ್ವಚ್ಚತೆಯ ಜೊತೆಗೆ ಆರೋಗ್ಯವನ್ನೂ ಕಾಪಾಡಬಹುದು


ಕರ್ವಾ ಚೌತ್: ಭಾರತದ ನಗರಗಳಾದ್ಯಂತ ಚಂದ್ರೋದಯ ಸಮಯ


ವಿವಾಹಿತ ಮಹಿಳೆಯರಿಗೆ ವಿಶೇಷವಾಗಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಕರ್ವಾ ಚೌತ್ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಪ್ರಾರ್ಥಿಸಲು ಉಪವಾಸ ಮಾಡುತ್ತಾರೆ. ಕರ್ವಾ ಚೌತ್ ದಿನದಂದು ಚಂದ್ರೋದಯ ಸಮಯವು ಬಹಳ ಮುಖ್ಯವಾಗಿದೆ. ಏಕೆಂದರೆ ಮಹಿಳೆಯರು ಚಂದ್ರನನ್ನು ನೋಡಿದ ನಂತರವೇ ಉಪವಾಸವನ್ನು ಕೊನೆಗೊಳಿಸುತ್ತಾರೆ. ದೇಶದ ವಿವಿಧ ನಗರಗಳಲ್ಲಿ ಚಂದ್ರನ ಉದಯದ ಸಮಯವನ್ನು ಇಲ್ಲಿ ನೀಡಲಾಗಿದೆ.   


ನವದೆಹಲಿ: ರಾತ್ರಿ 8.09


ಗುರ್ಗಾಂವ್ (ಹರಿಯಾಣ): ರಾತ್ರಿ 8.11


ನೋಯ್ಡಾ (ಉತ್ತರ ಪ್ರದೇಶ): ರಾತ್ರಿ 8.09


ಜಮ್ಮು-ಕಾಶ್ಮೀರ: ರಾತ್ರಿ 8.09


ಲಕ್ನೋ (ಉತ್ತರ ಪ್ರದೇಶ): ರಾತ್ರಿ 7.58


ಡೆಹ್ರಾಡೂನ್ (ಉತ್ತರಖಂಡ): ರಾತ್ರಿ 8.02


ಶಿಮ್ಲಾ (ಹಿಮಾಚಲ ಪ್ರದೇಶ): ರಾತ್ರಿ 8.04


ಭೋಪಾಲ್( ಮಧ್ಯ ಪ್ರದೇಶ): ರಾತ್ರಿ 8.21


ಜೈಪುರ (ರಾಜಸ್ಥಾನ): ರಾತ್ರಿ 8.19


ಮೊಹಾಲಿ (ಪಂಜಾಬ್): ರಾತ್ರಿ 8.07


ಚಂಡೀಗಢ (ಪಂಜಾಬ್): ರಾತ್ರಿ 8.06


ಅಹಮದಾಬಾದ್ (ಗುಜರಾತ್): ರಾತ್ರಿ 8.41


ಪುಣೆ (ಮಹಾರಾಷ್ಟ್ರ): ರಾತ್ರಿ 8.45


ಮುಂಬೈ (ಮಹಾರಾಷ್ಟ್ರ): ರಾತ್ರಿ 8.48  


ಚೆನ್ನೈ (ತಮಿಳು ನಾಡು): ರಾತ್ರಿ 8.29


ಬೆಂಗಳೂರು (ಕರ್ನಾಟಕ): ರಾತ್ರಿ 8.40


ಹೈದರಾಬಾದ್ (ತೆಲಂಗಾಣ): ರಾತ್ರಿ 8.28


ಕೊಚ್ಚಿ (ಕೇರಳ): ರಾತ್ರಿ 8.51


ಕೊಲ್ಕತ್ತಾ (ಪಶ್ಚಿಮ ಬಂಗಾಳ): ರಾತ್ರಿ 7.37


ಪಾಟ್ನಾ (ಬಿಹಾರ): ರಾತ್ರಿ 7.44


ಭುವನೇಶ್ವರ್ (ಒಡಿಶಾ): ರಾತ್ರಿ 7.52


ಗುವಾಹಟಿ (ಅಸ್ಸಾಂ): ರಾತ್ರಿ 7.15


ಶಿಲ್ಲಾಂಗ್ (ಮೇಘಾಲಯ): 7.16


ಕೊಹಿಮಾ (ನಾಗಾಲ್ಯಾಂಡ್): 7:07


ಇಂಫಾಲ್ (ಮಣಿಪುರ): 7:09  


ಐಜ್ವಾಲ್ (ಮಿಜೋರಾಂ): 7:16  


ಅಗರ್ತಲಾ ( ತ್ರಿಪುರಾ): ರಾತ್ರಿ 7:22


ಗ್ಯಾಂಗ್ಟಾಕ್ (ಸಿಕ್ಕಿಂ): ರಾತ್ರಿ 7:26


ಇಟಾನಗರ (ಅರುಣಾಚಲ ಪ್ರದೇಶ): ಸಂಜೆ 7:06


ಪೋರ್ಟ್ ಬ್ಲೇರ್ (ಅಂಡಮಾನ್): ರಾತ್ರಿ 7.40ಕ್ಕೆ


ಚಂದ್ರನ ಗೋಚರತೆಯ ಸಮಯದಲ್ಲಿ ನಿರ್ದಿಷ್ಟ ನಗರದಲ್ಲಿನ ಹವಾಮಾನದ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.


ಇದನ್ನೂ ಓದಿ: Peacock Dream : ಕನಸಿನಲ್ಲಿ ನವಿಲು ಕಂಡರೆ ನಿಜವಾಗಿಯೂ ಶ್ರೀಮಂತರಾಗ್ತಾರಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.