Kashi Vishwanath Temple Bengaluru: ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ಪೂಜೆ ಹಾಗೂ ಪುನಸ್ಕಾರ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಪೂಜೆಯ ಮೂಲಕ ನಮ್ಮ ಕಷ್ಟ-ನಷ್ಟಗಳು ಪರಿಹಾರವಾಗುತ್ತವೆ ಅನ್ನೋ ನಂಬಿಕೆ ಇದೆ. ಇಷ್ಟದ ದೇವರನ್ನು ಭಕ್ತಿಯಿಂದ ಪೂಜಿಸಿದ್ರೆ ನಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಸಂಕಷ್ಟಗಳು ಪರಿಹಾರವಾಗುತ್ತವೆ ಅನ್ನೋ ನಂಬಿಕೆಯಿದೆ.


COMMERCIAL BREAK
SCROLL TO CONTINUE READING

ತಾವು ಮಾಡುವ ಕೆಲಸದಲ್ಲಿ ತಮ್ಮ ಪರಿಶ್ರಮದ ಮೇಲೆ ನಂಬಿಕೆ ಇದ್ದರೂ ಹಾಗೂ ಇಲ್ಲದಿದ್ದರೂ ಸಹ ದೇವರ ಅನುಗ್ರಹ ಇದ್ದರೆ ಸಾಕು ಎನ್ನುವ ಆಲೋಚನೆ ಸಾಕಷ್ಟು ಜನರಲ್ಲಿ ಇರುತ್ತದೆ. ಹೀಗಾಗಿ ತಂತ್ರಜ್ಞಾನ ಯುಗದಲ್ಲಿಯೂ ಜ್ಯೋತಿಷ್ಯಶಾಸ್ತ್ರಕ್ಕೆ ಇರುವ ನಂಬಿಕೆ ಕೊಂಚವೂ ಕುಗ್ಗಿಲ್ಲ. ಮುಂದುವರೆಯುತ್ತಿರುವ ಈ ದಿನಗಳಲ್ಲಿಯೂ ಅನೇಕರು ನೂರಾರು ದೇವರನ್ನು ಭಯ-ಭಕ್ತಿಯಿಂದ ಪೂಜಿಸುತ್ತಾರೆ.


ಇದನ್ನೂ ಓದಿ: 2025 ರಲ್ಲಿ ಈ 3 ಜನ್ಮರಾಶಿಗಳ ಅದೃಷ್ಟ ಬೆಳಗಲಿದೆ.. ದುಡ್ಡಿನ ಮಹಾ ಮಳೆ ಶ್ರೀಮಂತರಾಗುವ ಯೋಗ, ಹೋದಲೆಲ್ಲಾ ಒಲಿದು ಬರುವುದು ವಿಜಯ ಮಾಲೆ !


ಬೆಂಗಳೂರಿನ ಯಲಹಂಕದ ಬಳಿ ಕಾಶಿ ವಿಶ್ವನಾಥ ಎಂಬ ಪುಟ್ಟ ದೇವಸ್ಥಾನವಿದೆ. ಯಾರೇ ಆಗಲಿ ಅವರ ಕಷ್ಟಗಳನ್ನು ಹೊತ್ತು ಹೋಗಿ ಅಲ್ಲಿ ಭಕ್ತಿಯಿಂದ ಕುಳಿತು ಪ್ರಾರ್ಥನೆ ಸಲ್ಲಿಸಿದರೆ ಸಾಕು ಕೇವಲ ದಿನಗಳಲ್ಲಿ ಕಷ್ಟಗಳೆಲ್ಲ ಪರಿಹಾರ ಆಗುತ್ತವೆ. ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ವಿಶೇಷ ಪೂಜೆ ಹಾಗೂ ಹೋಮ ಸಲ್ಲಿಸಬೇಕಾಗಿಲ್ಲ. ನೀವು ಕೇವಲ ಅಲ್ಲಿಗೆ ಹೋಗಿ ಬಂದರೆ ಸಾಕು, ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ. 


ನಿಮ್ಮ ಕಷ್ಟಗಳನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪರಿಹಾರ ಮಾಡಿಕೊಡಬೇಕೆಂದು ಬೇಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತವೆ. ಇಲ್ಲಿ ಸಂತಾನ ಭಾಗ್ಯ, ಸಾಲ ಕೊಟ್ಟು ಸತಾಯಿಸುವವರು ಅವರೇ ಮನೆಗೆ ಬಂದು ಹಣ ನೀಡುತ್ತಾರೆ, ವ್ಯಾಪಾರದಲ್ಲಿ ಮುನ್ನಣೆ ಹಾಗೂ ಆರೋಗ್ಯ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತಮ್ಮ ಸಂಕಷ್ಟಗಳು ಪರಿಹಾರವಾಗಿರುವ ಬಗ್ಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ ನೂರಾರು ಭಕ್ತರೇ ಸ್ವತಃ ಹೇಳಿಕೊಂಡಿದ್ದಾರೆ. 


ಇದನ್ನೂ ಓದಿ: ಈ 3 ರಾಶಿಯವರಿಗೆ ಗೋಲ್ಡನ್ ಟೈಮ್ ಶುರು.. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ಅದೃಷ್ಟದ ಪರ್ವಕಾಲ, ಸಂಪತ್ತಿನ ಸುರಿಮಳೆ.. ಸಿರಿವಂತಿಕೆ ಹುಡುಕಿ ಬರಲಿದೆ !


ಇಲ್ಲಿ ಪ್ರತಿ ಪ್ರದೋಷಗಳಿಗೆ ಮಹಾ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಪ್ರತಿದಿನಕ್ಕಿಂತ ಪ್ರದೋಷದ ದಿನ ಅತಿ ಹೆಚ್ಚಿನ ಭಕ್ತರು ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಮಾಡುತ್ತಾರೆ. ಅಲ್ಲದೆ ಈ ದೇಗುಲದಲ್ಲಿ ತೀರ್ಥಸ್ನಾನ ಮಾಡುತ್ತಾರೆ. ಇಲ್ಲಿನ ಅರ್ಚಕರು ನಾಡಿ ನೋಡಿ ಭವಿಷ್ಯವನ್ನು ಸಹ ನುಡಿಯುತ್ತಾರೆ. ಹೀಗಾಗಿ ಈ ದೇಗುಲದಲ್ಲಿ ಪ್ರತಿದಿನ ಸಾವಿರಾರು ಭಕ್ತಾಧಿಗಳು ಆಗಮಿಸುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ