ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ರಾಹು ಕೇತುವನ್ನು ಛಾಯಾ ಮತ್ತು ದುಷ್ಟ ಗ್ರಹವೆಂದು  ಕರೆಯಲಾಗುತ್ತದೆ. ಅವರ ದೃಷ್ಟಿ ಬಿದ್ದರೆ ಜೀವನ ಹಾಳಾಗುತ್ತದೆ ಎಂಬ ಭಯವೂ ಜನರಿಗೆ ಇದೆ. ಆದರೆ, ಇದು ಎಲ್ಲ ಸಂದರ್ಭದಲ್ಲಿಯೂ ಸತ್ಯವಲ್ಲ. ಇತರ ಗ್ರಹಗಳಂತೆ, ರಾಹು ಮತ್ತು ಕೇತು ಕೂಡಾ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಉತ್ತಮ ಫಲಿತಾಂಶಗಳನ್ನು ನೀಡುತ್ತಾರೆ. ಈ ವರ್ಷ ಅಕ್ಟೋಬರ್ 30 ರಂದು ರಾಹು ಮತ್ತು ಕೇತು ಒಟ್ಟಿಗೆ ರಾಶಿಯನ್ನು ಬದಲಾಯಿಸಲಿದ್ದಾರೆ. ರಾಹುವಿನ ಸಂಚಾರವು ನಿಮಗೆ ಮಂಗಳಕರವಾಗದಿರಬಹುದು. ಆದರೆ, ಕೇತು ಅತ್ಯುತ್ತಮ ಫಲಿತಾಂಶಗಳನ್ನು ನೀಡಬಹುದು. ಆದ್ದರಿಂದ ಕೇತು ಸಂಕ್ರಮಣದಿಂದ ಯಾವ ರಾಶಿಯವರ  ಅದೃಷ್ಟ ಬೆಳಗಲಿದೆ ನೋಡೋಣ. 


COMMERCIAL BREAK
SCROLL TO CONTINUE READING

ಧನು ರಾಶಿ  :
ಕೇತು ಸಂಕ್ರಮಣದಿಂದ ಧನು ರಾಶಿಯವರು ಹೆಚ್ಚು ಸೌಕರ್ಯಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಶಾರೀರಿಕ ಸುಖದ ಸಾಧನಗಳಲ್ಲಿ ಹೆಚ್ಚಳವಾಗುತ್ತದೆ. ಸಮಾಜದಲ್ಲಿ ಹೆಸರು ಗೌರವ ಹೆಚ್ಚಾಗುತ್ತದೆ. ಹಠಾತ್ ವಿತ್ತೀಯ ಲಾಭಗಳಿಂದಾಗಿ, ಆರ್ಥಿಕ ಪರಿಸ್ಥಿತಿಯು ಸುಧಾರಿಸಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ : ಹಸ್ತದಲ್ಲಿ ಈ ರೇಖೆ ಇದ್ದರೆ ಜೀವನದಲ್ಲಿ ಆಗುವುದು ಸಿರಿವಂತ ಸಂಗಾತಿಯ ಪ್ರವೇಶ ! ಅತ್ತೆ ಮನೆಯಿಂದ ಸಿಗುವುದು ಭರ್ಜರಿ ಆಸ್ತಿ


ಮೇಷ ರಾಶಿ : 
ಕೇತು ಸಂಕ್ರಮಣದಿಂದ ಮೇಷ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಯ ಜನರ ಆಸೆಯನ್ನು ಕೇತು ಪೂರೈಸುತ್ತಾನೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ.   ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು ಸಾಧ್ಯವಾಗುತ್ತದೆ. ಪ್ರೇಮ ಸಂಬಂಧಗಳ ದೃಷ್ಟಿಯಿಂದಲೂ ಈ ಸಂಚಾರವು ಪ್ರಯೋಜನಕಾರಿಯಾಗಿದೆ. 


ಕಟಕ ರಾಶಿ : 
ಕರ್ಕಾಟಕ ರಾಶಿಯವರಿಗೆ ಕೇತುವಿನ ಸಂಚಾರ ಶುಭಕರವಾಗಿರುತ್ತದೆ. ಅಕ್ಟೋಬರ್‌ನಿಂದ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಉದ್ಯಮಿಗಳಿಗೂ ಇದು ಉತ್ತಮ ಸಮಯವಾಗಿರುತ್ತದೆ.  ಹೊಸ ವ್ಯಾಪಾರ ಒಪ್ಪಂದ ಏರ್ಪಡುತ್ತದೆ. ಇದು ಪ್ರಗತಿಗೆ ಹೊಸ  ದಾರಿಯನ್ನು ತೆರೆಯುತ್ತದೆ. 


ಇದನ್ನೂ ಓದಿ :  ಈ ನಾಲ್ಕು ರಾಶಿಯಲ್ಲಿ ನವಪಂಚಮ ರಾಜಯೋಗ ! ಕೈ ಸೇರುವುದು ಭಾರೀ ಧನ ಸಂಪತ್ತು


ಮಕರ  ರಾಶಿ : 
ಕೇತುವಿನ ಸಂಚಾರವು ಮಕರ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬಹುದು. ವಿದೇಶ ಪ್ರವಾಸದ ಅವಕಾಶಗಳು ಒದಗಿ ಬರುತ್ತವೆ. ಮಕರ ರಾಶಿಯವರ ಎಲ್ಲಾ ಆಸೆಗಳು ಈಡೇರುತ್ತವೆ. ಮತ್ತು ಹೊಸ ಆದಾಯದ ಮೂಲಗಳು  ಹುಟ್ಟಿ ಕೊಳ್ಳುತ್ತವೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.