ಬೆಂಗಳೂರು: ತುಳಸಿ ಗಿಡವನ್ನು ಪ್ರತಿ ಹಿಂದೂಗಳ ಮನೆಯಲ್ಲಿ ಪೂಜಿಸಲಾಗುತ್ತದೆ.ಇದು ಮನೆಯಲ್ಲಿ ಧನಾತ್ಮಕತೆ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ.ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ.ತುಳಸಿ ಭಗವಾನ್ ವಿಷ್ಣುವಿಗೆ ಬಹಳ ಪ್ರಿಯ.ಮನೆಯಲ್ಲಿ ತುಳಸಿಯನ್ನು ನೆಟ್ಟು ಪ್ರತಿದಿನ ಬೆಳಿಗ್ಗೆ ಪೂಜಿಸುವುದು,ನೀರನ್ನು ಅರ್ಪಿಸುವುದು,ಸಂಜೆ ತುಳಸಿ ಬಳಿ ದೀಪವನ್ನು ಹಚ್ಚುವುದು  ಶುಭ ಫಲಿತಾಂಶಗಳನ್ನು ನೀಡುತ್ತದೆ. ಇಂಥಹ ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸುತ್ತಾಳೆ, ಅಂದರೆ ಆ ಮನೆಯಲ್ಲಿ ಸಂಪತ್ತಿಗೆ ಎಂದಿಗೂ ಕೊರತೆಯಾಗುವುದಿಲ್ಲ. 


COMMERCIAL BREAK
SCROLL TO CONTINUE READING

ತುಳಸಿಯಲ್ಲಿನ ಔಷಧೀಯ ಗುಣಗಳಿಂದಾಗಿ ಇದರ ಎಲೆಗಳನ್ನೂ ಸೇವಿಸಲಾಗುತ್ತದೆ. ಆದ್ದರಿಂದ, ಜನರು ಧಾರ್ಮಿಕ, ವೈಜ್ಞಾನಿಕ ಮತ್ತು ಔಷಧೀಯ ಕಾರಣಗಳಿಗಾಗಿ ತುಳಸಿಯನ್ನು ಮನೆಯಲ್ಲಿ ನೆಡುತ್ತಾರೆ.ತುಳಸಿಯಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ರಾಮ ತುಳಸಿ ಮತ್ತು ಕೃಷ್ಣ ತುಳಸಿ. ಈ ಎರಡೂ ತುಳಸಿಗೂ ಬಹಳ ವ್ಯತ್ಯಾಸ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಯಾವ ತುಳಸಿಯನ್ನು ಮನೆಯಲ್ಲಿ ನೆಡುವುದು ಶುಭ ಎನ್ನುವುದನ್ನು ಹೇಳಲಾಗಿದೆ.  


ಇದನ್ನೂ ಓದಿ : ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !
 
ರಾಮ ಮತ್ತು ಕೃಷ್ಣ ತುಳಸಿ ನಡುವಿನ ವ್ಯತ್ಯಾಸ :  
ರಾಮ ತುಳಸಿ: ರಾಮ ತುಳಸಿಯ ಬಣ್ಣವು ಹಸಿರು.ಇದು ಸಿಹಿ ರುಚಿಯನ್ನು ಹೊಂದಿರುತ್ತದೆ. ಶ್ರೀರಾಮನಿಗೆ ಈ ತುಳಸಿ ಎಂದರೆ ಬಹಳ ಪ್ರಿಯ. ಆದ್ದರಿಂದ ಇದನ್ನು ರಾಮ ತುಳಸಿ ಎಂದು ಕರೆಯಲಾಗುತ್ತದೆ. 


ಕೃಷ್ಣ ತುಳಸಿ: ಕೃಷ್ಣ ತುಳಸಿಯ ಬಣ್ಣ ಕಡು ನೇರಳೆ. ಇದು ರಾಮ ತುಳಸಿಯಾ ಹಗೆ ರುಚಿಯಲ್ಲಿ ಸಿಹಿಯಾಗಿರುವುದಿಲ್ಲ.ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ತುಳಸಿಯು ಶ್ರೀಕೃಷ್ಣನಿಗೆ ಬಹಳ ಪ್ರಿಯವಾಗಿದೆ. ಆದ್ದರಿಂದ ಇದನ್ನು ಶ್ಯಾಮ ತುಳಸಿ ಅಥವಾ ಕೃಷ್ಣ ತುಳಸಿ ಎಂದು ಕರೆಯುತ್ತಾರೆ. 


ಇದನ್ನೂ ಓದಿ :  ಈ ರಾಶಿಯಲ್ಲಿ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ,ನಿರಂತರ ರಾಜಯೋಗ !ಒಲಿದು ಬರುವುದು ಸಿರಿ ಸಂಪತ್ತು, ಸುಖ ಶಾಂತಿಯಿಂದ ನಡೆಯುವುದು ಜೀವನ
 
ಮನೆಯಲ್ಲಿ ಯಾವ ತುಳಸಿ ನೆಟ್ಟರೆ ಶುಭ? :
ವಾಸ್ತವವಾಗಿ ರಾಮ ಮತ್ತು ಶ್ಯಾಮ ಎರಡೂ ತುಳಸಿ ಗಿಡಗಳನ್ನು ಮನೆಯಲ್ಲಿ ನೆಡುವುದು ಶುಭ.ಆದರೆ ಮನೆಯಲ್ಲಿ ಪೂಜೆ ಮಾಡುವ ಸಲುವಾಗಿ ತುಳಸಿ ಕಟ್ಟೆಯಲ್ಲಿ ನೆಡುವಾಗ ರಾಮ ತುಳಸಿಯನ್ನು ನೆಡುವುದು ಹೆಚ್ಚು ಮಂಗಳಕರ.ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಾಗುತ್ತದೆ. ಶ್ಯಾಮ ತುಳಸಿಯನ್ನು ಪೂಜೆಗಿಂತ ಹೆಚ್ಚಾಗಿ ಔಷಧಿಯಾಗಿ ಬಳಸಲಾಗುತ್ತದೆ. 


 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.