Lakshmi Narayan Raj Yoga 2023 : ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಈ ಪೈಕಿ ಬುಧ ಗ್ರಹವು ತ್ವರಿತವಾಗಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಇಂದು, ರಾಶಿ ಬದಲಾಯಿಸುತ್ತಿರುವ ಬುಧ ಗ್ರಹ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರ ಗ್ರಹ ಈಗಾಗಲೇ ಮೇಷ ರಾಶಿಯಲ್ಲಿದೆ. ಇದೀಗ ಬುಧ ಗ್ರಹ ಕೂಡಾ ಮೇಷ ರಾಶಿ ಪ್ರವೇಶಿಸುವ ಮೂಲಕ ಲಕ್ಷ್ಮೀ ನಾರಾಯಣ ರಾಜಯೋಗ ರೂಪುಗೊಳ್ಳುತ್ತದೆ. ಇದು ಮೂರು ರಾಶಿಯವರ ಜೀವನದ ಮೇಲೆ  ಮಂಗಳಕರ ಪರಿಣಾಮವನ್ನು ಬೀರುತ್ತದೆ. ಲಕ್ಷ್ಮೀ ನಾರಾಯಣ ರಾಜಯೋಗವು ಈ ರಾಶಿಯವರಿಗೆ ಬಹಳಷ್ಟು ಹಣ, ಕೀರ್ತಿ ಮತ್ತು ಪ್ರಗತಿಯನ್ನು ನೀಡುತ್ತದೆ. 


COMMERCIAL BREAK
SCROLL TO CONTINUE READING

ಲಕ್ಷ್ಮೀ ನಾರಾಯಣ ರಾಜಯೋಗವು ಈ ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ :  
ಮಿಥುನ ರಾಶಿ : ಬುಧ ಸಂಕ್ರಮಣದಿಂದ ರೂಪುಗೊಂಡಿರುವ ಲಕ್ಷ್ಮೀ ನಾರಾಯಣ ರಾಜಯೋಗವು ಮಿಥುನ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಹೊಸ ಮೂಲಗಳಿಂದ ಹಣ ಹರಿದು ಬರಲಿದೆ. ವ್ಯಾಪಾರಸ್ಥರಿಗೆ  ದೊಡ್ಡ ಮಟ್ಟದ ಲಾಭವಾಗುವುದು. ಹೂಡಿಕೆಗೆ ಇದು ಉತ್ತಮ ಸಮಯ. 


ಇದನ್ನೂ ಓದಿ : ಕೆಲವೇ ಗಂಟೆಗಳಲ್ಲಿ ಮೇಷ ರಾಶಿಯಲ್ಲಿ ತ್ರಿಗ್ರಹಿ ಯೋಗ, 5 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿಯ ಯೋಗ!


ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ರಾಜಯೋಗವು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ನೀಡುತ್ತದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕೆಲಸವನ್ನು ಬದಲಾಯಿಸಲು ಯೋಚಿಸುವವರಿಗೆ ಇದು ಸರಿಯಾದ ಸಮಯ. ಮನಸ್ಸಿನಲ್ಲಿ ಅಂದುಕೊಂಡಿರುವ ಕೆಲಸವನ್ನು ಮಾಡಿ ಮುಗಿಸುವುದು ಸಾಧ್ಯವಾಗುತ್ತದೆ. ಅದರಲ್ಲಿ ಯಶಸ್ಸು ಕೂಡಾ ಸಿಗುತ್ತದೆ. 


ಸಿಂಹ ರಾಶಿ : ಬುಧ ಸಂಕ್ರಮಣದಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ರಾಜಯೋಗವು ಸಿಂಹ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಅದೃಷ್ಟ ಈ ರಾಶಿಯವರ ಬೆನ್ನ ಹಿಂದೆಯೇ ಇರಲಿದೆ. ಅವರು ತಮ್ಮ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾರೆ.  ಆದಾಯ ಹೆಚ್ಚಾಗಲಿದೆ. 


ಇದನ್ನೂ ಓದಿ : Astro Tips: ಲಕ್ಷ್ಮಿದೇವಿಗೆ ಸಂಬಂಧಿಸಿದ ಈ ಕೆಲಸ ಮಾಡಿದ್ರೆ ಅದೃಷ್ಟ ಅರಸಿ ಬರುತ್ತದೆ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.