ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನದಲ್ಲಿನ ಬದಲಾವಣೆಗಳು ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಒಂದು ಗ್ರಹವು ಸಂಕ್ರಮಿಸಿದಾಗ, ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರುತ್ತದೆ. ಇದರೊಂದಿಗೆ ಗ್ರಹಗಳ ಮೈತ್ರಿಯು ಕೂಡಾ ಜನಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜುಲೈ 7, 2023 ರಂದು, ಶುಕ್ರ ಗ್ರಹವು ಸಿಂಹರಾಶಿಯನ್ನು ಪ್ರವೇಶಿಸಿದ್ದು, ಜುಲೈ 25, 2023 ರಂದು ಬುಧ ಕೂಡಾ ಸಿಂಹರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಸಿಂಹರಾಶಿಯಲ್ಲಿ  ಬುಧ-ಶುಕ್ರ ಸಂಯೋಗ ಏರ್ಪಟ್ಟು ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣವಾಗುತ್ತದೆ. ಇದು ಕೆಲವು ರಾಶಿಯವರಿಗೆ  ಮಂಗಳಕರವಾಗಿರುತ್ತದೆ.  


COMMERCIAL BREAK
SCROLL TO CONTINUE READING

ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರ ಅದೃಷ್ಟ ಬೆಳಗುತ್ತದೆ : 
ಮಿಥುನ ರಾಶಿ : ಲಕ್ಷ್ಮೀ ನಾರಾಯಣ ಯೋಗವು ಮಿಥುನ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ಯೋಗದ ಕಾರಣ ಇವರ ಜೀವನದಲ್ಲಿ ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಕೈ ಹಿಡಿಯುತ್ತದೆ. ನೀವು ಮಾಡುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. 


ಇದನ್ನೂ ಓದಿ ಖುಲಾಯಿಸುವುದು ಈ ರಾಶಿಯವರ ಅದೃಷ್ಟ ! ಇನ್ನೊಂದು ತಿಂಗಳಲ್ಲಿ ಹರಿದು ಬರುವುದು ಧನ ಸಂಪತ್ತು


ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗದಿಂದ ಲಾಭವಾಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನುಕಳೆಯುವಿರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯ ಸುಖ ಸಿಗಲಿದೆ. ನೀವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ.


ತುಲಾ ರಾಶಿ : ಶುಕ್ರನು ತುಲಾ ರಾಶಿಗೆ ಅಧಿಪತಿಯಾಗಿದ್ದು, ಬುಧ ಮತ್ತು ಶುಕ್ರನ ಸಂಯೋಜನೆಯಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ಯೋಗವು ತುಲಾ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಹಣಕಾಸಿನ ಲಾಭವಾಗುವುದು. ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. 


ಇದನ್ನೂ ಓದಿ :  ಹನುಮಂತನ ಪ್ರಿಯ ರಾಶಿಗಳಿವು.. ಹಣ - ಯಶಸ್ಸು ನೀಡಿ, ಪ್ರತಿ ಹೆಜ್ಜೆಯಲ್ಲೂ ಜೊತೆ ನಿಲ್ಲುವ ಆಂಜನೇಯ.!


 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.