ಕಾಗೆ ಮಾತ್ರವಲ್ಲ ಶನಿ ದೇವರಿಗೆ 9 ವಾಹನಗಳಿವೆ.. ಅವುಗಳ ಮಹತ್ವ, ರಹಸ್ಯ, ಶುಭ - ಅಶುಭ ಪರಿಣಾಮ ಇಲ್ಲಿ ತಿಳಿಯಿರಿ!
Shani Dev Vahan: ಕರ್ಮಕ್ಕೆ ತಕ್ಕ ಫಲ ಕೊಡುವ ಶನಿ ದೇವನು ಮುಖ್ಯವಾಗಿ ಕಾಗೆಯ ಮೇಲೆ ಸವಾರಿ ಮಾಡುತ್ತಾನೆ ಎಂಬ ನಂಬಿಕೆಯಿದೆ. ಆದರೆ ಕಾಗೆ ಮಾತ್ರ ಶನಿದೇವನ ವಾಹನವಲ್ಲ. ಛಾಯಾಪುತ್ರನಿಗೆ 9 ವಾಹನಗಳಿವೆ. ಅವುಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ.
Shani Dev Vahan: ಶನಿವಾರ ಶನಿದೇವನ ಆರಾಧನೆಯ ದಿನ. ಧರ್ಮಗ್ರಂಥಗಳಲ್ಲಿ, ಶನಿ ದೇವನನ್ನು ನ್ಯಾಯದ ದೇವರು ಮತ್ತು ಕರ್ಮಕ್ಕೆ ತಕ್ಕ ಫಲಗಳನ್ನು ನೀಡುವವ ಎಂದು ಕರೆಯಲಾಗುತ್ತೆ. ಏಕೆಂದರೆ ಶನಿದೇವನು ಭಕ್ತರಿಗೆ ಅವರವರ ಕಾರ್ಯಗಳಿಗೆ ತಕ್ಕಂತೆ ಫಲವನ್ನು ನೀಡುತ್ತಾನೆ. ಹಿಂದೂ ಧರ್ಮದಲ್ಲಿ ಎಲ್ಲಾ ದೇವರು ಮತ್ತು ದೇವತೆಗಳಿಗೆ ವಾಹನಗಳಿವೆ. ದುರ್ಗೆಯ ವಾಹನ ಸಿಂಹ, ವಿಷ್ಣುವಿನ ಗರುಡ, ಗಣೇಶನ ವಾಹನ ಮೂಷಿಕ, ಸರಸ್ವತಿ ದೇವಿಯ ಹಂಸ ಹಾಗೆಯೇ ಶನಿದೇವನ ವಾಹನ ಕಾಗೆ.
ಆದರೆ ಕಾಗೆ ಮಾತ್ರವಲ್ಲ, ಶನಿದೇವನಿಗೆ ಒಂಬತ್ತು ವಾಹನಗಳಿವೆ. ಶನಿದೇವನು ಕಾಗೆಯ ಮೇಲೆ ಸವಾರಿ ಮಾಡುವ ಚಿತ್ರವನ್ನೇ ನಾವೆಲ್ಲರೂ ಸಾಮಾನ್ಯವಾಗಿ ನೋಡುತ್ತೇವೆ. ಗ್ರಂಥಗಳಲ್ಲಿಯೂ ಸಹ ಶನಿದೇವನ ಒಂಬತ್ತು ವಾಹನಗಳನ್ನು ಉಲ್ಲೇಖಿಸಲಾಗಿದೆ. ವ್ಯಕ್ತಿಯ ಕುಂಡಲಿ, ನಕ್ಷತ್ರ, ವಾರ ಮತ್ತು ತಿಥಿಗಳನ್ನು ಲೆಕ್ಕ ಹಾಕಿದ ನಂತರವೇ, ಶನಿದೇವನು ಯಾವ ರಾಶಿಯಲ್ಲಿ, ಯಾವ ವಾಹನದಲ್ಲಿ ಸಂಚರಿಸಲಿದ್ದಾನೆ ಮತ್ತು ಯಾವ ವಾಹನವು ನಿಮಗೆ ಶುಭ ಅಥವಾ ಅಶುಭವಾಗಬಹುದು ಎಂದು ನಿಖರವಾಗಿ ತಿಳಿಬಹುದು.
ಸಿಂಹ : ಸಿಂಹವನ್ನು ಧೈರ್ಯ, ಶೌರ್ಯ ಮತ್ತು ತಿಳುವಳಿಕೆಯ ಸೂಚಕವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಶನಿಯು ಸಿಂಹದ ಮೇಲೆ ಸವಾರಿ ಮಾಡಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯು ಶತ್ರುಗಳ ಮೇಲೆ ವಿಜಯವನ್ನು ಪಡೆಯುತ್ತಾನೆ.
ಇದನ್ನೂ ಓದಿ: ಈ ರಾಶಿಗಳ ಮೇಲೆ ಸಂಪತ್ತಿನ ಮಳೆ ಸುರಿಸಲಿದ್ದಾನೆ ಸೂರ್ಯ ದೇವ.. ಇನ್ಮೇಲೆ ಮುಟ್ಟಿದ್ದೆಲ್ಲಾ ಚಿನ್ನ!
ಕತ್ತೆ: ಕತ್ತೆ ಕಠಿಣ ಪರಿಶ್ರಮಕ್ಕೆ ಹೆಸರುವಾಸಿ. ಶನಿದೇವನ ವಾಹನವು ಕತ್ತೆಯಾದಾಗ, ಒಬ್ಬ ವ್ಯಕ್ತಿಯು ಯಾವುದೇ ಗುರಿ ಅಥವಾ ಯಶಸ್ಸನ್ನು ಸಾಧಿಸಲು ಶ್ರಮಿಸಬೇಕು ಎಂದರ್ಥ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನು ಕತ್ತೆಯ ಮೇಲೆ ಸವಾರಿ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.
ಕುದುರೆ: ಕುದುರೆಯನ್ನು ಉತ್ಸಾಹ, ಧೈರ್ಯ ಮತ್ತು ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶನಿದೇವನು ವ್ಯಕ್ತಿಯ ಜಾತಕದಲ್ಲಿ ಕುದುರೆ ಸವಾರಿ ಮಾಡುವುದು ಶುಭ ಮತ್ತು ಫಲದಾಯಕ.
ಆನೆ: ಆನೆಯು ಶಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ. ಆದರೆ ಶನಿದೇವನು ಆನೆಯ ಮೇಲೆ ಸವಾರಿ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಆನೆಗೂ ಕೆಲವೊಮ್ಮೆ ಕೋಪ ಬರುತ್ತದೆ. ಶನಿ ದೇವನು ಆನೆಯ ಮೇಲೆ ಸವಾರಿ ಮಾಡುವುದರಿಂದ ವ್ಯಕ್ತಿಯು ತನ್ನ ಸ್ವಭಾವದಲ್ಲಿ ನಮ್ರತೆಯನ್ನು ತರಬೇಕು ಮತ್ತು ಶಾಂತವಾಗಿರಬೇಕು ಎಂದು ತೋರಿಸುತ್ತದೆ.
ಎಮ್ಮೆ: ಶನಿದೇವನು ಎಮ್ಮೆ ಮೇಲೆ ಸವಾರಿ ಮಾಡುತ್ತಿದ್ದರೆ, ಆ ವ್ಯಕ್ತಿಯು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾನೆ ಎಂದರ್ಥ. ಏಕೆಂದರೆ ಎಮ್ಮೆಗಳು ಶಕ್ತಿಶಾಲಿಗಳಾಗಿದ್ದರೂ ಅವು ಭಯದಲ್ಲೇ ಬದುಕುತ್ತವೆ.
ಇದನ್ನೂ ಓದಿ: ಗುರುವಿನ ಕೃಪೆಯಿಂದ ಈ ರಾಶಿಯವರಿಗೆ ಅಪಾರ ಧನಪ್ರಾಪ್ತಿ, ಉದ್ಯೋಗದಲ್ಲಿ ಪ್ರಗತಿ!
ಕಾಗೆ: ಶನಿದೇವನು ಕಾಗೆಯ ಮೇಲೆ ಸವಾರಿ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ಅಪಶ್ರುತಿಗೆ ಕಾರಣವಾಗಬಹುದು. ಇದರಿಂದ ಮನೆಯ ನೆಮ್ಮದಿಗೆ ಭಂಗವಾಗಬಹುದು. ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ನರಿ: ಶನಿದೇವನು ನರಿಯ ಮೇಲೆ ಸವಾರಿ ಮಾಡುವುದು ಕೂಡ ಅಶುಭ. ವ್ಯಕ್ತಿಯ ಜಾತಕದಲ್ಲಿ ಶನಿದೇವನು ನರಿ ಮೇಲೆ ಸವಾರಿ ಮಾಡುತ್ತಿದ್ದರೆ, ಆ ವ್ಯಕ್ತಿಯು ಇತರರನ್ನು ಅವಲಂಬಿಸಬೇಕಾಗಬಹುದು.
ರಣಹದ್ದು ಅಥವಾ ನಾಯಿ: ನಾಯಿ ಅಥವಾ ರಣಹದ್ದುಗಳ ಮೇಲೆ ಶನಿದೇವನ ಸವಾರಿ ಮಂಗಳಕರವಲ್ಲ. ಇದರಿಂದಾಗಿ ವ್ಯಕ್ತಿಯು ಆರ್ಥಿಕ ನಷ್ಟ ಎದುರಿಸಬೇಕಾಗಬಹುದು. ದೈಹಿಕ ತೊಂದರೆಗಳನ್ನು ಸಹ ಎದುರಿಸಬೇಕಾಗಬಹುದು.
ಹಂಸ: ಹಂಸವನ್ನು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶನಿದೇವನು ಹಂಸದ ಮೇಲೆ ಸವಾರಿ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಶುಭ ದಿನಗಳು ಬರುತ್ತವೆ. ಅದೃಷ್ಟವು ಹೆಚ್ಚಾಗುತ್ತದೆ.
ಇದನ್ನೂ ಓದಿ: ಈ ಹೂವುಗಳು ಲಕ್ಷ್ಮೀ ದೇವಿಗೆ ಬಲುಪ್ರೀತಿ.. ಮನೆಯಲ್ಲಿದ್ದರೆ ಸಂತೋಷ, ಸಂಪತ್ತು ವೃದ್ಧಿಯಾಗುತ್ತೆ!
Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ದೃಢಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.