Lucky Moles On Body: ಒಬ್ಬ ವ್ಯಕ್ತಿಯ ಜೀವನದಲ್ಲಿ ಮಚ್ಚೆ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದಿರಲಿಕ್ಕಿಲ್ಲ. ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿ ದೇಹದ ಯಾವ ಭಾಗದಲ್ಲಿ ಮಚ್ಚೆ ಇದೆ, ಅದು ಯಾವ ರೀತಿಯದ್ದು, ಅದರಿಂದಾಗುವ ಲಾಭಗಳೇನು ಎಂಬುದನ್ನು ನಾವಿಂದು ವಿವರಿಸಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾರ್ತಿಕ ಪೂರ್ಣಿಮೆಯಂದು ನಕ್ಷತ್ರದಂತೆ ಹೊಳೆಯಲಿದೆ ಈ ರಾಶಿಗಳ ಅದೃಷ್ಟ: ಮಹಾಧನ ಯೋಗದಿಂದ ಬಂಪರ್ ಯಶಸ್ಸು, ಬಹುದಿನದ ಕನಸೆಲ್ಲಾ ನನಸು


ವ್ಯಕ್ತಿಯ ದೇಹದ ಅನೇಕ ಭಾಗಗಳಲ್ಲಿ ಮಚ್ಚೆಗಳನ್ನು ಕಾಣಬಹುದು. ಆದರೆ ಅದೊಂದು ಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ಶ್ರೀಮಂತನಾಗುತ್ತಾನೆ ಎಂದು ಸೂಚಿಸುತ್ತದೆ.


ಕೆನ್ನೆಯ ಮೇಲೆ ಮಚ್ಚೆ:


ಒಬ್ಬ ವ್ಯಕ್ತಿಯ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಜನರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಈ ಜನರು ತಮ್ಮ ಸಂಗಾತಿಗೆ ತುಂಬಾ ನಿಷ್ಠರಾಗಿರುತ್ತಾರೆ.


ಹಣೆಯ ಮೇಲೆ ಮಚ್ಚೆ:


ಯಾರಿಗಾದರೂ ಹಣೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಅವರು ತುಂಬಾ ಅದೃಷ್ಟವಂತರು. ಈ ಜನರಿಗೆ ಸಂಪತ್ತು ಹೆಚ್ಚುತ್ತಲೇ ಇರುತ್ತದೆ. ಎಂದೂ ಹಣದ ಕೊರತೆ ಇರಲ್ಲ. ಈ ಜನರು ತಮ್ಮ ಕಠಿಣ ಪರಿಶ್ರಮದಿಂದ ಪ್ರತಿಯೊಂದನ್ನೂ ಸಾಧಿಸುತ್ತಾರೆ.


ಎದೆಯ ಮಧ್ಯದಲ್ಲಿ ಮಚ್ಚೆ:


ಎದೆಯ ಮಧ್ಯದಲ್ಲಿ ಮಚ್ಚೆ ಇರುವವರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ. ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ಸೃಷ್ಟಿಸುತ್ತಾರೆ. ಈ ಜನರು ಯೋಜನೆಯಲ್ಲಿ ಬಹಳ ಪ್ರವೀಣರು.


ಬಲ ಅಂಗೈಯಲ್ಲಿ ಮಚ್ಚೆ:


ಬಲ ಅಂಗೈಯಲ್ಲಿ ಮಚ್ಚೆ ಹೊಂದಿರುವ ಜನರು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಹೆಸರು ಮತ್ತು ಖ್ಯಾತಿಯನ್ನು ಗಳಿಸುವಲ್ಲಿ ಇವರೇ ಮೊದಲಿಗರು. ಸಂಪತ್ತಿನ ವಿಷಯದಲ್ಲಿ ತುಂಬಾ ಅದೃಷ್ಟವಂತರು.


ಇದನ್ನೂ ಓದಿ: ಟೋಪಿ ಧರಿಸಿ ತಾಯಿಯೊಂದಿಗೆ ನಿಂತಿರುವ ಈ ಬಾಲಕ ಭಾರತದ ಖ್ಯಾತ ಕ್ರಿಕೆಟಿಗ-ಸ್ಟಾರ್ ನಟನ ಅಳಿಯ! 99 ಕೋಟಿ ಒಡೆಯ ಈತ ಯಾರೆಂದು ಗೊತ್ತಾಯ್ತ?


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/-l9UZYUp33o?si=_K0khSS1BDeQ7ypt
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ