Makar Sankranti Dnation: ಮಕರ ಸಂಕ್ರಾಂತಿಯ ದಿನ ದಾನ ಮಾಡುವ ಪರಂಪರೆ ರೂಢಿಯಲ್ಲಿದೆ. ಸಂಕ್ರಾಂತಿ ದಿನ ದಾನ ಮಾಡುವುದರಿಂದ ಶನಿ ದೇವ ಸಂತುಷ್ಟನಾಗುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಶನಿದೇವ ತನ್ನ ಆಶೀರ್ವಾದ ನಿಮಗೆ ನೀಡಿದರೆ, ನಿಮ್ಮ ಅದೃಷ್ಟ ಬದಲಾಗಲು ಹೆಚ್ಚು ಸಮಯಾವಕಾಶ ಬೇಕಾಗುವುದಿಲ್ಲ. ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷ ಎದುಸುತ್ತಿರುವವರು ವಿಶೇಷವಾಗಿ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಶನಿದೇವ ಸಂತುಷ್ಟನಾಗುತ್ತಾನೆ. ಈ ದಿನ ಮಾಡಿದ ದಾನವು ಜಾವನದಲ್ಲಿ ಸಾಕಷ್ಟು ಸುಖ-ಸಮೃದ್ಧಿಯನ್ನು ತರುತ್ತದೆ. ಈ ಬಾರಿ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತಿದೆ.

COMMERCIAL BREAK
SCROLL TO CONTINUE READING

ಜನವರಿ 14 ರ ರಾತ್ರಿ ಸೂರ್ಯ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಹೀಗಾಗಿ ಈ ಹಬ್ಬವನ್ನು ಮಾರನೆಯ ದಿನ ಸೂರ್ಯೋದಯದೊಂದಿಗೆ ಆಚರಿಸಲಾಗುತ್ತಿದೆ. ಈ ದಿನ ಗಂಗಾ ಸ್ನಾನ ಕೂಡ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗಂಗಾಸ್ನಾನ ಮಾಡಿದ ನಂತರ ಗಂಗಾ ಘಾಟದಲ್ಲಿ ​​ದಡದಲ್ಲಿರುವ ಅರ್ಚಕರಿಗೆ ದಾನ ನೀಡಬೇಕು ಎಂದು ಹೇಳಲಾಗುತ್ತದೆ.


ಈ ವಸ್ತುಗಳ ದಾನ ಮಾಡಿದರೆ ಸೂರ್ಯ ಪ್ರಸನ್ನನಾಗುತ್ತಾನೆ
ಸಂಕ್ರಾಂತಿಯ ದಿನದಂದು ಕಪ್ಪು ಎಳ್ಳು, ಉದ್ದಿನ ಬೇಳೆ, ಬೆಲ್ಲ, ಹೊಸ ಅಕ್ಕಿಯನ್ನು ದಾನ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ. ಶನಿಯ ಸಾಡೇಸಾತಿಯಿಂದ  ಬಳಲುತ್ತಿರುವವರು ಕಪ್ಪು ಎಳ್ಳನ್ನು ದಾನ ಮಾಡಬೇಕು. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಈ ದಿನ ನೀವು ಎಳ್ಳು ಮತ್ತು ಬೆಲ್ಲದಿಂದ ತಯಾರಿಸಿದ ವಸ್ತುಗಳನ್ನು ಸಹ ದಾನ ಮಾಡಬಹುದು.


ಇದನ್ನೂ ಓದಿ-Shani Dev Upay: ಶನಿ ಮುನಿಸಿಕೊಂಡರೆ ಜೀವನವೇ ನರಕಾಗುತ್ತದೆ, ಈ ಉಪಾಯ ಅನುಸರಿಸಿ


ಬೆಲ್ಲವು ಗುರು ಗ್ರಹದೊಂದಿಗೆ ಸಹ ಸಂಬಂಧಿಸಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಬೆಲ್ಲವು ಗುರು ಗ್ರಹದೊಂದಿಗೆ ಸಹ ಸಂಬಂಧಿಸಿದೆ. ಈ ಬಾರಿ ಸಂಕ್ರಾಂತಿ ಭಾನುವಾರದಂದು ಬರುತ್ತಿದ್ದು, ಭಾನುವಾರದಂದು ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಬೆಲ್ಲವನ್ನು ದಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಗುರುವಿನ ಬಲದಿಂದಾಗಿ ಜೀವನದಲ್ಲಿ ಯಶಸ್ಸಿನ ಬಾಗಿಲು ತೆರೆಯುತ್ತದೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ.


ಇದನ್ನೂ ಓದಿ-Sankranti 2023: ಮಕರ ಸಂಕ್ರಾಂತಿಯಿಂದ ಯಾವ ರಾಶಿಗಳ ಜನರ ಜೀವನದಲ್ಲಿ ಏನು ಬದಲಾವಣೆಗಳಾಗಲಿವೆ?
 
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.