Mangal Gochar 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಪ್ರತಿ ಗ್ರಹವೂ ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಇತ್ತೀಚೆಗೆ, ಜುಲೈ 1, 2023ರಂದು ಗ್ರಹಗಳ ಕಮಾಂಡರ್ ಎಂದು ಕರೆಯಲ್ಪಡುವ ಮಂಗಳನು ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿರುವ ಮಂಗಳನು ಜುಲೈ 1, 2023ರಂದು ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. 


COMMERCIAL BREAK
SCROLL TO CONTINUE READING

ಸಿಂಹ ರಾಶಿಯಲ್ಲಿ ಮಂಗಳನ ಪ್ರವೇಶವು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ಬಹಳ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಈ ವೇಳೆ ನಾಲ್ಕು ರಾಶಿಯವರು ವೃತ್ತಿ ಜೀವನ, ಹಣಕಾಸಿನ ವಿಷಯದಲ್ಲಿ ಭಾರೀ ಅದೃಷ್ಟವಂತರು ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವೆಂದು ತಿಳಿಯೋಣ... 


ಮಂಗಳ ರಾಶಿ ಪರಿವರ್ತನೆ: ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಭವಿಷ್ಯ 
ಮಿಥುನ ರಾಶಿ:

ಮಿಥುನ ರಾಶಿಯವರ ಮೂರನೇ ಮನೆಯಲ್ಲಿ ಮಂಗಳನ ರಾಶಿ ಪರಿವರ್ತನೆಯು ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರೀ ಅದೃಷ್ಟ ಎಂದು ಸಾಬೀತುಪಡಿಸಲಿದೆ. ಆದಾಗ್ಯೂ, ನಿಮ್ಮ ಜೀವನ ಸುಧಾರಿಸಬೇಕು ಎಂದಿದ್ದರೆ ನೀವು ಬಹಳ ಎಚ್ಚರಿಕೆಯಿಂದ ಹಣವನ್ನು ಖರ್ಚು ಮಾಡಿ. ನಿಮ್ಮ ಆರೋಗ್ಯ ಸುಧಾರಿಸಲಿದೆ. ವ್ಯಾಪಾರಸ್ಥರಿಗೆ ಸಮಯ ಅತ್ಯುತ್ತಮವಾಗಿದ್ದು, ಪ್ರಗತಿಯನ್ನು ಕಾಣುವಿರಿ. ವೈವಾಹಿಕ ಜೀವನವೂ ಉತ್ತಮವಾಗಿರಲಿದೆ. 


ಇದನ್ನೂ ಓದಿ- Shani Vakri: ನವೆಂಬರ್ 4ರವರೆಗೆ ಈ ರಾಶಿಯವರಿಗೆ ಅಪಾರ ಸಂಪತ್ತು ಕರುಣಿಸಲಿದ್ದಾನೆ ವಕ್ರೀ ಶನಿ


ಸಿಂಹ ರಾಶಿ: 
ಸ್ವ ರಾಶಿಯಲ್ಲೇ ಮಂಗಳನ ಸಂಚಾರವು ಈ ರಾಶಿಯವರಿಗೆ ಗರಿಷ್ಠ ಶುಭ ಫಲಗಳನ್ನು ನೀಡಲಿದೆ. ನಿಮ್ಮ ದೀರ್ಘ ಸಮಯದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭ, ಉದ್ಯೋಗಸ್ಥರಿಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಮೂಡಲಿದ್ದು, ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. 


ತುಲಾ ರಾಶಿ : 
ತುಲಾ ರಾಶಿಯವರ ಹನ್ನೊಂದನೆಯ ಮನೆಯಲ್ಲಿ ಮಂಗಳ ಸಾಗಿದ್ದು ಈ ಸಮಯದಲ್ಲಿ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲೂ ಭಾರೀ ಪ್ರಯೋಜನವನ್ನು,  ಲಾಭವನ್ನೂ ಪಡೆಯಲಿದ್ದಾರೆ. ತುಲಾ ರಾಶಿಯ ಉದ್ಯೋಗಸ್ಥರಿಗೆ ಉನ್ನತ ಸ್ಥಾನ ಅಲಂಕರಿಸುವ ಯೋಗವಿದ್ದರೆ, ವ್ಯಾಪಾರಸ್ಥರಿಗೆ ವ್ಯಾಪಾರ ವೃದ್ಧಿಯಾಗಲಿದೆ. ಇದು ನಿಮ್ಮ ಹಣಕಾಸಿನ ಸಮಸ್ಯೆಗಳಿಂದಲೂ ಮುಕ್ತಿಯನ್ನು ನೀಡಲಿದೆ.  


ಇದನ್ನೂ ಓದಿ- ಈ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ದೇವಗುರು ಬೃಹಸ್ಪತಿ


ಧನು ರಾಶಿ: 
ಧನು ರಾಶಿಯವರ ಒಂಬತ್ತನೇ ಮನೆಯಲ್ಲಿ ಮಂಗಳ ರಾಶಿ ಪರಿವರ್ತನೆ ಆಗಿದೆ. ಜ್ಯೋತಿಷ್ಯದಲ್ಲಿ ಇದನ್ನು ಅದೃಷ್ಟದ ಮನೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಈ ಸಮಯದಲ್ಲಿ ಧನು ರಾಶಿಯವರು ವೃತ್ತಿ ಬದುಕಿನಲ್ಲಿ ಕೀರ್ತಿ, ಪ್ರಗತಿಯ ಜೊತೆಗೆ ಹೊಸ ಜವಾಬ್ದಾರಿಯನ್ನೂ ಪಡೆಯುವಿರಿ. ಹಣಕಾಸಿನ ಹರಿವು ಉತ್ತಮವಾಗಿರಲಿದ್ದು, ನಿಮ್ಮೆಲ್ಲಾ ಸಮಸ್ಯೆಗಳಿಂದಲೂ ಒಂದೊಂದಾಗಿ ಪರಿಹಾರವನ್ನು ಪಡೆಯುವಿರಿ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.