Angaraka Yoga Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧೈರ್ಯ, ಶೌರ್ಯ, ಭೂಮಿ ಮತ್ತು ಕಟ್ಟಡಗಳು, ಆಸ್ತಿ, ಮದುವೆಯಂತಹ ಮಂಗಳ ಕಾರ್ಯಗಳಿಗೆ ಶುಭಕಾರಕ ಎಂದು ಕರೆಯಲ್ಪಡುವ ಮಂಗಳನು  ಮೊನ್ನೆಯಷ್ಟೇ (ಏಪ್ರಿಲ್ 23) ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. 


COMMERCIAL BREAK
SCROLL TO CONTINUE READING

ಜಾತಕದಲ್ಲಿ ಮಂಗಳನ (Mars) ಸ್ಥಾನಮಾನವು ವೈವಾಹಿಕ ಸಂತೋಷದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮದುವೆ, ಸಂತೋಷ, ಅದೃಷ್ಟ ಮತ್ತು ಜ್ಞಾನದ ಅಂಶವಾಗಿರುವ ಗುರು (Jupiter) ರಾಶಿಚಕ್ರ ಚಿಹ್ನೆಯಲ್ಲಿ ಮಂಗಳನ ಪ್ರವೇಶವು ದೊಡ್ಡ ಘಟನೆಗಳಿಗೆ ಕಾರಣವಾಗುತ್ತದೆ. ಆದರೆ, ಮೀನ ರಾಶಿಯಲ್ಲಿ ಈಗಾಗಲೇ ಉಪಸ್ಥಿತನಿರುವ ರಾಹು (Rahu) ವಿನೊಂದಿಗೆ ಮಂಗಳ ಸಂಯೋಗದಿಂದ ಅಂಗಾರಕ ಯೋಗ ಸೃಷ್ಟಿಯಾಗಿದೆ. 


ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಗಾರಕ ಯೋಗವನ್ನು (Angaraka Yoga) ಶುಭ ಎಂದು ಪರಿಗಣಿಸಲಾಗುವುದಿಲ್ಲ. ಅಂಗಾರಕ ಯೋಗವು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಮೀನ ರಾಶಿಯಲ್ಲಿ ರೂಪುಗೊಂಡಿರುವ ಅಂಗಾರಕ ಯೋಗವು ಮೂರು ರಾಶಿಯವರ ಜೀವನದಲ್ಲಿ ತೊಂದರೆಗಳನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Shani Vakri 2024: ತಿಂಗಳ ಬಳಿಕ ಶನಿಯ ಹಿಮ್ಮುಖ ಚಲನೆ, 3 ರಾಶಿಯವರಿಗೆ ಅಪಾರ ಹಣ-ಖ್ಯಾತಿ


ಅಂಗಾರಕ ಯೋಗ ಈ ರಾಶಿಯವರಿಗೆ ವಿಶೇಷ ಎಚ್ಚರಿಕೆ ಅಗತ್ಯ: 
ವೃಷಭ ರಾಶಿ: 

ಮೀನ ರಾಶಿಯಲ್ಲಿ ನಿರ್ಮಾಣವಾಗಿರುವ ಅಂಗಾರಕ ಯೋಗವು (Angaraka Yoga Effect) ವೃಷಭ ರಾಶಿಯವರಿಗೆ ಕೌಟುಂಬಿಕ ವಿಷಯಗಳಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು. ವಿವಾಹಿತರಿಗೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಲಿವೆ. 


ಸಿಂಹ ರಾಶಿ: 
ಮಂಗಳ-ರಾಹು ಸಂಯೋಗದಿಂದ ರೂಪುಗೊಂಡಿರುವ ಅಂಗಾರಕ ಯೋಗವು ಸಿಂಹ ರಾಶಿಯವರಿಗೆ ನಾನಾ ರೀತಿಯ ಸಮಸ್ಯೆಗಳನ್ನು ಹೆಚ್ಚಿಸಲಿದೆ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಅನಗತ್ಯ ಖರ್ಚುಗಳಿಂದ ಬಜೆಟ್ ಹಾನಿಗೊಳ್ಳಬಹುದು. ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಿ. 


ಇದನ್ನೂ ಓದಿ- ಮುಂದಿನ ಒಂದು ವರ್ಷದವರೆಗೆ ಈ ರಾಶಿಯವರಿಗೆ ಸೋಲೇ ಇಲ್ಲ! ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುವುದು ಸಂಪತ್ತು!ಪ್ರತಿ ಕನಸು ನನಸಾಗುವ ಕಾಲ


ತುಲಾ ರಾಶಿ: 
ಮೀನ ರಾಶಿಯಲ್ಲಿ ಸೃಷ್ಟಿಯಾಗಿರುವ ಅಂಗಾರಕ ಯೋಗವು ತುಲಾ ರಾಶಿಯ ಜನರಿಗೆ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಕಾನೂನಾತ್ಮಕ ವಿಷಯಗಳಲ್ಲಿ ಧನಾತ್ಮಕ ಫಲಗಳು ಲಭ್ಯವಾಗದೇ ಇರಬಹುದು. ರಹಸ್ಯ ಶತ್ರುಗಳ ಬಗ್ಗೆ ಜಾಗರೂಕರಾಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.