Shukra Margi 2023: ಈ ರಾಶಿಯವರಿ ಗೋಲ್ಡನ್ ಡೇಸ್ ಆರಂಭ, ವೃತ್ತಿಯಲ್ಲಿ ಪ್ರಗತಿ, ಕೈ ತುಂಬಾ ಹಣ
Shukra Margi 2023: ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು, ಐಶ್ವರ್ಯಕಾರಕ ಎಂದು ಕರೆಯಲ್ಪಡುವ ಶುಕ್ರನು ನೆನ್ನೆಯಷ್ಟೇ ತನ್ನ ನೇರ ನಡೆಯನ್ನು ಆರಂಭಿಸಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಶುಕ್ರನು ಕೆಲವು ರಾಶಿಯವರಿಗೆ ಸುವರ್ಣ ದಿನಗಳನ್ನು ತರಲಿದ್ದಾನೆ ಎಂದು ಹೇಳಲಾಗುತ್ತಿದೆ.
Shukra Margi 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು, ಸಮೃದ್ಧಿ, ಸಂತೋಷ, ಪ್ರೀತಿ ಮತ್ತು ಆಕರ್ಷಣೆಯ ಅಂಶ ಎಂದು ಬಣ್ಣಿಸಲ್ಪಡುವ ಶುಕ್ರನು ನೆನ್ನೆಯಷ್ಟೇ(ಸೆಪ್ಟೆಂಬರ್ 4, 2023) ಕರ್ಕಾಟಕ ರಾಶಿಯಲ್ಲಿ ನೇರ ನಡೆಯನ್ನು ಆರಂಭಿಸಿದ್ದಾನೆ. ಮಾರ್ಗಿ ಶುಕ್ರನು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತಾನೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಗೋಲ್ಡನ್ ಟೈಮ್ ಎಂತಲೇ ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ನೋಡುವುದಾದರೆ...
ಶುಕ್ರನ ನೇರ ನಡೆಯಿಂದ ಈ ರಾಶಿಯವರಿ ಗೋಲ್ಡನ್ ಡೇಸ್ ಆರಂಭ, ವೃತ್ತಿಯಲ್ಲಿ ಪ್ರಗತಿ, ಕೈ ತುಂಬಾ ಹಣ:-
ಮಿಥುನ ರಾಶಿ:
ಮಾರ್ಗಿ ಶುಕ್ರನು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಬಾಕಿ ಉಳಿದಿರುವ ಹಣ ಕೈ ಸೇರುವುದರ ಜೊತೆಗೆ ಬಂಪರ್ ಆರ್ಥಿಕ ಲಾಭವೂ ಆಗಲಿದೆ. ಪೂರ್ವಜರ ಆಸ್ತಿ ವ್ಯಾಜ್ಯಗಳು ನಿಮ್ಮ ಪರವಾಗಿಯೇ ಆಗಲ್ಲಿದ್ದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ.
ಇದನ್ನೂ ಓದಿ- Mangala Gochar: ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತಿನ ಜೊತೆ ರಾಜಯೋಗ ನೀಡಲಿದ್ದಾನೆ ಮಂಗಳ
ಕನ್ಯಾ ರಾಶಿ:
ಶುಕ್ರನ ನೇರ ಸಂಚಾರದಿಂದ ಕನ್ಯಾ ರಾಶಿಯವರಿಗೂ ಸಾಕಷ್ಟು ಪ್ರಯೋಜನಗಳಿವೆ. ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ವಿಜಯಲಕ್ಷ್ಮಿ ನಿಮ್ಮ ಪಾಳಿಗಿದ್ದು, ಆದಾಯದಲ್ಲೂ ಹೆಚ್ಚಳವಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ, ವೃತ್ತಿ ಬದುಕಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ. ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಹೂಡಿಕೆಯಿಂದ ಉತ್ತಮ ಲಾಭ ಗಳಿಸಬಹುದು.
ಇದನ್ನೂ ಓದಿ- Guru Vakri 2023: ಡಿಸೆಂಬರ್ 31ರವರೆಗೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ
ತುಲಾ ರಾಶಿ:
ಮಾರ್ಗಿ ಶುಕ್ರನು ತುಲಾ ರಾಶಿಯವರಿಗೆ ವೃತ್ತಿ ಸಂಬಂಧಿತ ವಿಷಯದಲ್ಲಿ ಮಂಗಳಕರ ಫಲಿತಾಂಶಗಳನ್ನು ನೀಡುತ್ತಾನೆ. ಉದ್ಯೋಗಸ್ಥರಿಗೆ ಬಡ್ತಿ ಅವಕಾಶಗಳಿವೆ. ಇದಲ್ಲದೆ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಹೊಸ ಹೊಸ ಅವಕಾಶಗಳು ಕೂಡ ಲಭ್ಯವಾಗಲಿವೆ. ವ್ಯಾಪಾರಸ್ಥರಿಗೆ ಬಂಪರ್ ಆರ್ಥಿಕ ಲಾಭವಿರುತ್ತದೆ. ಆದಾಯದ ಹೆಚ್ಚಳದಿಂದಾಗಿ ನೀವು ಕೌಟುಂಬಿಕ ಜೀವನದಲ್ಲೂ ಸುಖ-ಶಾಂತಿ-ನೆಮ್ಮದಿಯನ್ನು ಕಾಣಬಹುದು. ಒಟ್ಟಾರೆಯಾಗಿ ಇದು ನಿಮಗೆ ಸುವರ್ಣ ಸಮಯ ಎಂತಲೇ ಹೇಳಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.