ಮಂಗಳ ಗೋಚಾರ, ಬುಧ ಉದಯ: ನಾಳೆಯಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ
Mars Gochara, Budha Udaya: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ನಾಳೆ 10 ಮೇ 2023 ರಂದು ಎರಡು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಮೊದಲಿಗೆ ಮಂಗಳ ರಾಶಿ ಪರಿವರ್ತನೆ ಮಾಡಲಿದ್ದಾನೆ. ಇದಲ್ಲದೆ, ಅದೇ ದಿನ ಗ್ರಹಗಳ ರಾಜಕುಮಾರನಾದ ಬುಧನು ಉದಯಿಸಲಿದ್ದಾನೆ. ಇದರಿಂದಾಗಿ ಮಾಸಾಂತ್ಯದವರೆಗೂ ಕೆಲವು ರಾಶಿಯವರು ಕೈ ತುಂಬಾ ಹಣ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Mangala Rashi Parivartane, Budha Udaya Effects: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಒಂದು ಗ್ರಹದಲ್ಲಿನ ಸಣ್ಣ ಬದಲಾವನೆಯೂ ಕೂಡ ಭೂಮಿಯ ಮೇಲಿನ ಅಸಂಖ್ಯಾತ ಜೀವ ರಾಶಿಗಳ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತದೆ ಎಂದು ತಿಳಿಸಲಾಗಿದೆ. ಇದೀಗ ನಾಳೆ ಎಂದರೆ 10 ಮೇ 2023ರ ಬುಧವಾರದಂದು ಎರಡು ಪ್ರಮುಖ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಆಗಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಧೈರ್ಯ, ಭೂಮಿ, ಮದುವೆಯಂತಹ ಶುಭ ಸಮಾರಂಭಗಳಿಗೆ ಶುಭಕಾರಕ ಎಂದು ಪರಿಗಣಿಸಲ್ಪಟ್ಟಿರುವ ಮಂಗಳನು ಮಿಥುನ ರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದೇ ದಿನ ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುಧನು ಉದಯಿಸಲಿದ್ದಾನೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ರಾಶಿ ಪರಿವರ್ತನೆ ಹೊಂದಿ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿರುವ ಮಂಗಳನು ಇದೇ ರಾಶಿಯಲ್ಲಿ 01 ಜುಲೈ 2023ರವರೆಗೆ ಸಂಚರಿಸಲಿದ್ದಾನೆ. ಇನ್ನೊಂದೆಡೆ, ಇಷ್ಟು ದಿನಗಳ ಕಾಲ ಆಸ್ತಮ ಸ್ಥಿತಿಯಲ್ಲಿದ್ದ ಬುಧನು ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಒಂದೇ ದಿನ ಈ ಎರಡೂ ಗ್ರಹಗಳ ಸಂಚಾರದಲ್ಲಿನ ಬದಲಾವನೆಯು ದ್ವಾದಶ ರಾಶಿಯವರ ಮೇಲೆ ಶುಭ- ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೂ, ಈ ಸಮಯವು ನಾಲ್ಕು ರಾಶಿಯವರ ದೃಷ್ಟಿಯಿಂದ ತುಂಬಾ ಮಂಗಳಕರವಾಗಿದ್ದು ಅವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ನಾಳೆ ಎರಡು ಪ್ರಮುಖ ಗ್ರಹಗಳ ಸಂಚಾರ ಬದಲಾವಣೆ: ಈ ರಾಶಿಯವರಿಗೆ ಮಾಸಾಂತ್ಯದವರೆಗೂ ಧನವೃಷ್ಟಿ :-
ವೃಷಭ ರಾಶಿ:
ಮೇ 10 ರಂದು ಮಂಗಳ ರಾಶಿ ಪರಿವರ್ತನೆ, ಬುಧ ಉದಯದ ಪರಿಣಾಮವಾಗಿ ವೃಷಭ ರಾಶಿಯವರಿಗೆ ಪ್ರತಿ ಕೆಲಸ ಕಾರ್ಯಗಳಲ್ಲೂ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆತ್ಮವಿಶ್ವಾಸದೊಂದಿಗೆ ಮಾಡಿದ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗಲಿದ್ದು ಯಶಸ್ಸಿನ ಬಾಗಿಲುಗಳು ನಿಮಗಾಗಿ ತೆರೆಯಲಿವೆ. ಈ ಸಮಯದಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸುವಿರಿ.
ಇದನ್ನೂ ಓದಿ- ತಿಂಗಳಾಂತ್ಯದಲ್ಲಿ ಚಂದ್ರನ ರಾಶಿಗೆ ಶುಕ್ರನ ಪ್ರವೇಶ, ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ
ಸಿಂಹ ರಾಶಿ:
ನಾಳೆ ಮಂಗಳನ ರಾಶಿ ಬದಲಾವಣೆ, ಬುಧ ಉದಯದೊಂದಿಗೆ ಸಿಂಹ ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ನಿಮ್ಮ ಬಹು ದಿನಗಳ ಕನಸು ಈ ಸಂದರ್ಭದಲ್ಲಿ ನೆರವೇರಲಿದೆ. ಇದಲ್ಲದೆ, ಉನ್ನತ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಕನಸು ಕಾಣುತ್ತಿದ್ದರೆ ಅದೂ ಕೂಡ ಈ ಸಂದರ್ಭದಲ್ಲಿ ಸಾಧ್ಯವಾಗಲಿದೆ. ಯಾವುದೇ ನ್ಯಾಯಾಲಯ ಪ್ರಕರಣಗಳಿದ್ದಲ್ಲಿ ಅದರಲ್ಲೂ ಜಯ ನಿಮ್ಮದಾಗಲಿದೆ.
ಕನ್ಯಾ ರಾಶಿ:
ರಾಶಿ ಪರಿವರ್ತನೆ ಹೊಂದಲಿರುವ ಮಂಗಳ ಹಾಗೂ ಉದಯಿಸಲಿರುವ ಬುಧ ಇಬ್ಬರೂ ಕೂಡ ಕನ್ಯಾ ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವೃತ್ತಿ, ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದ್ದು ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆಗಿದ್ದು ನಿಮ್ಮೆಲ್ಲಾ ಆಸೆಗಳು ಸಹ ಈಡೇರುತ್ತವೆ.
ಇದನ್ನೂ ಓದಿ- ಒಂದೂವರೆ ವರ್ಷ ಈ ರಾಶಿಯವರಿಗೆ ರಾಹುವೇ ಶ್ರೀ ರಕ್ಷೆ ! ಧನಿಕರಾಗುವ ಯೋಗ
ಕುಂಭ ರಾಶಿ:
ಮಂಗಳ ಸಂಚಾರ ಹಾಗೂ ಬುಧ ಉದಯದ ಪರಿಣಾಮವಾಗಿ ಕುಂಭ ರಾಶಿಯವರು ವೃತ್ತಿ ರಂಗದಲ್ಲಿ ಭಾರೀ ಯಶಸ್ಸನ್ನು ನಿರೀಕ್ಷಿಸಬಹುದು. ಇದಲ್ಲದೆ, ವ್ಯಾಪಾರಸ್ಥರಿಗೂ ಸಮಯ ಉತ್ತಮವಾಗಿದ್ದು ಬಂಪರ್ ಲಾಭವನ್ನು ಗಳಿಸಬಹುದು. ಆದಾಗ್ಯೂ, ನೀವು ನಿಮ್ಮ ಅತಿಯಾದ ಖರ್ಚುಗಳಿಗೆ ಕಡಿವಾಣ ಹಾಕಿದರಷ್ಟೇ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಇದು ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.