ಮಂಗಳ ಗೋಚಾರ: ಈ ವರ್ಷ ಸಹೋದರ-ಸಹೋದರಿಯರ ಬಂಧನ ಬೆಸೆಯುವ ಪವಿತ್ರ ಹಬ್ಬ ರಕ್ಷಾಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುವುದು. ಶ್ರಾವಣ  ಮಾಸದ ಹುಣ್ಣಿಮೆಯ ಆರಂಭದಲ್ಲಿ ಭದ್ರಾ ಕಾಲದ ಕಾರಣದಿಂದ ಕೆಲವರು ಆಗಸ್ಟ್ 12 ರಂದು ರಕ್ಷಾಬಂಧನವನ್ನು ಆಚರಿಸುತ್ತಾರೆ. ಇದಲ್ಲದೆ ಈ ರಕ್ಷಾಬಂಧನದ ಸಮಯದಲ್ಲಿ ಜ್ಯೋತಿಷ್ಯದಲ್ಲೂ ದೊಡ್ಡ ಬದಲಾವಣೆ ಆಗಲಿದೆ. ರಕ್ಷಾಬಂಧನದ ಒಂದು ದಿನ ಮೊದಲು ಅಂದರೆ  ಆಗಸ್ಟ್ 10, 2022 ರಂದು,  ಗ್ರಹಗಳ ಕಮಾಂಡರ್ ಮಂಗಳ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಆಗಸ್ಟ್ 10 ರಂದು ಮಂಗಳನು ​​ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರ- 4 ರಾಶಿಯವರಿಗೆ ಸುವರ್ಣದಿನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...


ಮಂಗಳ ರಾಶಿ ಪರಿವರ್ತನೆ- ಈ ರಾಶಿಯವರಿಗೆ ಲಾಭ: 
ವೃಷಭ ರಾಶಿ:
ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರವು ವೃಷಭ ರಾಶಿಯವರಿಗೆ ಬಲವಾದ ಪ್ರಗತಿಯನ್ನು ನೀಡುತ್ತದೆ. ಹೊಸ ಉದ್ಯೋಗಕ್ಕಾಗಿ ಬಯಸುತ್ತಿರುವವರಿಗೆ ಶುಭ ದಿನ. ಈ ಸಮಯದಲ್ಲಿ ಹಣದ ಹರಿವು ಹೆಚ್ಚಲಿದೆ. ವಿದೇಶದಿಂದ ಲಾಭವಾಗಲಿದೆ. ವಿವಾಹಿತರ ಜೀವನವು ಉತ್ತಮವಾಗಿರುತ್ತದೆ. 


ಇದನ್ನೂ ಓದಿ- ಇನ್ನು 48 ಗಂಟೆಗಳಲ್ಲಿ ಈ ರಾಶಿಯವರು ನಿರೀಕ್ಷಿಸಿದ್ದೆಲ್ಲಾ ಸಿಗಲಿದೆ , ಪ್ರತಿ ಹಂತದಲ್ಲೂ ಶುಕ್ರ ನೀಡಲಿದ್ದಾನೆ ಯಶಸ್ಸು


ಕರ್ಕಾಟಕ ರಾಶಿ: ಮಂಗಳ ರಾಶಿ ಪರಿವರ್ತನೆ ಯು ಕರ್ಕಾಟಕ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ತರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು. ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ.


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಂಗಳ ಸಂಚಾರವೂ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗ-ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರಿಗೆ ಸಮಯವು ತುಂಬಾ ಚೆನ್ನಾಗಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. 


ಇದನ್ನೂ ಓದಿ- ಮಲ್ಟಿ ಟಾಲೆಂಟೆಡ್ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು , ಯಾರ ಮುಂದೆಯೂ ಸೋಲುವುದಿಲ್ಲ


ಮಕರ ರಾಶಿ: ವೃಷಭ ರಾಶಿಯಲ್ಲಿ ಮಂಗಳನ ಪ್ರವೇಶವು ಮಕರ ರಾಶಿಯವರ ಆದಾಯ ಹೆಚ್ಚುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕೈ ಹಿಡಿದ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮ್ಮ ಅಭಿವೃದ್ಧಿಗೆ ಪೂರಕವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.