Mars Transit 2022: ಅಕ್ಟೋಬರ್ 16ರಿಂದ ಬದಲಾಗಲಿದೆ ಈ ಮೂರು ರಾಶಿಯವರ ಅದೃಷ್ಟ
Mars Transit 2022: ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 16ರಿಂದ ಮಂಗಳ ಗ್ರಹವು ಮಿಥುನ ರಾಶಿಯಲ್ಲಿ ಸಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಮಂಗಳನ ರಾಶಿ ಪರಿವರ್ತನೆಯು ಮೂರು ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಅಕ್ಟೋಬರ್ ತಿಂಗಳಲ್ಲಿ ಮಂಗಳನ ಸಂಚಾರದ ಪರಿಣಾಮ: ಈ ತಿಂಗಳು ಕೆಲವು ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಅಕ್ಟೋಬರ್ 16 ರಂದು, ಧೈರ್ಯ, ಪರಾಕ್ರಮ, ಭೂಮಿ, ವೈವಾಹಿಕ ಅಂಶವಾದ ಮಂಗಳ ಗ್ರಹವುವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮಂಗಳನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಆಧಾರದ ಮೇಲೆ, ಮಿಥುನ ರಾಶಿಯಲ್ಲಿ ಮಂಗಳನ ಪ್ರವೇಶವು 3 ರಾಶಿಯ ಜನರ ಮೇಲೆ ಬಹಳ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ಈ ಮೂರು ರಾಶಿಯ ಜನರ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ವೃತ್ತಿ ರಂಗದಲ್ಲೂ ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಮಂಗಳ ಗ್ರಹ ಸಂಕ್ರಮಣದಿಂದ ಈ ಮೂರು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ:
ಮೇಷ ರಾಶಿ:
ಮಂಗಳನ ರಾಶಿ ಬದಲಾವಣೆಯು ಮೇಷ ರಾಶಿಯ ಜನರ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತವೆ. ಹೊಸ ಉದ್ಯೋಗದ ಆಫರ್ ಬರಬಹುದು. ಪ್ರಸ್ತುತ ಕೆಲಸದಲ್ಲಿ ನೀವು ಬಡ್ತಿ ಪಡೆಯಬಹುದು. ಸಂಬಳ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಹೊಸ ಸಂಪರ್ಕಗಳು ಉಂಟಾಗುತ್ತವೆ, ಇದು ಬಹಳಷ್ಟು ಲಾಭವನ್ನು ನೀಡುತ್ತದೆ. ಭಾಷಣಕ್ಕೆ ಸಂಬಂಧಿಸಿದ ಕೆಲಸ ಮಾಡುವವರು ವಿಶೇಷ ಲಾಭವನ್ನು ಪಡೆಯುತ್ತಾರೆ.
ಇದನ್ನೂ ಓದಿ- ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದೀರಾ? ಸ್ನಾನಗೃಹದಲ್ಲಿ ಈ ಬಣ್ಣದ ಬಕೆಟ್ ಇಟ್ಟು ನೋಡಿ!
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಣವು ಪ್ರಯೋಜನಕಾರಿಯಾಗಲಿದೆ. ವ್ಯಾಪಾರದಲ್ಲಿ ದೊಡ್ಡ ಲಾಭದ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಕಾರ್ಯಕ್ಷಮತೆ ಸುಧಾರಿಸುತ್ತದೆ, ಈ ಕಾರಣದಿಂದಾಗಿ ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ. ಷೇರು ಮಾರುಕಟ್ಟೆ, ಲಾಟರಿ ಲಾಭ ಪಡೆಯಬಹುದು. ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಲಿವೆ.
ಇದನ್ನೂ ಓದಿ- ದೀಪಾವಳಿ ಭವಿಷ್ಯ: ಅಕ್ಟೋಬರ್‌ನಲ್ಲಿ ಬಂಪರ್ ಲಾಭ ಗಳಿಸಲಿದ್ದಾರೆ ಈ ರಾಶಿಯ ಜನ
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ಅದೃಷ್ಟವನ್ನು ತರುತ್ತದೆ. ಇದುವರೆಗೆ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ವ್ಯಾಪಾರ ಸಂಬಂಧ ಪ್ರಯಾಣಗಳು ಲಾಭದಾಯಕವಾಗಿರುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು. ವಿದೇಶ ಪ್ರಯಾಣ ಇರಬಹುದು. ಒಟ್ಟಾರೆಯಾಗಿ, ಈ ಸಮಯವು ಎಲ್ಲಾ ರೀತಿಯಲ್ಲೂ ಪ್ರಯೋಜನಗಳನ್ನು ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.