ಬೆಂಗಳೂರು : ಬುಧ ಗ್ರಹ ಎಂದರೆ ಸಂಪತ್ತು, ಬುದ್ಧಿವಂತಿಕೆ, ಸಂವಹನ ಮತ್ತು ವ್ಯವಹಾರದ ಪ್ರತೀಕ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜನ್ಮ ಜಾತಕದಲ್ಲಿ ಬುಧನು ಮಂಗಳಕರಾಗಿದ್ದರೆ,  ಆ ವ್ಯಕ್ತಿ ಜೀವನದಲ್ಲಿ ಬಹಳ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ. ಈ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್ 31, 2022 ರಂದು, ಬುಧ ಗ್ರಹವು ಹಿಮ್ಜುಖವಾಗಿ ಚಲಿಸಲು ಆರಂಭಿಸಲಿದೆ. ಬುಧ ಗ್ರಹದ ಹಿಮ್ಮುಖ ಚಲನೆಯು  ಮೂರು ರಾಶಿಯವರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. ಅವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯಲಿದ್ದಾರೆ. ತನ್ನ ಪಥ ಬದಲಾಯಿಸುತ್ತಿರುವ ಬುಧ ಗ್ರಹವು ಕೆಲವು ರಾಶಿಯವರ ಜೀವನದ ದಿಕ್ಕನ್ನು ಕೂಡಾ ಬದಲಾಯಿಸಲಿದ್ದಾನೆ.


COMMERCIAL BREAK
SCROLL TO CONTINUE READING

ಹಿಮ್ಮುಖ ಚಲನೆಯಲ್ಲಿರುವ ಬುಧ ಈ ರಾಶಿಯವರಿಗೆ ನೀಡುತ್ತಾನೆ ಅಪಾರ ಯಶಸ್ಸು :  
ಸಿಂಹ ರಾಶಿ : ಹಿಮ್ಮುಖ ಚಲನೆಯಲ್ಲಿರುವ ಬುಧ ಗ್ರಹವು ಸಿಂಹ ರಾಶಿಯವರ ಬಾಳನ್ನು ಬೆಳಗಲಿದ್ದಾನೆ.  ಈ ರಾಶಿಯವರ ಜೀವನದಲ್ಲಿ ಭೌತಿಕ ಸಂತೋಷಗಳು ಹೆಚ್ಚಾಗುತ್ತವೆ. ಹಣಕಾಸಿನ ಪ್ರಯೋಜನವಾಗಲಿದೆ. ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಆದಾಯದ ಮೂಲ ಹೆಚ್ಚಾಗುವುದು. ಹೊಸ ಕಾರು-ಮನೆ ಖರೀದಿ ಯೋಗ ಕೂಡಿ ಬರಲಿದೆ. ಮಾಡುವ ಕೆಲಸಕ್ಕೆ ತಾಯಿಯ ಬೆಂಬಲ ಸಿಗುವುದು. ವೃತ್ತಿಜೀವನದಲ್ಲಿಯೂ ಯಶಸ್ಸು ಸಿಗಲಿದೆ. ಉದ್ಯೋಗಿಗಳಾಗಿರಬಹುದು, ಉದ್ಯಮಿಗಳಾಗಿರಬಹುದು ಇಬ್ಬರೂ ತಮ್ಮ ಕೆಲಸದಲ್ಲಿ ಪ್ರಗತಿಯಾಗಲಿದ್ದಾರೆ. 


ಇದನ್ನೂ ಓದಿ : Samudrik Shastra : ನಿಮ್ಮ ಸ್ವಭಾವ, ಭವಿಷ್ಯದ ಬಗ್ಗೆ ಹೇಳುತ್ತವೆ ಕಾಲ್ಬೆರಳುಗಳು!


ಕುಂಭ ರಾಶಿ : ಬುಧಗ್ರಹದ  ಪಥ ಬದಲಾವಣೆಯು ಕುಂಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ.  ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆರ್ಡರ್ ಗಳನ್ನು ಪಡೆಯುವ ಸಾಧ್ಯತೆ ಇದೆ. ಇದ್ದಕ್ಕಿದ್ದಂತೆ ಆದಾಯ ಹೆಚ್ಚುವುದು. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಭವಿಷ್ಯದ ಯೋಜನೆಗಳನ್ನು ಈಗಲೇ ರೂಪಿಸಿಕೊಳ್ಳಿ. ಲಾಭ ಖಂಡಿತಾ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಇದರಿಂದ ನೀವು ಕೂಡಾ ಸಂತೋಷದಿಂದ ಇರುವಿರಿ. 


ಮೀನ ರಾಶಿ : ಬುಧಗ್ರಹದ ಹಿಮ್ಮುಖ ಚಲನೆಯೊಂದಿಗೆ ಮೀನ ರಾಶಿಯವರ ಅದೃಷ್ಟ ಕೂಡಾ ಬದಲಾಗಲಿದೆ. ಈ ಸಮಯವು ಉದ್ಯೋಗಿಗಳಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಉದ್ಯೋಗದ ಹುಡುಕಾಟದಲ್ಲಿದ್ದ ನಿರುದ್ಯೋಗಿಗಳ ಹುಡುಕಾಟ ಕೊನೆಯಾಗಲಿದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗಲಿದೆ.  ವ್ಯಾಪಾರಸ್ಥರಿಗೆ ಕೂಡಾ ತಮ್ಮ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಲಿದೆ. ಹಣಕಾಸಿನ ವಿಷಯದಲ್ಲೂ ಈ ಸಮಯ ಉತ್ತಮವಾಗಿರಲಿದೆ.  


ಇದನ್ನೂ ಓದಿ : Tomorrow Planatary Transit: ನಾಳೆಯಿಂದ 23 ದಿನಗಳ ವರೆಗೆ ಈ ರಾಶಿಗಳ ಜನರ ಜೀವನದಲ್ಲಿ ಭಾರಿ ಅಲ್ಲೋಲ ಕಲ್ಲೋಲ, ಕಾರಣ ಇಲ್ಲಿದೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.