Koragajja: ತುಳುನಾಡಲ್ಲಿ ಕೊರಗಜ್ಜ ದೈವದ ಕಾರಣಿಕ: ಕರಿಗಂಧ ಹಾಕುತ್ತಿದ್ದಂತೆ ಮಗುವಿನ ಆರೋಗ್ಯದಲ್ಲಿ ದಿಢೀರ್ ಚೇತರಿಕೆ!
ಸಾಗರ ಮೂಲದ ನಾಗಶ್ರೀ ಎಂಬವರ ನಾಲ್ಕು ತಿಂಗಳ ಪುಟ್ಟ ಹೆಣ್ಣು ಮಗುವಿಗೆ ವಿಪರೀತ ಜ್ವರದಿಂದ ಬಳಲಿ ನೋವು ಅನುಭವಿಸುತ್ತಿತ್ತು. ಹೀಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನಡೆಸಿದಾಗ ಮಗುವಿಗೆ ಪಿಡ್ಸ್ ಇರುವುದಾಗಿ ತಿಳಿದುಬಂದಿತ್ತು. ಅಷ್ಟೇ ಅಲ್ಲದೆ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕೆಎಂಸಿಗೆ ದಾಖಲಿಸಲಾಗಿತ್ತು.
ಉಡುಪಿ: ತುಳುನಾಡಿನ ಬಹುತೇಕ ಜನರ ಆರಾಧ್ಯ ದೈವವಾದ ಕೊರಗಜ್ಜ ಅದೆಷ್ಟೋ ಪವಾಡಗಳನ್ನು ಮಾಡಿದ್ದಾರೆ. ಕಾರಣಿಕ ಮೂರ್ತಿಯಾಗಿರುವ ಈ ದೈವವನ್ನು ಇಲ್ಲಿನ ಜನರು ‘ಅಜ್ಜ’ ಎಂದೇ ಕರೆಯುವುದುಂಟು. ಇನ್ನು ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರೂ, ಅಜ್ಜನ ಮೇಲಿನ ನಂಬಿಕೆಯಿಂದ ಕುಟುಂಬವೊಂದು ತಮ್ಮ ಅನಾರೋಗ್ಯ ಪೀಡಿತ ಮಗುವನ್ನು ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದರು. ಇಲ್ಲಿ ಮಗುವಿನ ಹೆತ್ತವರು ಕೊರಗಜ್ಜನಲ್ಲಿ ಪ್ರಾರ್ಥಿಸಿ ಮಗುವಿನ ಹಣೆಗೆ ಕರಿಗಂಧ ಹಚ್ಚಿದ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯದಲ್ಲಿ ದಿಢೀರ್ ಚೇತರಿಕೆ ಕಂಡುಬಂದಿದೆ. ಈ ಘಟನೆ ನಡೆದಿರುವುದು ಕೃಷ್ಣ ನಗರಿ ಉಡುಪಿಯಲ್ಲಿ.
ಇದನ್ನೂ ಓದಿ: ರಸೆಲ್ ಮಾರ್ಕೆಟ್‌ನಲ್ಲಿ ಡ್ರೈ ಪ್ರೂಟ್ಸ್ ಕದ್ದ ಕಳ್ಳ!
ಸಾಗರ ಮೂಲದ ನಾಗಶ್ರೀ ಎಂಬವರ ನಾಲ್ಕು ತಿಂಗಳ ಪುಟ್ಟ ಹೆಣ್ಣು ಮಗುವಿಗೆ ವಿಪರೀತ ಜ್ವರದಿಂದ ಬಳಲಿ ನೋವು ಅನುಭವಿಸುತ್ತಿತ್ತು. ಹೀಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನಡೆಸಿದಾಗ ಮಗುವಿಗೆ ಪಿಡ್ಸ್ ಇರುವುದಾಗಿ ತಿಳಿದುಬಂದಿತ್ತು. ಅಷ್ಟೇ ಅಲ್ಲದೆ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕೆಎಂಸಿಗೆ ದಾಖಲಿಸಲಾಗಿತ್ತು.
ಆದರೆ ಬಳಿಕ ಐಸಿಯುನಲ್ಲಿದ್ದ ಮಗುವಿನ ಅರೋಗ್ಯದಲ್ಲಿ ಬಹಳಷ್ಟು ಏರಿಳಿತವಾಗಿತ್ತು. ಪದೇ ಪದೇ ಮಗುವಿನ ಹೃದಯ ಸ್ತಬ್ಧವಾಗುತ್ತಿರುವುದರ ಬಗ್ಗೆ ವೈದರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವೈದರು ತಮ್ಮ ಪ್ರಯತ್ನವನ್ನು ಮಾಡುವುದಾಗಿಯೂ ಭರವಸೆ ನೀಡಿದ್ದರೂ ಸಹ ಪ್ರಾಣ ಉಳಿಯುವ ಬಗ್ಗೆ ಸಂಶಯವಿತ್ತು.
ಮಗುವಿನ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಕುಟುಂಬಕ್ಕೆ, ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದರು. ಅದರಂತೆ ಮಗುವಿನ ಪೋಷಕರು ಇಂದ್ರಾಳಿ ಎಂಜಿಎಂ ಹಾಸ್ಟೆಲ್ ಬಳಿಯಿರುವ ಕೊರಗಜ್ಜನ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಕರಿಗಂಧ ಪ್ರಸಾದ ಪಡೆದು ತೆರಳಿದ್ದರು.
ಇನ್ನು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಮಲಗಿದ್ದ ಮಗುವಿಗೆ ಕೊರಗಜ್ಜನ ಕರಿಗಂಧವನ್ನು ಹಚ್ಚುತ್ತಿದ್ದಂತೆಯೇ ಆರೋಗ್ಯದಲ್ಲಿ ದಿಢೀರಾಗಿ ಚೇತರಿಕೆ ಕಾಣಿಸಿಕೊಂಡಿದೆ. ವೈದರು ಕೂಡ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುವ ಮೂಲಕ ಮಗುವನ್ನು ಕಾಪಾಡಿದ್ದಾರೆ.
ಇದನ್ನೂ ಓದಿ: ಶ್ರೀಗಳ ಸಾವಿನ ಹಿಂದೆ ಖಾಸಗಿ ವಿಡಿಯೋ ಸಿಡಿ..?
ತಮ್ಮ ಮಗು ಬದುಕಲು ಕೊರಗಜ್ಜನೇ ಕಾರಣ ಎಂಬುದು ಕುಟುಂಬಸ್ಥರ ನಂಬಿಕೆ. ಹೀಗಾಗಿ ಅಸ್ಪತ್ರೆಯಿಂದ ನೇರವಾಗಿ ಇಂದ್ರಾಳಿ ಬಳಿಯ ಕೊರಗಜ್ಜನ ಕ್ಷೇತ್ರಕ್ಕೆ ತೆರಳಿ ಅಲ್ಲಿ ಮಗುವನ್ನು ಕೊರಗಜ್ಜ ಸ್ವಾಮಿಯ ಮುಂದಿಟ್ಟು ಪ್ರಾರ್ಥನೆ ಸಲ್ಲಿಸಿ ಕರಿ ಪ್ರಸಾದವನ್ನು ಪಡೆದುಕೊಂಡಿದ್ದಾರೆ. ಬದುಕಿರುವವರೆಗೂ ಈ ಮಗು ಕೊರಗಜ್ಜನ ಪ್ರಸಾದವೆಂದೇ ನಂಬಿ ಬದುಕುತ್ತೇವೆ ಎಂದು ಹೇಳುತ್ತಾ ಕಣ್ಣೀರು ಸುರಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.