Monday Remedies: ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಭಕ್ತರ ಕೂಗಿಗೆ ಬಹಳ ಬೇಗ ಕಿವಿಗೊಡುವ ಏಕೈಕ ದೇವರು ಎಂದರೆ ಶಿವ. ಹಾಗಾಗಿಯೇ ಶಿವನನ್ನು ಭೋಲೆನಾಥ ಎಂದು ಕರೆಯಲಾಗುತ್ತದೆ. ಶಿವನು ಕೇವಲ ನೀರಿನಿಂದಲೂ ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆತನನ್ನು ಮನಃಪೂರ್ವಕವಾಗಿ ಪೂಜಿಸಿದರೆ, ಭೋಲೇಶಂಕರ ಭಕ್ತರ ಭಕ್ತಿಗೆ ಮನಸೂರೆಗೊಂಡು ಭಕ್ತರನ್ನು ಆಶೀರ್ವದಿಸುತ್ತಾನೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಜ್ಯೋತಿಷ್ಯದಲ್ಲಿ ಅನೇಕ ಪರಿಹಾರಗಳನ್ನು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೋಮವಾರದಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಸಮಸ್ಯೆಗಳಿಗೆ ಬೇಗನೆ ಮುಕ್ತಿ ದೊರೆತು, ಸಕಲ ಇಷ್ಟಾರ್ಥಗಳು ಸಹ ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಅಂತಹ ಪರಿಹಾರಗಳ ಬಗ್ಗೆ ತಿಳಿಯೋಣ...


ಇಷ್ಟಾರ್ಥ ಸಿದ್ಧಿಗಾಗಿ ಸೋಮವಾರದ ಪರಿಹಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಯಾವುದೇ ಇಷ್ಟಾರ್ಥಗಳನ್ನು ಪೂರೈಸಲು ನೀವು ಬಯಸಿದರೆ ಸೋಮವಾರದಂದು ನಿರ್ಗತಿಕರಿಗೆ ಹಾಲು, ಸಕ್ಕರೆ, ಬಿಳಿ ಬಟ್ಟೆ ಮತ್ತು ಮೊಸರನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಭೋಲೇಶಂಕರನು ಸಂತುಷ್ಟನಾಗಿ ಭಕ್ತರಿಗೆ ಇಷ್ಟವಾದ ವರವನ್ನು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ- Lord Shiva: ಭಗವಾನ್ ಶಂಕರನ ಈ ಅದ್ಭುತ ಮಂತ್ರ ಪಠಿಸಿದ್ರೆ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ!


ಶಿವನ ಆಶೀರ್ವಾದ ಪಡೆಯಲು:
ನೀವು ಭೋಲೇನಾಥನನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಸೋಮವಾರ, ಮಹಾದೇವನಿಗೆ ಹಾಲು, ದಾತುರ, ಗಂಗಾಜಲ, ಶ್ರೀಗಂಧ, ಅಕ್ಷತೆ ಮತ್ತು ಬೇಲ್ಪತ್ರ ಇತ್ಯಾದಿಗಳನ್ನು ಅರ್ಪಿಸಿ. ಇದರಿಂದ ಮಹಾದೇವನು ಬೇಗನೇ ಸಂತುಷ್ಟನಾಗಿ ಭಕ್ತರನ್ನು ಅನುಗ್ರಹಿಸುತ್ತಾನೆ ಎಂದು ಹೇಳಲಾಗುತ್ತದೆ.


ಆರ್ಥಿಕ ಸಂಘರ್ಷಗಳಿಂದ ಹೊರಬರಲು:
ಯಾವುದೇ ಒಬ್ಬ ವ್ಯಕ್ತಿಯು  ಕಠಿಣ ಪರಿಶ್ರಮದ ನಂತರವೂ ಶುಭ ಫಲಿತಾಂಶಗಳನ್ನು ಪಡೆಯದಿದ್ದರೆ ಅಥವಾ ಅದಕ್ಕೆ ತಕ್ಕಂತೆ ಫಲಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಸೋಮವಾರ ಶಿವ ದೇವಾಲಯಕ್ಕೆ ಹೋಗಿ ಶಿವ ರಕ್ಷಾ ಸ್ತೋತ್ರವನ್ನು ಪಠಿಸಿ. ಈ ಪರಿಹಾರವನ್ನು ಮಾಡುವುದರಿಂದ ಭಕ್ತರು ಶೀಘ್ರದಲ್ಲೇ ಪ್ರಯೋಜನವನ್ನು ಪಡೆಯುತ್ತಾರೆ. 


ಇದನ್ನೂ ಓದಿ- ಈ ಮಂದಿರದಲ್ಲಿ 480 ವರ್ಷಗಳಿಂದ ಬೆಳಗುತ್ತಿದೆ ಅಖಂಡ ಜ್ಯೋತಿ


ಕೌಟುಂಬಿಕ ಸಂತೋಷ-ಸಮೃದ್ಧಿಗಾಗಿ:
ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ಸೋಮವಾರದಂದು ಶಿವನಿಗೆ ತುಪ್ಪ, ಸಕ್ಕರೆ ಮತ್ತು ಗೋಧಿ ಹಿಟ್ಟಿನಿಂದ ಮಾಡಿದ ಭೋಗ್ ಅನ್ನು ಅರ್ಪಿಸಿ. ನಂತರ ಶಿವನಿಗೆ ಆರತಿಯನ್ನು ಬೆಳಗಿಸಿ. ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣಗೊಂಡು ಶಿವನ ಆಶೀರ್ವಾದ ಸಿಗಲಿದೆ. ಅಂತಹ ಮನೆಯಲ್ಲಿ ಎಂದಿಗೂ ಸಹ ಸುಖ-ಸಂತೋಷಕ್ಕೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.