August Monthly Horoscope Predictions: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯ ದೇವ ಸೇರಿದಂತೆ ಆಗಸ್ಟ್ ತಿಂಗಳಲ್ಲಿ ಕೆಲವು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಮುಂದಿನ ತಿಂಗಳು ಎಂದರೆ ಆಗಸ್ಟ್ ತಿಂಗಳಿನಲ್ಲಿ ನಾಲ್ಕು ದೊಡ್ಡ ಗ್ರಹಗಳು ಸೂರ್ಯ, ಮಂಗಳ, ಬುಧ, ಶುಕ್ರ ಗ್ರಹಗಳು ಪರಿವರ್ತನೆ ಆಗಲಿದ್ದು ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಅದರಲ್ಲೂ, ಮುಂದಿನ ತಿಂಗಳು ಮೂರು ರಾಶಿಯವರ ಜೀವನದಲ್ಲಿ ಹಣದ ಮಳೆಯೇ ಸುರಿಯಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಆಗಸ್ಟ್ ತಿಂಗಳಿನಲ್ಲಿ ಯಾವ ಗ್ರಹ ಯಾವಾಗ ತನ್ನ ಪಥ ಬದಲಿಸಲಿದೆ? ಯಾವ ರಾಶಿಯವರಿಗೆ ಈ ತಿಂಗಳು ಶುಭಕರವಾಗಿದೆ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಆಗಸ್ಟ್ ತಿಂಗಳಲ್ಲಿ ಯಾವ ರಾಶಿ ಯಾವಾಗ ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ? 
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಮೊದಲಿಗೆ ಆಗಸ್ಟ್ 7 ರಂದು  ಐಷಾರಾಮಿ ಜೀವನಕಾರಕನಾದ ಶುಕ್ರ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇದಾದ ಒಂದು ವಾರದ ನಂತರ, ಆಗಸ್ಟ್ 17ರಂದು ಗ್ರಹಗಳಲ್ ರಾಜನಾದ ಸೂರ್ಯನು ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಮರುದಿನವೇ, ಆಗಸ್ಟ್ 18ರಂದು ಕಮಾಂಡರ್ ಗ್ರಹ ಮಂಗಳನು ರಾಶಿ ಬದಲಾಯಿಸಲಿದ್ದಾನೆ. ಈ ತಿಂಗಳ ಕೊನೆಯ ವಾರದಲ್ಲಿ ಆಗಸ್ಟ್ 24ರಂದು ಗ್ರಹಗಳ ರಾಜಕುಮಾರ ಬುಧ ರಾಶಿ ಬದಲಾಯಿಸಲಿದ್ದಾನೆ. ಈ ಎಲ್ಲಾ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ಮೂರು ರಾಶಿಯವರ ಜೀವನದಲ್ಲಿ ಸಂಪತ್ತಿನ ಹೊಳೆಯನ್ನೇ ಹರಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 


ಇದನ್ನೂ ಓದಿ- Surya Gochara: ವಾಶಿ ರಾಜಯೋಗದಿಂದ ಸೂರ್ಯನಂತೆ ಕಂಗೊಳಿಸಲಿದೆ ಮೂರು ರಾಶಿಯವರ ಭವಿಷ್ಯ


ಈ ಮೂರು ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಸುರಿಯಲಿದೆ ಹಣದ ಮಳೆ: 
ಮೇಷ ರಾಶಿ: 

ಆಗಸ್ಟ್‌ನಲ್ಲಿ ನಾಲ್ಕು ಪ್ರಮುಖ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ಮೇಷ ರಾಶಿಯವರ ಜೀವನದಲ್ಲಿ ವಿಶೇಷ ಲಾಭವನ್ನು ನೀಡಲಿದೆ. ಈ ಮಾಸದಲ್ಲಿ ಮೇಷ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ವೇಗ ಕಂಡುಬರಲಿದ್ದು, ಶೀಘ್ರವೇ ಅವು ಪೂರ್ಣಗೊಳ್ಳಲಿವೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿವೆ. 


ಮಿಥುನ ರಾಶಿ: 
ಮುಂದಿನ ತಿಂಗಳು ಮಿಥುನ ರಾಶಿಯವರಿಗೂ ಕೂಡ ಶುಭಕರವಾಗಿದೆ. ಈ ಸಮಯದಲ್ಲಿ ಮಿಥುನ ರಾಶಿಯ ಜನರಿಗೆ ನಿರೀಕ್ಷಿತ ಲಾಭ ಪ್ರಾಪ್ತಿಯಾಗಲಿದ್ದು, ಯೋಜಿತ ಕೆಲಸಗಳು ಬೇಗ ಪೂರ್ಣಗೊಳ್ಳಲಿವೆ. ಇದರಿಂದ ಉತ್ತಮ ಆರ್ಥಿಕ ಲಾಭವನ್ನೂ ಕೂಡ ನಿರೀಕ್ಷಿಸಬಹುದು. ಉದ್ಯೋಗಸ್ಥರಿಗೆ ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಪ್ರಯೋಜನವಾಗಲಿದೆ. ಹಣದ ಹೂಡಿಕೆಯಿಂದ ಲಾಭವಾಗಲಿದೆ. 


ಇದನ್ನೂ ಓದಿ- Chaturgrahi Yoga: 21 ದಿನಗಳ ಬಳಿಕ ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ


ಸಿಂಹ ರಾಶಿ: 
ಆಗಸ್ಟ್ ತಿಂಗಳು ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯವರಿಗೆ ಅತ್ಯುತ್ತಮ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುವಿರಿ. ಇದರಿಂದ ನಿಮ್ಮ ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳಲಿದೆ. ನೀವು ಹೊಸ ಬ್ಯುಸಿನೆಸ್ ಆರಂಭಿಸಲು ಯೋಚಿಸುತ್ತಿದ್ದರೆ ಇದು ತುಂಬಾ ಮಂಗಳಕರ ಸಮಯವಾಗಿದೆ. ನಿಮ್ಮ ಕುಟುಂಬದವರೊಂದಿಗೆ ಬಂಧನ ಬಿಗಿಯಾಗಲಿದ್ದು, ಸಂತಸಮಯ ಜೀವನವನ್ನೂ ಆನಂದಿಸುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.