Planets Health Connection: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಪ್ರತಿ ಗ್ರಹವೂ ಸಹ ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪರಿಣಾಮಗಳನ್ನು ಉಂಟು ಮಾಡುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಒಂಬತ್ತು ಗ್ರಹಗಳಲ್ಲಿ ಜಾತಕದಲ್ಲಿ ಯಾವುದೇ ಒಂದು ಗ್ರಹ ಸರಿಯಿಲ್ಲದಿದ್ದರೂ ಅದು ವ್ಯಕ್ತಿಯನ್ನು ನಾನಾ ರೀತಿಯಾಗಿ ಬಾಧಿಸುತ್ತದೆ. ಅದರಲ್ಲೂ, ಕೆಲವು ಗ್ರಹಗಳು ವ್ಯಕ್ತಿಯ ಆರೋಗ್ಯದ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮವನ್ನು ಉಂಟುಮಾಡಬಹುದು. 


COMMERCIAL BREAK
SCROLL TO CONTINUE READING

ಗ್ರಹಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ರತ್ನದ ಕಲ್ಲುಗಳನ್ನು ಧರಿಸಲು ಜ್ಯೋತಿಷಿಗಳು ಶಿಫಾರಸ್ಸು ಮಾಡುತ್ತಾರೆ. ಗ್ರಹಗಳಿಗೆ ಸಂಬಂಧಿತ ರತ್ನ ಧಾರಣೆಯಿಂದ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆಯೂ ಇದೆ. ಹಾಗಿದ್ದರೆ, ಜಾತಕದಲ್ಲಿ ಯಾವ ಗ್ರಹ ದೋಷವಿದ್ದರೆ ಯಾವ ಆರೋಗ್ಯ ಸಮಸ್ಯೆ ಬಾಧಿಸುತ್ತದೆ. ಅಂತಹ ಸಂದರ್ಭದಲ್ಲಿ ಯಾವ ರತ್ನವನ್ನು ಧರಿಸಬೇಕು ಎಂದು ತಿಳಿಯೋಣ... 


ನವಗ್ರಹಗಳಲ್ಲಿ ಯಾವ ಗ್ರಹ ದೋಷವಿದ್ದರೆ ಯಾವ ಆರೋಗ್ಯ ಸಮಸ್ಯೆ ಕಾಡುತ್ತೆ! 
ಸೂರ್ಯ ಗ್ರಹ: 

ವ್ಯಕ್ತಿಯ ಜಾತಕದಲ್ಲಿ ಸೂರ್ಯ ಗ್ರಹ ದೋಷವಿದ್ದಾಗ ದೀರ್ಘಕಾಲದ ಜ್ವರ, , ಕಣ್ಣಿನ ಕಾಯಿಲೆ, ತಲೆನೋವು, ಅಧಿಕ ರಕ್ತದೊತ್ತಡ, ಪಿತ್ತಕೋಶದ ಕಾಯಿಲೆ, ಹೃದ್ರೋಗದಂತಹ ಸಮಸ್ಯೆಗಳು ಹೆಚ್ಚು ಬಾಧಿಸಬಹುದು. ಇದರಿಂದ ಪರಿಹಾರಕ್ಕಾಗಿ ಮಾಣಿಕ್ಯ ಧಾರಣೆ ಒಳ್ಳೆಯದು ಎನ್ನಲಾಗುತ್ತದೆ. 


ಚಂದ್ರ ಗ್ರಹ: 
ಜಾತಕದಲ್ಲಿ ಚಂದ್ರ ಗ್ರಹ ದೋಷವಿದ್ದಾಗ ನೆಗಡಿ, ಕೆಮ್ಮು, ಅತಿಸಾರ, ನ್ಯುಮೋನಿಯಾ, ಜ್ವರ, ಮಾನಸಿಕ ಆಯಾಸ, ಅಸ್ತಮಾ, ಉಸಿರಾಟದ ಕಾಯಿಲೆಗಳು ಹೆಚ್ಚು ತೊಂದರೆ ನೀಡಬಹುದು. ಇವರಿಗೆ ಮುತ್ತು ಧಾರಣೆಯಿಂದ ಪರಿಹಾರ ಸಿಗಬಹುದು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. 


ಇದನ್ನೂ ಓದಿ- December Horoscope: ಡಿಸೆಂಬರ್‌ನಲ್ಲಿ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆಯಿಂದ ಬೆಳಗಲಿದೆ ಈ 5 ರಾಶಿಯವರ ಭಾಗ್ಯ


ಮಂಗಳ ಗ್ರಹ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಮಂಗಳ ಗ್ರಹ ಅಶುಭ ಸ್ಥಾನದಲ್ಲಿದಾಗ ರಕ್ತದ ಹರಿವು, ರಕ್ತಸ್ರಾವ, ಸುಟ್ಟಗಾಯ, ಅಪಘಾತ, ರಕ್ತ ಅಸ್ವಸ್ಥತೆ, ಚರ್ಮ ರೋಗ, ಪೈಲ್ಸ್, ಕುಷ್ಠ, ಮೂಳೆ ಮುರಿತದಂತಹ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇಂತಹ ಸಂದರ್ಭದಲ್ಲಿ ಹವಳ ಧಾರಣೆ ಒಳ್ಳೆಯ ಫಲ ನೀಡಬಹುದು. 


ಬುಧ ಗ್ರಹ: 
ಯಾವುದೇ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹ ದೋಷವಿದ್ದಾಗ ಇದರಿಂದ ಶಕ್ತಿಹೀನತೆ, ಹೊಟ್ಟೆನೋವು, ಹೃದಯಾಘಾತ, ಮೂಗಿಗೆ ಸಂಬಂಧಿಸಿದ ರೋಗಗಳು, ಜ್ಞಾಪಕ ಶಕ್ತಿ ನಷ್ಟದಂತಹ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಪಚ್ಚೆ ಧರಿಸುವುದರಿಂದ ಇದರಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. 


ಗುರು ಗ್ರಹ: 
ಜಾತಕದಲ್ಲಿ ಗುರು ಗ್ರಹ ದೋಷವಿದ್ದಾಗ  ಗಂಟಲಿನ ತೊಂದರೆ, ಕೆಮ್ಮು, ಅತಿಸಾರ, ಯಕೃತ್ತಿನ ಸಮಸ್ಯೆಗಳು, ಸಂಧಿವಾತ, ಮಲಬದ್ಧತೆ,  ಮೂರ್ಛೆ, ಕಿವಿ ರೋಗಗಳು, ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ತೊಂದರೆ ಉಂಟು ಮಾಡಬಹುದು. ಈ ಸಂದರ್ಭದಲ್ಲಿ ನೀಲಮಣಿ ಧರಿಸುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


ಶುಕ್ರ ಗ್ರಹ: 
ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಗ್ರಹ ದೋಷವಿದ್ದಾಗ ಟಿಬಿ, ಕಣ್ಣಿನ ಕಾಯಿಲೆಗಳಾದ ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನ ಪೊರೆ ಮತ್ತು ಗ್ಲುಕೋಮಾ, ಹಿಸ್ಟೀರಿಯಾ, ಗರ್ಭಾಶಯದ ಕಾಯಿಲೆಗಳು, ಮೂತ್ರದ ಕಾಯಿಲೆಗಳು ಬಾಧಿಸಬಹುದು. ಇದರಿಂದ ಪರಿಹಾರಕ್ಕಾಗಿ ವಜ್ರ ಧರಿಸುವಂತೆ ಜ್ಯೋತಿಷಿಗಳು ಪರಿಹಾರ ನೀಡುತ್ತಾರೆ. 


ಇದನ್ನೂ ಓದಿ- Budh Gochar: ಇನ್ನೊಂದು ತಿಂಗಳು ಈ ರಾಶಿಯವರ ಮೇಲಿರಲಿದೆ ಬುಧನ ಕೃಪೆ, ಬಂಪರ್ ಆದಾಯ


ಶನಿ ಗ್ರಹ: 
ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು ಎಂದು ಪರಿಗಣಿಸಲಾಗಿರುವ ಶನಿ ದೇವನ ದೋಷವು ಕೈ, ಕಾಲು ಅಥವಾ ದೇಹದ ಮೂಳೆಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಮಾತ್ರವಲ್ಲ, ಜಾತಕದಲ್ಲಿ ಶನಿ ದೋಷವಿದ್ದರೆ ಮಲಬದ್ಧತೆ, ಕ್ಯಾನ್ಸರ್, ಊತ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಇದರಿಂದ ಪರಿಹಾರಕ್ಕಾಗಿ ನೀಲಂ ರತ್ನ ಧರಿಸುವಂತೆ ಸೂಚಿಸಲಾಗುತ್ತದೆ. 


ರಾಹು ಗ್ರಹ: 
ದುಷ್ಟ ಗ್ರಹ ಎಂತಲೇ ಕರೆಯಲ್ಪಡು ರಾಹು ಗ್ರಹ ದೋಷವು ಮಾನಸಿಕ ಅಸ್ವಸ್ಥತೆ, ಪ್ರೇತಗಳ ಭಯ, ಸಿಡುಬು, ಗಾಳಿಯ ಅಸ್ವಸ್ಥತೆಗಳು, ಬೆನ್ನುಮೂಳೆಯ ತೊಂದರೆಗಳು, ಚರ್ಮದ ಸಮಸ್ಯೆಗಳನ್ನು ಸೃಷ್ಟಿಸಬಹುದು. ಗೋಮೇಧ ಧರಿಸುವುದರಿಂದ ಈ ಕಾಯಿಲೆಗಳಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ.


ಕೇತು ಗ್ರಹ: 
ಪಾಪ ಗ್ರಹಗಳಲ್ಲಿ ಒಂದಾದ ಕೇತು ದೋಷವಿದ್ದಾಗ ಅಂತಹ ವ್ಯಕ್ತಿ ರಕ್ತಹೀನತೆ, ಸುಟ್ಟಗಾಯ, ನ್ಯುಮೋನಿಯಾ, ಉಬ್ಬಸ, ರಕ್ತ ದೋಷ, ಪಿತ್ತದ ಸಮಸ್ಯೆ, ಸಾಂಕ್ರಾಮಿಕ ರೋಗಗಳಿಗೆ ಬೇಗ ಒಳಗಾಗಬಹುದು. ಲೆಹ್ಸುನಿಯಾ ರತ್ನ ಧಾರಣೆಯಿಂದ ಕೇತು ಗ್ರಹದೋಷವನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.