ಬೆಂಗಳೂರು : ಹಿಂದೂ ಹಬ್ಬಗಳಲ್ಲಿ ಪ್ರಮುಖ ಹಬ್ಬ ಅಂದ್ರೆ ಶರನ್ನವರಾತ್ರಿ, ಈ ಹಬ್ಬ ನವ ದುರ್ಗೆಯರ ಆರಾಧನೆಗೆ ಸೂಕ್ತ ಸಮಯ. 9 ದಿನಗಳ ಕಾಲ ಶ್ರದ್ಧೆ, ನಿಷ್ಠೆಯಿಂದ ವೃತವನ್ನು ಆಚರಿಸಿದರೆ ಶಕ್ತಿದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ.


COMMERCIAL BREAK
SCROLL TO CONTINUE READING

ಹಬ್ಬದಂದು ಉತ್ಸವ, ಪುರಾಣ ಪಠಣ ಸೇರಿದಂತೆ ಪ್ರಮುಖ ಆಚರಣೆಗಳು ಜರುಗುತ್ತವೇಯಾದರೂ ನವರಾತ್ರಿ ಎಂದರೆ ವೃತ. ಈ ಬಗ್ಗೆ ಭವಿಷ್ಯೋತ್ತರ ಪುರಾಣದಲ್ಲಿ ಆಶ್ವೀಜ ಮಾಸದಲ್ಲಿ ಬರುವ ವೃತದ ಬಗ್ಗೆ ಭಗವಂತನೇ ನಾರದರಿಗೆ ನವರಾತ್ರಿಯ ಮಹಾತ್ಮೆಯನ್ನು ಹೇಳಿದ್ದಾನೆ. ದಶಮಿಯವರೆಗಿನ ನವದಿನಗಳಲ್ಲಿ ನವದುರ್ಗೆಯ ರೂಪದಲ್ಲಿರುವ ಶ್ರೀ ಮಹಾಲಕ್ಷ್ಮಿಯನ್ನು ಆರಾಧಿಸಲು ಹಾಗೂ ಅನುಗ್ರಹ ಪಡೆಯಲು ವೃತಗಳನ್ನ ಮಾಡಬೇಕು.


ಇದನ್ನೂ ಓದಿ: Numerology: ಪ್ರಧಾನಿ ಮೋದಿ ಜನಿಸಿದ ಈ ದಿನ ಹುಟ್ಟಿದವರ ಗುಣ, ವಿಶೇಷತೆಗಳಿವು


ತಾಯಿ ಜಾಮುಂಡೇಶ್ವರಿ ಮಂಗಲಾ, ಕಾಳೀ, ಸ್ವಧಾ, ಸ್ವಾಹಾ, ಕಪಾಲಿನೀ, ದುರ್ಗಾ, ಕ್ಷಮಾ, ಶಿವಾ, ಧಾತ್ರಿ ಮುಂತಾದ ರೂಪಗಳಲ್ಲಿ ಭಕ್ತರ ಇಷ್ಟಾರ್ಥವನ್ನು ಪೂರೈಸುತ್ತಾಳೆ ಎಂಬ ನಂಬಿಕೆಯೂ ಇದೆ. ಶರನ್ನವರಾತ್ರಿ 2022 ಸೆಪ್ಟೆಂಬರ್ 26 ರಂದು ಘಟಸ್ಥಾಪನೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 5 ರಂದು ವಿಜಯ ದಶಮಿ ಮತ್ತು ದುರ್ಗಾ ವಿಸರ್ಜನದೊಂದಿಗೆ ಕೊನೆಗೊಳ್ಳುತ್ತದೆ. ನವರಾತ್ರಿಯು ದುರ್ಗಾ ದೇವಿಯನ್ನು ಗೌರವಿಸುವ ಮಂಗಳಕರ ಹಿಂದೂ ಹಬ್ಬವಾಗಿದೆ. ಪ್ರಮುಖ ಹಿಂದೂ ಹಬ್ಬವಾಗಿರುವ ನವರಾತ್ರಿಯನ್ನು ದೇಶದಾದ್ಯಂತ ಆಚರಿಸಲಾಗುತ್ತದೆ ಮತ್ತು ನಮ್ಮ ಮನೆಗಳಲ್ಲಿ ವಿವಿಧ ಅವತಾರಗಳಲ್ಲಿ ದುರ್ಗಾ ದೇವಿಯನ್ನಿಟ್ಟು ಪೂಜಿಸಲಾಗುತ್ತದೆ.


ಮಾ ಬ್ರಹ್ಮಚಾರಿಣಿ ಪೂಜಾ ವಿಧಿ ವಿಧಾನ :  ಭಕ್ತರು ಬೇಗ ಎದ್ದು ಸ್ನಾನ ಮಾಡಬೇಕು. ಹೂವು, ರೋಲಿ, ಚಂದನ ಮುಂತಾದ ಎಲ್ಲಾ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಮಾ ಬ್ರಹ್ಮಚಾರಿಣಿಗೆ ಅರ್ಪಿಸಬೇಕು. ನಂತರ ಮಂತ್ರಗಳನ್ನು ಪಠಿಸಬೇಕು ಮತ್ತು ದುರ್ಗಾ ಮಾತೆಗೆ ವಿಶೇಷ ಆರತಿಯನ್ನು ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಬೇಕು.


ಫಲ ಪ್ರದಾಯಕ ಮಂತ್ರ


ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣ್ಯೈ ರೂಪೇಣ ಸಂಸ್ಥಿತಾ | 
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ |
ದೇವಿ ಪ್ರಸಿದಾಥು ಮಾಯಿ ಬ್ರಹ್ಮಚಾರಿಣ್ಯ ನುತ್ಥಮಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.