Putrada Ekadhashi: ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪುತ್ರದಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ 27 ಆಗಸ್ಟ್ 2023ರ ಭಾನುವಾರದಂದು ಪುತ್ರದಾ ಏಕಾದಶಿ ಇದ್ದು, ಈ ದಿನ ಉಪವಾಸ ಆಚರಣೆಯಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ, ಸಂತಾನ ಭಾಗ್ಯ, ಕುಟುಂಬದಲ್ಲಿ ಶಾಂತಿ, ನೆಮ್ಮದಿ, ಸುಖ-ಸಮೃದ್ಧಿಗಾಗಿ ಹಾಗೂ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಈ ದಿನ ಜನರು ಉಪವಾಸವನ್ನು ಮಾಡುತ್ತಾರೆ.  


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪುತ್ರದಾ ಏಕಾದಶಿಯ ದಿನ ಉಪವಾಸ ಆಚರಿಸಿ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಆ ಮನೆಯಲ್ಲಿ ತಲೆದೂರಿರುವ ಸಮಸ್ಯೆಗಳು ದೂರವಾಗುತ್ತವೆ. ಮಾತ್ರವಲ್ಲ, ಅಂತಹ ಮನೆಯಲ್ಲಿ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಮಾತ್ರವಲ್ಲ, ಅಂತಹ ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿಗೆ ಎಂದಿಗೂ ಕೂಡ ಕೊರತೆಯೇ ಇರುವುದಿಲ್ಲ ಎಂಬ ನಂಬಿಕೆಯಿದೆ. ಆದರೆ, ಪುತ್ರದಾ ಏಕಾದಶಿಯ ದಿನ ನೀವು ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳಿಂದ ನಿಮ್ಮ ಜೀವನದಲ್ಲಿ ದಾರಿದ್ರ್ಯ ಎಂಬುದು ಬೆಂಬಿಡದೆ ಕಾಡಲಿದೆ ಎಂದು ನಿಮಗೆ ತಿಳಿದಿದೆದೆಯೇ? 


ಪುತ್ರದಾ ಏಕಾದಶಿಯ ದಿನ ಈ ಕೆಲಸಗಳನ್ನು ಮಾಡುವುದರಿಂದ ಬೆಂಬಿಡದೆ ಕಾಡುತ್ತೆ ದಾರಿದ್ಯ್ರ: 
ಧಾರ್ಮಿಕ ನಂಬಿಕೆಗಳ ಪ್ರಕಾರ, ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಇದಲ್ಲದೆ, ಪ್ರತಿ ಮಾಸದಲ್ಲೂ ಬರುವ ಏಕಾದಶಿಗಳಿಗೆ ಅದರದ್ದೇ ಆದ ಪ್ರಾಮುಖ್ಯತೆಯೂ ಇದೆ. ಒಂದೊಮ್ಮೆ ನೀವು ಏಕಾದಶಿ ವ್ರತವನ್ನು ಆಚರಿಸುತ್ತಿದ್ದಾರೆ ಅಂತಹ ಸಂದರ್ಭದಲ್ಲಿ ಕೆಲವು ವಿಚಾರಗಳ ಬಗ್ಗೆ ವಿಶೇಷವಾದ ಗಮನಹರಿಸುವುದು ಬಹಳ ಅಗತ್ಯ. ಇಲ್ಲದಿದ್ದರೆ, ಅದು ನಿಮ್ಮ ಜೀವನದಲ್ಲಿ ಶುಭ ಫಲಗಳ ಬದಲಿಗೆ ಅಶುಭ ಫಲಗಳನ್ನು ತರಬಹುದು. 


ಇದನ್ನೂ ಓದಿ- ನಾಗರ ಪಂಚಮಿಯಂದು ವಿಸ್ಮಯ ಚೇಳು ಜಾತ್ರೆ: ವಿಷಜಂತುಗಳ ಜೊತೆ ಜನರ ಸಂಭ್ರಮ


ಧಾರ್ಮಿಕ ನಂಬಿಕೆಗಳ ಪ್ರಕಾರ, ಪುತ್ರದಾ ಏಕಾದಶಿಯಲ್ಲಿ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಅಂತಹ ತಪ್ಪುಗಳು ಯಾವುವೆಂದರೆ...
* ತುಳಸಿ ಗಿಡಕ್ಕೆ ನೀರು: 

ಸಾಮಾನ್ಯವಾಗಿ ನಿತ್ಯ ಮುಂಜಾನೆ ತುಳಸಿ ಸಸ್ಯಕ್ಕೆ ನೀರೇರೆಯಲಾಗುತ್ತದೆ. ಆದರೆ, ಏಕಾದಶಿಯ ದಿನ ತುಳಸಿ ಮಾತೆಯೂ ಭಗವಾನ್ ವಿಷ್ಣುವಿಗಾಗಿ ಉಪವಾಸವನ್ನು ಆಚರಿಸುತ್ತಾಳೆ. ಹಾಗಾಗಿ, ಈ ದಿನ ತುಳಸಿ ಸಸ್ಯಕ್ಕೆ ನೀರು ಹಾಕುವುದರಿಂದ ತುಳಸಿಯ ವ್ರತಕ್ಕೆ ಭಂಗ ತಂದಂತೆ ಆಗುತ್ತದೆ. ನಿಮ್ಮ ಈ ತಪ್ಪು ಸಂಪತ್ತಿನ ದೇವತೆ ಲಕ್ಷ್ಮಿಯ ಮುನಿಸಿಗೂ ಕಾರಣವಾಗಬಹುದು. 


* ತುಳಸಿ ಎಲೆ ಕೀಳುವ ತಪ್ಪು: 
ಭಗವಾನ್ ವಿಷ್ಣುವಿನ ಪೂಜೆಗೆ ತುಳಸಿ ದಳ ತುಂಬಾ ಶ್ರೇಷ್ಠ. ಆದರೆ, ನೀವು ತುಳಸಿ ದಳವನ್ನು ಒಂದು ದಿನ ಮುನ್ನವೇ ಕಿತ್ತು ಇಡಬೇಕು. ಏಕಾದಶಿಯ ದಿನ ತುಳಸಿ ದಳಗಳನ್ನು ಕೀಳುವ ತಪ್ಪನ್ನು ಎಂದಿಗೂ ಮಾಡಬೇಡಿ. 


* ಮನೆಯಲ್ಲಿ ಕೊಳಕು: 
ಶುಚಿತ್ವ ಇಲ್ಲದ ಕಡೆ ತಾಯಿ ಮಹಾಲಕ್ಷ್ಮೀ ಕ್ಷಣಮಾತ್ರವೂ ಇರಲು ಇಚ್ಚಿಸುವುದಿಲ್ಲ. ಹಾಗಾಗಿ, ಏಕಾದಶಿಯಲ್ಲಿ ಮಾತ್ರವಲ್ಲ, ನಿತ್ಯವೂ ನಿಮ್ಮ ಮನೆಯ ಶುಚಿತ್ವದ ಕಡೆಗೆ ಹೆಚ್ಚು ಗಮನಹರಿಸಿ. ವಿಶೇಷವಾಗಿ ಪೂಜಾ ಮನೆ ಮತ್ತು ಮುಖ್ಯ ಬಾಗಿಲನ್ನು ತುಂಬಾ ಸ್ವಚ್ಛವಾಗಿಡಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಚಿತ್ವ ಲಕ್ಷ್ಮಿಯನ್ನು ಆಕರ್ಷಿಸಿದರೆ, ಕೊಳಕು ಅಲಕ್ಷ್ಮಿಯನ್ನು ಆಹ್ವಾನಿಸುತ್ತದೆ. ಇದು ಮನೆಯಲ್ಲಿ ದುಃಖ, ಬಡತನ, ದಾರಿದ್ರ್ಯಕ್ಕೆ ಎಡೆಮಾಡಿಕೊಡಬಹುದು. 


ಇದನ್ನೂ ಓದಿ-  200 ವರ್ಷಗಳ ನಂತರ ರಕ್ಷಾಬಂಧನದ ದಿನ ಅಪರೂಪದ ಯೋಗ ! ಈ  ರಾಶಿಯವರ ಜೀವನದಲ್ಲಿ ಧನಾಗಮನ 


* ವಸ್ತ್ರದ ಬಣ್ಣ: 
ಪುತ್ರದಾ ಏಕಾದಶಿಯು ಸಂತಾನ ಭಾಗ್ಯ ಹಾಗೂ ತಮ್ಮ ಸಂತಾನದ ದೀರ್ಘಾಯುಷ್ಯಕ್ಕಾಗಿ ಆಚರಿಸುವ ವಿಶೇಷ ಏಕಾದಶಿ. ಹಾಗಾಗಿ, ಈ ದಿನ ಕಪ್ಪು ವಸ್ತ್ರಗಳನ್ನು ಧರಿಸಬೇಡಿ. ಅದರಲ್ಲೂ ವಿಶೇಷವಾಗಿ ಪೂಜಾ ವೇಳೆಯಲ್ಲಿ ಕಪ್ಪು ವಸ್ತ್ರಗಳನ್ನು ಧರಿಸದಿದ್ದರೆ ಒಳ್ಳೆಯದು. 


* ಕಿರಿಯರೊಂದಿಗೆ ಅನುಚಿತ ವರ್ತನೆ: 
ಪುತ್ರದಾ ಏಕಾದಶಿಯ ದಿನ ನಿಮಗಿಂತ ವಯಸ್ಸಿನಲ್ಲಿ ಚಿಕ್ಕವರೊಂದಿಗೆ, ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಇದರಿಂದ ನಿಮ್ಮ ಪೂಜಾ ಫಲ ದೊರೆಯದೆ ಇರಬಹುದು. 


* ತುಳಸಿ ಸಸ್ಯದ ಬಳಿ ಈ ಕೆಲಸಗಳನ್ನು ಮಾಡಬೇಡಿ: 
ಕೆಲವರು ತುಳಸಿ ಕುಂಡದ ಪಕ್ಕದಲ್ಲಿಯೇ ಚಪ್ಪಲಿ, ಬೂಟುಗಳನ್ನು ಬಿಟ್ಟಿರುತಾರೆ. ಆದರೆ, ನೆನಪಿಡಿ, ಲಕ್ಷ್ಮಿ ಸ್ವರೂಪಿಣಿಯಾದ ತುಳಸಿ ಸಸ್ಯದ ಸಮೀಪ ಇವುಗಳನ್ನು ಇಡುವುದರಿಂದ ಅಂತಹ ಮನೆಯಿಂದ ಲಕ್ಷ್ಮಿ ಹೊರನಡೆಯುತ್ತಾಳೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.