ಈ ವಸ್ತುಗಳನ್ನು ದಾನ ರೂಪದಲ್ಲಿ ನೀಡಿದರೆ ದಾನದೊಂದಿಗೆಯೇ ತೆರಳುವುದು ಜೀವನದ ಸುಖ ಶಾಂತಿ
ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಇರುವ ಕೆಲವೊಂದು ವಸ್ತುಗಳನ್ನು ದಾನ ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ. ಈ ವಸ್ತುಗಳನ್ನು ದಾನ ಮಾಡಿದರೆ ದಾನದ ಜೊತೆಗೆಯೇ ಮನೆಯ ನೆಮ್ಮದಿ, ಸುಖ ಶಾಂತಿ ಕೂಡಾ ಹೊರಟು ಹೋಗುತ್ತದೆಯಂತೆ.
ಬೆಂಗಳೂರು : ಪ್ರತಿಯೊಂದು ಧರ್ಮದಲ್ಲೂ ದಾನಕ್ಕೆ ಬಹಳ ಪ್ರಾಧಾನ್ಯತೆ ಇದೆ. ಪುರಾತನ ಕಾಲದಿಂದಲೂ ದಾನ ನೀಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ದಾನದ ಮಹತ್ವವನ್ನು ಕುರಿತು, ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ. ಒಬ್ಬ ವ್ಯಕ್ತಿ ತನ್ನ ಸ್ಥಾನಮಾನಕ್ಕೆ ಅನುಗುಣವಾಗಿ ತನ್ನ ದುಡಿಮೆಯ ಹಣದ ಹತ್ತನೇ ಒಂದು ಭಾಗವನ್ನು ದಾನ ಮಾಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ದಾನ ಮಾಡುವುದರಿಂದ ವ್ಯಕ್ತಿಯ ಕೆಟ್ಟ ಕರ್ಮದ ಫಲ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ದಾನ ಮಾಡುವುದರಿಂದ ಹಿಂದಿನ ಜನ್ಮದ ಪಾಪವೂ ಪರಿಹಾರವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಅದಕ್ಕಾಗಿಯೇ ಬ್ರಾಹ್ಮಣರಿಗೆ, ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಇರುವ ಕೆಲವೊಂದು ವಸ್ತುಗಳನ್ನು ದಾನ ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಕ್ಕಿನ ಪಾತ್ರೆಗಳನ್ನು ದಾನ ಮಾಡುವುದರಿಂದ ಕುಟುಂಬದ ಸುಖ-ಶಾಂತಿ ಹಾಳಾಗುತ್ತದೆ. ಜೊತೆಗೆ ಮನೆಯಲ್ಲಿ ಜಗಳವೂ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿಯೇ ಉಕ್ಕಿನ ಪಾತ್ರೆಗಳನ್ನು ದಾನ ಮಾಡುವುದು ಅಶುಭವೆಂದು ಹೇಳಲಾಗುತ್ತದೆ.
ಇದನ್ನೂ ಓದಿ : Friday Remedies: ಧನ-ಸಂಪತ್ತಿಗಾಗಿ ಇಂದೇ ಮನೆಯಲ್ಲಿ ಈ ಕೆಲಸ ಮಾಡಿ
ಈ ವಸ್ತುಗಳ ದಾನವನ್ನು ಸಹ ಅಶುಭ ಎಂದು ಹೇಳಲಾಗುತ್ತದೆ :
ಪೊರಕೆ ದಾನ :
ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮೀ ದೇವಿಯ ರೂಪ ಎಂದೇ ಹೇಳಲಾಗುತ್ತದೆ. ಅದಕ್ಕಾಗಿಯೇ ಪೊರಕೆಯನ್ನು ಎಂದಿಗೂ ದಾನ ರೂಪದಲ್ಲಿ ನೀಡಬಾರದು. ಒಂದು ವೇಳೆ ಪೊರಕೆಯನ್ನು ದಾನವಾಗಿ ನೀಡಿದರೆ ಅಂದಿನಿಂದಲೇ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಬಹುದು ಎಂದು ಹೇಳಲಾಗುತ್ತದೆ.
ಪಾತ್ರೆಗಳ ದಾನ :
ಹಿತ್ತಾಳೆ, ಬೆಳ್ಳಿ, ತಾಮ್ರ ಮೊದಲಾದ ಮಂಗಳಕರ ಮತ್ತು ಪವಿತ್ರ ಲೋಹಗಳಿಂದ ಮಾಡಿದ ಪಾತ್ರೆಗಳನ್ನು ದಾನ ಮಾಡುವುದು ಮಂಗಳಕರ. ಆದರೆ ಪ್ಲಾಸ್ಟಿಕ್, ಸ್ಟೀಲ್, ಅಲ್ಯೂಮಿನಿಯಂ ಮತ್ತು ಗಾಜಿನಂತಹ ಪಾತ್ರೆಗಳನ್ನು ಯಾರಿಗೂ ತಪ್ಪಿಯೂ ನೀಡಬಾರದು. ಇದು ಕೆಲಸ ಮತ್ತು ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ : ವಿಪರೀತ ರಾಜಯೋಗ : ಈ ರಾಶಿಗಳ ಬಾಳಲ್ಲಿ ಅದೃಷ್ಟದ ಹೊನಲು.. ಕೈಯಿಟ್ಟಲ್ಲೆಲ್ಲಾ ದುಡ್ಡು, ಹೆಜ್ಜೆಯಿಟ್ಟಲ್ಲೆಲ್ಲಾ ಗೆಲುವು!
ಅನ್ನದಾನ :
ಬಡವರಿಗೆ ಮತ್ತು ಹಸಿದವರಿಗೆ ಅನ್ನದಾನ ಮಾಡುವುದು ಪುಣ್ಯದ ಕಾರ್ಯ. ಆದರೆ, ಯಾರಿಗೂ ಹಳಸಿದ ಮತ್ತು ಎಂಜಲು ಆಹಾರವನ್ನು ನೀಡಬಾರದು. ಇದು ಮನೆಯಲ್ಲಿ ಬಡತನವನ್ನು ತರುತ್ತದೆ ಮತ್ತು ಕುಟುಂಬದ ಸದಸ್ಯರು ಯಾವಾಗಲೂ ಅನಾರೋಗ್ಯದಿಂದ ಇರುವಂತೆ ಮಾಡುತ್ತದೆ.
ಎಣ್ಣೆ ದಾನ :
ಶನಿವಾರದಂದು ಎಳ್ಳು ಮತ್ತು ಸಾಸಿವೆ ಎಣ್ಣೆಯನ್ನು ದಾನ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ. ಆದರೆ, ಬಳಸಿರುವ ಎಣ್ಣೆಯನ್ನು ಯಾವುದೇ ಕಾರಣಕ್ಕೂ ದಾನ ಮಾಡಬಾರದು. ಇದು ಶನಿ ದೇವನ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತದೆ.
ಇದನ್ನೂ ಓದಿ : ಇನ್ನೊಂದೇ ತಿಂಗಳಲ್ಲಿ ಈ ರಾಶಿಯವರ ಜೀವನದಲ್ಲಿ ಒಲಿದು ಬರುವಳು ವಿಜಯಲಕ್ಷ್ಮೀ ! ತುಂಬಿ ತುಳುಕುವುದು ಸುಖ ಸಂಪತ್ತು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.