ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಮುಂಬರುವ ವರ್ಷವು ಬಹಳಷ್ಟು ಬದಲಾವಣೆಗಳನ್ನು ಹೊತ್ತು ತರಲಿದೆ. ಮುಂದಿನ ವರ್ಷ ಅಂದರೆ 2023 ರಲ್ಲಿ ಅನೇಕ ರಾಶಿಯವರ ಭವಿಷ್ಯ ಬದಲಾಗಲಿದೆ. ಈ ರಾಶಿಯವರಿಗೆ ಉದ್ಯೋಗದಲ್ಲಿ ಪದೋನ್ನತಿಯಾಗಲಿದೆ. ಕೆಲಸದ ವಿಷಯದಲ್ಲಿ ಇವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಇದರ ಹೊರತಾಗಿ, ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ರಾಶಿಯವರ ಭವಿಷ್ಯ ರಾತೋ ರಾತ್ರಿ ಬದಲಾಗಲಿದೆ. 


COMMERCIAL BREAK
SCROLL TO CONTINUE READING

2023ರ ಅದೃಷ್ಟ ರಾಶಿಗಳಿವು :   
ತುಲಾ ರಾಶಿ :
ತುಲಾ ರಾಶಿಯವರ ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಏಪ್ರಿಲ್ ತಿಂಗಳಲ್ಲಿ ಬಡ್ತಿ  ಸಿಗಬಹುದು. ಆದರೆ ಸರ್ಕಾರಿ ನೌಕರರು ಸ್ವಲ್ಪ ಕಾಯಬೇಕಾಗುತ್ತದೆ. ಸರ್ಕಾರಿ ನೌಕರರು ಜೂನ್-ಜುಲೈ ತಿಂಗಳಲ್ಲಿ ದೊಡ್ಡ ಮಟ್ಟದ ಪ್ರಯೋಜನಗಳನ್ನು ಪಡೆಯಲಿದ್ದಾರೆ. ನಿರುದ್ಯೋಗಿ ಯುವಕರಿಗೂ 2023ರಲ್ಲಿ  ಉದ್ಯೋಗ ಅವಕಾಶಗಳು ಅರಸಿ ಬರಲಿವೆ. 


ಇದನ್ನೂ ಓದಿ : Rahu Transit 2023: ಮುಂದಿನ ವರ್ಷ ರಾಹು ಸಂಕ್ರಮಣ, ಈ ಒಂದು ರಾಶಿಯ ಮೇಲೆ ಹೆಚ್ಚು ಪರಿಣಾಮ!


ವೃಷಭ ರಾಶಿ  :
ವೃಷಭ ರಾಶಿಯ ಜನರ ಅದೃಷ್ಟದ ಬಾಗಿಲು ಹೊಸ ವರ್ಷದಲ್ಲಿ ತೆರೆಯಲಿದೆ.  ವೃತ್ತಿಜೀವನದ ವಿಷಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಈ ಸಮಯದಲ್ಲಿ ಹೊಸ ಉದ್ಯೋಗ ಸಿಗಲಿದೆ. ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಉದ್ಯೋಗವನ್ನು ಬದಲಾಯಿಸಲು ಬಯಸುವವರಿಗೂ ಯಶಸ್ಸು ಸಿಗಲಿದೆ. 


ಮೀನ ರಾಶಿ  :
2023 ಮೀನ ರಾಶಿಯವರಿಗೆ ಶುಭ ಅವಕಾಶಗಳನ್ನು ಹೊತ್ತು ತರುತ್ತದೆ. ಗುರುವಿನ ಆಶೀರ್ವಾದದಿಂದ ಈ ರಾಶಿಯವರು ಮಾಡುವ ಪ್ರತಿಯೊಂದು  ಕೆಲಸ ಯಶಸ್ವಿಯಾಗುತ್ತದೆ. ಏಪ್ರಿಲ್ ನಂತರ ಹಣ ಗಳಿಸುವ ನಿರೀಕ್ಷೆಯಿದೆ.  ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. 


ಇದನ್ನೂ ಓದಿ : Shani Dev: ಈ ಜನರಿಗೆ ಶನಿ ಎಂದಿಗೂ ಕಾಟ ಕೊಡುವುದಿಲ್ಲ, ಕಾರಣ ಇಲ್ಲಿದೆ


ಮಿಥುನ ರಾಶಿ  :
ಹೊಸ ವರ್ಷ 2023 ಮಿಥುನ ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆ ಕಂಡು ಬರಲಿದೆ. ಅವರ ವೃತ್ತಿಜೀವನದಲ್ಲಿ  ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆಗಳಿವೆ. ಹೊಸ ಉದ್ಯೋಗಾವಕಾಶಗಳೂ ಸಿಗಲಿವೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರು ಯಶಸ್ಸು ಸಿಗಬಹುದು. ಅನೇಕ ಸಂದರ್ಭಗಳಲ್ಲಿ ನೀವು ಮಾಡುವ ಕೆಲಸಗಳಿಂದ ಉತ್ತಮ ಫಲಿತಾಂಶ  ಸಿಗಲಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.