Marriage Tips : ಮದುವೆ ಎನ್ನುವುದು ಬಹಳ ಸೂಕ್ಷ್ಮವಾಗದ ವಿಚಾರ.ಮದುವೆ ಎನ್ನುವುದು ಜನುಮ ಜನುಮಗಳ ಸಂಬಂಧ ಎಂದು ಹೇಳಲಾಗುತ್ತದೆ.ಆದರೆ ಕೆಲವೊಮ್ಮೆ ಮದುವೆಯ ಕೆಲವೇ ಸಮಯದಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ವೈವಾಹಿಕ ಜೀವನ ಸುಗಮವಾಗಿ ಸಾಗಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಆಚಾರ್ಯ ಚಾಣಕ್ಯರು ತಮ್ಮ ಚಾಣಾಕ್ಯ ನೀತಿಯಲ್ಲಿ ಹೇಳಿದ್ದಾರೆ.ನಿಮ್ಮ ಸಂಬಂಧದಲ್ಲಿ ಯಾವುದೇ ರೀತಿಯ ಬಿರುಕು ಮೂಡಬಾರದು ಎಂದಾದರೆ ಮದುವೆಗೆ ಮೊದಲೇ ನಿಮ್ಮ ಸಂಗಾತಿ ಬಳಿ ಮೂರು  ಪ್ರಶ್ನೆಗಳನ್ನು ಕೇಳಬೇಕಂತೆ.ಈ ಮೂರೂ ಪ್ರಶ್ನೆಗಳಿಗೆ ಉತ್ತರ ಪಡೆದ ನಂತರ ಮದುವೆಯಾದರೆ ವೈವಾಹಿಕ ಜೀವನದಲ್ಲಿ ಯಾವ ರೀತಿಯ ಸಮಸ್ಯೆಯೂ ಕಾಣಿಸಿಕೊಳ್ಳುವುದಿಲ್ಲವಂತೆ.    


COMMERCIAL BREAK
SCROLL TO CONTINUE READING

ಆಚಾರ್ಯ ಚಾಣಕ್ಯರ ಪ್ರಕಾರ ಮದುವೆಗೂ ಮುನ್ನ ತಿಳಿದುಕೊಳ್ಳಲೇ ಬೇಕಾದ ವಿಚಾರ :  
ವಯಸ್ಸಿನ ಬಗ್ಗೆ ತಿಳಿದುಕೊಳ್ಳುವುದನ್ನು ಮರೆಯದಿರಿ : 

ಆಚಾರ್ಯ ಚಾಣಕ್ಯನ ನೀತಿ ಶಾಸ್ತ್ರದ ಪ್ರಕಾರ,ಮದುವೆಗೆ ಮೊದಲು ಪ್ರತಿಯೊಬ್ಬರಿಗೂ ತಾನು ಮದುವೆಯಾಗುವ ಹುಡುಗ ಅಥವಾ ಹುಡುಗಿಯ ವಯಸ್ಸಿನ ಬಗ್ಗೆ ನಿಖರವಾಗಿ ತಿಳಿದಿರಬೇಕು.ಪತಿ ಮತ್ತು ಪತ್ನಿಯ ನಡುವಿನ ವಯಸ್ಸಿನ ಅಂತರ ಮದುವೆಯಲ್ಲಿ ಬಹಳ ಮುಖ್ಯವಂತೆ. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಈ ಅಂಶ ಬಹಳ ಮುಖ್ಯ ಎನ್ನಲಾಗಿದೆ. ಅಂದರೆ ಇಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಾಗಿದ್ದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಗುತ್ತದೆ. ಹೀಗಾದಾಗ ದಾಂಪತ್ಯ ಜೀವನ ಸುಖಮಯವಾಗಿರುವುದು ಕೂಡಾ ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : Vastu Tips for Plants: ಮನೆ ಮುಂದೆ ಯಾವ ಸಸಿಗಳನ್ನು ನೆಡುವುದು ಶುಭ?


ಆರೋಗ್ಯದ ಬಗ್ಗೆಯೂ ಪರಿಶೀಲಿಸಿ :
ಆಚಾರ್ಯ ಚಾಣಕ್ಯನ ನೀತಿ ಶಾಸ್ತ್ರದಲ್ಲಿ ಮದುವೆಗೆ ಮೊದಲು, ನಿಮ್ಮ ಭವಿಷ್ಯದ ಸಂಗಾತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವುದು ಕೂಡಾ ಮುಖ್ಯ ಎಂದು ಹೇಳಲಾಗಿದೆ.ದೈಹಿಕ ಅಥವಾ ಮಾನಸಿಕ ಸಮಸ್ಯೆಯಾ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಲಾಗಿದೆ. ಇಲ್ಲವಾದರೆ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


ಸಂಬಂಧದ ಬಗ್ಗೆ ತಿಳಿದುಕೊಳ್ಳಿ :
ಆಚಾರ್ಯ ಚಾಣಕ್ಯ ಪ್ರಕಾರ ಮದುವೆಗೆ ಮುನ್ನ ನಿಮ್ಮ ಸಂಗಾತಿಯಾಗಲು ಹೋರಾಟ ವ್ಯಕ್ತಿಯ ಹಿಂದಿನ ಸಂಬಂಧಗಳ ಬಗ್ಗೆ ತಿಳಿದುಕೊಳ್ಳುವುದು ಕೂಡಾ ಮುಖ್ಯ. ಹಾಗಾಗಿ ಮದುವೆಯ ಮುನ್ನವೇ ಇದರ ಬಗ್ಗೆ ಮುಕ್ತವಾಗಿ ಮಾತನಾಡಿಕೊಳ್ಳಿ. ಈ ವಿಚಾರದ ಬಗ್ಗೆ ಮದುವೆಗೂ ಮುನ್ನವೇ ಸ್ಪಷ್ಟತೆ ಇದ್ದರೆ   ವೈವಾಹಿಕ ಜೀವನ ಉತ್ತಮವಾಗಿರುತ್ತದೆ. 


ಇದನ್ನೂ ಓದಿ : ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಯಾರಿಗೂ ಹೇಳಬಾರದಂತೆ!ಆಗಲೇ ಅದೃಷ್ಟ ನಿಮ್ಮ ಕೈ ಹಿಡಿಯುವುದು !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ