Vastu Tips: ಲಕ್ಷ್ಮಿ ದೇವಿಗೆ ಸಂಬಂಧಿಸಿದ ಈ ಒಂದು ವಸ್ತುವನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಹಣದ ಮಳೆಯಾಗುವುದು!
Vastu Tips For Money: ವಾಸ್ತು ಶಾಸ್ತ್ರದಲ್ಲಿ ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು.
Owl statue vastu: ವಾಸ್ತು ಶಾಸ್ತ್ರದಲ್ಲಿ ಅನೇಕ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಅದರ ಸಹಾಯದಿಂದ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು. ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಈ ವಸ್ತುಗಳನ್ನು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ, ಗೂಬೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೂ ಅನೇಕ ಜನರು ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡಲು ಹಿಂಜರಿಯುತ್ತಾರೆ. ಆದರೆ ಗೂಬೆಯನ್ನು ಮನೆ ಅಥವಾ ಕಚೇರಿಯಲ್ಲಿ ಇಡುವುದು ಮಂಗಳಕರವಾಗಿದೆ. ಹಾಗಾದರೆ ಗೂಬೆಗೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳನ್ನು ತಿಳಿಯೋಣ.
ಇದನ್ನೂ ಓದಿ: ಮೇಷ, ಮಿಥುನ ಸೇರಿದಂತೆ ಈ 5 ರಾಶಿಯವರಿಗೆ ಗೋಲ್ಡನ್ ಟೈಂ ಶುರು: ಸಿಗಲಿದೆ ಮಹಾಲಕ್ಷ್ಮಿ ಯೋಗದ ಅಖಂಡ ಲಾಭ
ಗೂಬೆಯು ಲಕ್ಷ್ಮಿ ದೇವಿಯ ವಾಹನವಾಗಿದೆ. ಆದ್ದರಿಂದ ಅದನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತಿನ ಕೊರತೆ ಆಗುವುದಿಲ್ಲ. ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರದ ಪ್ರಕಾರ ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಮನೆಯ ವಾಸ್ತು ದೋಷಗಳೂ ದೂರವಾಗುತ್ತವೆ. ಮನೆಯಲ್ಲಿ ಧನಾತ್ಮಕ ಶಕ್ತಿ ಸಂಚರಿಸುತ್ತದೆ.
ಯಾವ ದಿಕ್ಕಿನಲ್ಲಿ ಗೂಬೆ ವಿಗ್ರಹ ಇಡಬೇಕು:
ವಾಸ್ತು ಶಾಸ್ತ್ರದ ಪ್ರಕಾರ, ಗೂಬೆಯ ವಿಗ್ರಹವನ್ನು ಯಾವಾಗಲೂ ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಗೂಬೆಯ ವಿಗ್ರಹವನ್ನು ಈ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಗೂಬೆಯ ಮುಖವು ಮನೆಯ ಮುಖ್ಯ ದ್ವಾರದ ಕಡೆಗೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಬರುವುದಿಲ್ಲ ಮತ್ತು ಕೆಟ್ಟ ಕಣ್ಣು ಕೂಡ ಬರುವುದಿಲ್ಲ.
ಕಚೇರಿಯಲ್ಲಿಯೂ ಇರಿಸಬಹುದು :
ಮನೆಯ ಹೊರತಾಗಿ, ನೀವು ನಿಮ್ಮ ಕಛೇರಿಯಲ್ಲಿ ಗೂಬೆಯ ವಿಗ್ರಹವನ್ನು ಇಡಬಹುದು. ಅದನ್ನು ಕಛೇರಿಯಲ್ಲಿ ಇಡುವುದರಿಂದ ಧನಾತ್ಮಕತೆಯನ್ನು ತರುತ್ತದೆ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಇದರಿಂದಾಗಿ ವ್ಯಕ್ತಿಯು ಪ್ರಗತಿ ಹೊಂದುತ್ತಾನೆ ಮತ್ತು ಹೊಸ ಅವಕಾಶಗಳನ್ನು ಪಡೆಯುತ್ತಾನೆ.
ಇದನ್ನೂ ಓದಿ: 30 ವರ್ಷಗಳ ನಂತರ ಉಚ್ಛ್ರಾಯ ಸ್ಥಿತಿಯಲ್ಲಿ ಶನಿ ಮಹಾತ್ಮ! ಈ ರಾಶಿಯವರಿಗೆ ಕೋಟಿ ಗಳಿಸುವ ಯೋಗ !
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗೂಬೆಯ ವಿಗ್ರಹ ಇಡುವುದು ಫೋಟೋಕ್ಕಿಂತ ಉತ್ತಮವಾಗಿದೆ. ವಿಗ್ರಹವನ್ನು ಕಂಚಿನಿಂದ ಮಾಡಿದ್ದರೆ ಅದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿತವಾದ ಕಾರಣ ಶುಕ್ರವಾರದಂದು ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡಬೇಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.