ನವದೆಹಲಿ: ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮಶಾಂತಿಗಾಗಿ, ಧಾರ್ಮಿಕ ನಂಬಿಕೆಗಳ ಪ್ರಕಾರ ದಾನ ಮತ್ತು ತರ್ಪಣವು ಬಹಳ ಮುಖ್ಯವೆಂದು ಹೇಳಲಾಗುತ್ತದೆ. ಈ ವಿಶೇಷ ಕಾರ್ಯಕ್ಕಾಗಿ ಪ್ರತಿ ವರ್ಷ ಶ್ರಾದ್ಧ ಪಕ್ಷದ ಸಮಯದಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪಿತೃ ಪಕ್ಷದ ಈ 15 ದಿನಗಳಲ್ಲಿ ಜನರು ತಮ್ಮ ಪೂರ್ವಜರ ಆಶೀರ್ವಾದ ಪಡೆಯಲು ಶ್ರಾದ್ಧ ಆಚರಣೆಗಳನ್ನು ಮಾಡುತ್ತಾರೆ. ಪ್ರತಿವರ್ಷ ಪಿತೃಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಆಶ್ವೀಜ ಮಾಸದ ಅಮಾವಾಸ್ಯೆಯವರೆಗೆ ಇರುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 25ರವರೆಗೆ ಮುಂದುವರಿಯುತ್ತದೆ.


COMMERCIAL BREAK
SCROLL TO CONTINUE READING

ಪಿತೃ ಪಕ್ಷದ ಸಮಯದಲ್ಲಿ ಶುಭ ಕಾರ್ಯಗಳಿಗೆ ಸಂಪೂರ್ಣ ನಿಷೇಧವಿರುತ್ತದೆ. ಈ ಸಮಯದಲ್ಲಿ ಗೃಹ ಪ್ರವೇಶ, ಕ್ಷೌರ ಮತ್ತು ಹೊಸ ಮನೆ ಅಥವಾ ವಾಹನ ಖರೀದಿ ಮಾಡುವುದಿಲ್ಲ. ಅದೇ ರೀತಿ ಪಿತೃ ಪಕ್ಷವು ಜಾತಕದಲ್ಲಿ ಪಿತೃ ದೋಷವನ್ನು ತೆಗೆದುಹಾಕಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಪೂರ್ವಜರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದ ಪಡೆಯಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.


ಇದನ್ನೂ ಓದಿ: ಈ 5 ಸ್ಥಳಗಳಲ್ಲಿ ಮರೆತೂ ಸಹ ತುಳಸಿ ಗಿಡವನ್ನು ನೆಡಬೇಡಿ


ಪಿಂಡ ದಾನ ಅಗತ್ಯ


ಪಿತೃಪಕ್ಷದಲ್ಲಿ ಪಿಂಡ ದಾನ ಅಗತ್ಯ ಮತ್ತು ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರಾದ್ಧವನ್ನು ಮಾಡಲಾಗುತ್ತದೆ. ಕೆಲವು ಸ್ಥಳಗಳು ಪಿತೃ ಪಕ್ಷದಲ್ಲಿ ಪಿಂಡ ದಾನ ಮಾಡಲು ಬಹಳ ಪ್ರಸಿದ್ಧವಾಗಿವೆ. ಈ ಪೈಕಿ ಬಿಹಾರದ ಗಯಾದಲ್ಲಿ ಮಾಡುವ ಪಿಂಡ ದಾನವು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಪಿತೃಪಕ್ಷದಂದು ಬ್ರಾಹ್ಮಣರಿಗೆ ಅನ್ನ ನೀಡಬೇಕೆಂಬ ಕಾನೂನಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ತಮ್ಮ ಪೂರ್ವಜರ ಮರಣದ ದಿನಾಂಕದ ಬಗ್ಗೆ ತಿಳಿದಿಲ್ಲದವರು, ಅಮಾವಾಸ್ಯೆಯಂದು ಶ್ರಾದ್ಧ ಮಾಡಬಹುದು. ಈ ವರ್ಷದ ಪಿತೃಪಕ್ಷದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಈ ದಿನಾಂಕಗಳಲ್ಲಿ ಶ್ರಾದ್ಧ ಮಾಡಲಾಗುತ್ತದೆ


10 ಸೆಪ್ಟೆಂಬರ್ 2022 - ಪೂರ್ಣಿಮಾ ಶ್ರಾದ್ಧ ಭಾದ್ರಪದ, ಶುಕ್ಲ ಪೂರ್ಣಿಮಾ


11 ಸೆಪ್ಟೆಂಬರ್ 2022 - ಪ್ರತಿಪದೆ ಶ್ರಾದ್ಧ, ಅಶ್ವಿನ, ಕೃಷ್ಣ ಪ್ರತಿಪದ


12 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ದ್ವಿತೀಯ


13 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ತೃತೀಯಾ


14 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ಚತುರ್ಥಿ


15 ಸೆಪ್ಟೆಂಬರ್ 2022 - ಅಶ್ವಿನ , ಕೃಷ್ಣ ಪಂಚಮಿ


16 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ಷಷ್ಠಿ


17 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ಸಪ್ತಮಿ


18 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ಅಷ್ಟಮಿ


19 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ನವಮಿ


20 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ದಶಮಿ


21 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ಏಕಾದಶಿ


22 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ದ್ವಾದಶಿ


23 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ತ್ರಯೋದಶಿ


24 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ಚತುರ್ದಶಿ


25 ಸೆಪ್ಟೆಂಬರ್ 2022 - ಅಶ್ವಿನ, ಕೃಷ್ಣ ಅಮವಾಸ್ಯೆ


ಪಿತೃ ಪಕ್ಷದಲ್ಲಿ ಪೂಜೆ ಹೇಗೆ ಮಾಡಬೇಕು?


ಪಿತೃ ಪಕ್ಷದ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಬಾರದು. ಪೂರ್ವಜರ ಶ್ರಾದ್ಧವನ್ನು ಅವರು ಮರಣ ಹೊಂದಿದ ಪಿತೃ ಪಕ್ಷದ ಅದೇ ದಿನಾಂಕದಂದು ಮಾಡಬೇಕು. ಈ ದಿನ ಸ್ನಾನ ಮಾಡಿದ ನಂತರ ಪೂಜಾ ಸ್ಥಳದಲ್ಲಿ ಕುಳಿತು ನಿಮ್ಮ ಪೂರ್ವಜರನ್ನು ಸ್ಮರಿಸಬೇಕು. ಪೂರ್ವಜರಿಗೆ ಸಾತ್ವಿಕ ಆಹಾರವನ್ನು ಅರ್ಪಿಸಿ. ಹಸುಗಳು, ನಾಯಿಗಳು, ಕಾಗೆಗಳು ಅಥವಾ ಇರುವೆಗಳಿಗೆ ಪಿಂಡ ದಾನವನ್ನು ಅರ್ಪಿಸಬೇಕು.


ಇದನ್ನೂ ಓದಿ: ಮಲ್ಟಿ ಟಾಲೆಂಟೆಡ್ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು , ಯಾರ ಮುಂದೆಯೂ ಸೋಲುವುದಿಲ್ಲ


ಈ ಕೆಲಸ ಮಾಡಬಾರದು  


ಈ ದಿನಗಳಲ್ಲಿ ಹೊಸ ಬಟ್ಟೆಗಳನ್ನು ಖರೀದಿಸುವುದು ಮತ್ತು ಧರಿಸುವುದನ್ನು ತಪ್ಪಿಸಬೇಕು. ಮತ್ತೊಂದೆಡೆ ಪಿತೃ ಪಕ್ಷದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಾಂಸಾಹಾರಿ ಆಹಾರ ಸೇವಿಸಬಾರದು. ಹೊಸ ಗೃಹ ಪ್ರವೇಶದಂತಹ ಶುಭ ಕಾರ್ಯಕ್ರಮಗಳನ್ನು ಈ ದಿನಗಳಲ್ಲಿ ಮಾಡಬಾರದು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.