ಬೆಂಗಳೂರು : ವ್ಯಾಪಾರವು ರಾಕೆಟ್ ವೇಗದಲ್ಲಿ ಬೆಳೆದು ಲಾಭ ಗಳಿಸಬೇಕಾದರೆ  ಕೆಲವು ಪರಿಹಾರವನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಾಧಿಸಲು, ಓಡುತ್ತಿರುವ ಬಿಳಿ ಕುದುರೆಗಳ ಫೋಟೋವನ್ನು ಮನೆಯಲ್ಲಿ ಇಡಬೇಕು. ಆದರೆ ಈ ಫೋಟೋದಲ್ಲಿ ಕುದುರೆಗಳ ಸಂಖ್ಯೆ ಎಷ್ಟಿರಬೇಕು ಎನ್ನುವುದು ಬಹಳ ಮುಖ್ಯ. ಜೊತೆಗೆ ಈ ಫೋಟೋವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಎನ್ನುವ ನಿಯಮ ಪಾಲಿಸುವುದು ಕೂಡಾ ಅಗತ್ಯ. 


COMMERCIAL BREAK
SCROLL TO CONTINUE READING

ಕುದುರೆಗಳು ಯಾವ ಬಣ್ಣದಲ್ಲಿರಬೇಕು?
ನೀವು ಕೂಡಾ ಅಭಿವೃದ್ದಿಯ ಕಾರಣಕ್ಕಾಗಿ ಮನೆಯಲ್ಲಿ ಕುದುರೆಯ ಫೋಟೋ ಹಾಕಬೇಕು ಅಂದುಕೊಂಡಿದ್ದರೆ ಮನೆಯಲ್ಲಿ ಬಿಳಿ ಬಣ್ಣದ ಕುದುರೆಗಳಿರುವ ಫೋಟೋವನ್ನು ಹಾಕಬೇಕು. ಬಿಳಿ ಬಣ್ಣವು ಧನಾತ್ಮಕ ಶಕ್ತಿಯ ಸಂಕೇತವಾಗಿದೆ. ಆದ್ದರಿಂದ, ಬಿಳಿ ಕುದುರೆಗಳ ಫೋಟೋಗಳನ್ನು ಗೋಡೆ ಮೇಲೆ ನೇತು ಹಾಕುವುದರಿಂದ ನಕಾರಾತ್ಮಕ ಶಕ್ತಿ ಕಳೆಗುಂದಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ.  


ಇದನ್ನೂ ಓದಿ :  2025ರಲ್ಲಿ ಈ ರಾಶಿಯವರಿಗೆ ಗುರು ಬಲ: ಕೂಡಿ ಬರಲಿದೆ ಕಂಕಣ ಭಾಗ್ಯ, ಸುಖ ಸಂಪತ್ತಿಗೆ ಕೊರತೆಯೇ ಇಲ್ಲ..!


ಚಿತ್ರದಲ್ಲಿ ಎಷ್ಟು ಕುದುರೆಗಳಿರಬೇಕು ? : 
ಮನೆ ಅಥವಾ ಕಚೇರಿಯಲ್ಲಿರುವ ಕುದುರೆಗಳ ಚಿತ್ರದಲ್ಲಿ ಎಷ್ಟು ಕುದುರೆಗಳು ಇರಬೇಕು ಎನ್ನುವ ಅಂಶ ಕೂಡಾ ಇಲ್ಲಿ ಬಹಳ ಮುಖ್ಯ. ಹೀಗೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಹಾಕುವ ಕುದುರೆ ಫೋಟೋದಲ್ಲಿ 7 ಕುದುರೆಗಳು ಇರಬೇಕು. ಮಾತ್ರವಲ್ಲ ಏಳೂ ಕುದುರೆಗಳ ಮುಖ ಸ್ಪಷ್ಟವಾಗಿ ಗೋಚರಿಸಬೇಕು. ಆ ಕುದುರೆಗಳು ಸಂತೋಷದಿಂದ ಓಡುತ್ತಿರುವಂತಿರಬೇಕು.


ಕುದುರೆಗಳ ಚಿತ್ರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು?
ಮನೆಯಲ್ಲಿ ಓಡುತ್ತಿರುವ ಬಿಳಿ ಕುದುರೆಗಳ ಫೋಟೋವನ್ನು ಪೂರ್ವ ದಿಕ್ಕಿನಲ್ಲಿ ಹಾಕಬೇಕು. ಈ ರೀತಿ ಮಾಡುವುದರಿಂದ ಗೌರವ ಮತ್ತು ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ಇನ್ನು ಇದನ್ನು ಹಾಲ್ ನಲ್ಲಿ  ಹಾಕುವುದಾದರೆ, ದಕ್ಷಿಣ ದಿಕ್ಕಿನಲ್ಲಿ ನೇತು ಹಾಕಬೇಕು. ಬಡ್ತಿ ಪಡೆಯಬೇಕು ಅಂದುಕೊಂಡಿದ್ದರೆ  ಮನೆಯ ಉತ್ತರ ದಿಕ್ಕಿಗೆ ಓಡುವ ಕುದುರೆಗಳ ಫೋಟೋ ಹಾಕಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. 


ಕಚೇರಿಯಲ್ಲಿ ಎಲ್ಲಿ ಇಟ್ಟರೆ ಶುಭ?: 
ಕಚೇರಿಯಲ್ಲಿ ಬಿಳಿ ಕುದುರೆಗಳ ಫೋಟೋ ಹಾಕಬೇಕಾದರೆ ದಕ್ಷಿಣ ದಿಕ್ಕನ್ನು ಆರಿಸಿಕೊಳ್ಳುವುದು ಸೂಕ್ತ. ಈ ಫೋಟೋವನ್ನು ಹಾಕುವಾಗ ಓಡುವ ಕುದುರೆಗಳು  ಕಚೇರಿಯೊಳಗೆ ಮುಖ ಮಾಡಿದಂತೆ ಇರಬೇಕು. ಒಂದು ವೇಳೆ ಮನೆ ಅಥವಾ ಕಚೇರಿಯಲ್ಲಿ ಓಡುತ್ತಿರುವ ಬಿಳಿ ಕುದುರೆಯ ಫೋಟೋವನ್ನು ಹಾಕಲು ಸಾಧ್ಯವಾಗದಿದ್ದರೆ, ಮನೆಯ ಮುಖ್ಯ ಗೇಟ್ ಬಳಿ ಕುದುರೆಯ ಪ್ರತಿಮೆಯನ್ನು ಇರಿಸಬೇಕು. ಈ ಕುದುರೆ ಮನೆಯ ಒಳಗೆ ಮುಖ ಮಾಡಿರುವಂತೆ ಇರಬೇಕು. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.