Vastu Tips For TV: ಮನೆಯಲ್ಲಿ ಸದಾ ಸಂತೋಷ ನೆಲೆಸಬೇಕಾದರೆ ಟಿವಿಯನ್ನು ಈ ದಿಕ್ಕಿನಲ್ಲಿಡಿ
Vastu Tips: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಕೂಡ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಯಾವ ಕೋಣೆ ಇರಬೇಕು. ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು ಎಂಬಿತ್ಯಾದಿ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.
Vastu Tips For TV: ಮನರಂಜನಾ ಪೆಟ್ಟಿಗೆ ಎಂತಲೇ ಖ್ಯಾತಿ ಪಡೆದಿರುವ ಟಿವಿ ಇಲ್ಲದ ಮನೆಯಿಲ್ಲ. ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ, ತಮಗಿಷ್ಟ ಬಂದ ಜಾಗದಲ್ಲಿ ಟಿವಿಯನ್ನು ಇಡುತ್ತಾರೆ. ಆದರೆ, ವಾಸ್ತು ಪ್ರಕಾರ, ಮನೆಯಲ್ಲಿ ಟಿವಿಯನ್ನು ಇಡುವುದರಿಂದ ಅಂತಹ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಯಾವ ಭಾಗದಲ್ಲಿ ಯಾವ ದಿಕ್ಕಿನಲ್ಲಿ ಟಿವಿಯನ್ನು ಇಡುವುದು ಸೂಕ್ತ ಎಂದು ತಿಳಿಯೋಣ...
ಮನೆಯಲ್ಲಿ ಸುಖ-ಸಮೃದ್ಧಿ-ಸಂತೋಷಕ್ಕಾಗಿ ಟಿವಿಯನ್ನು ಈ ದಿಕ್ಕಿನಲ್ಲಿಡಿ:-
ಪ್ರವೇಶ ದ್ವಾರ:
ಕೆಲವರ ಮನೆಯಲ್ಲಿ ಮನೆಯ ಪ್ರವೇಶ ದ್ವಾರಕ್ಕೆ ಎದುರಾಗಿ ಟಿವಿ ಹಾಕುವುದನ್ನು ನೀವು ನೋಡಿರಬಹುದು. ಆದರೆ, ವಾಸ್ತು ಪ್ರಕಾರ, ಇದು ಶುಭಕರವಲ್ಲ.
ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ಈ ಕೆಲಸ ಮಾಡಿದ್ರೆ ಎಂದಿಗೂ ಖಾಲಿಯಾಗಲ್ಲ ಖಜಾನೆ
ದಕ್ಷಿಣ ದಿಕ್ಕು:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಟಿವಿ ಇದ್ದರೆ ಉತ್ತಮ. ವಾಸ್ತು ಪ್ರಕಾರ, ಟಿವಿ ನೋಡುವ ವ್ಯಕ್ತಿಯು ದಕ್ಷಿಣಕ್ಕೆ ಮುಖ ಮಾಡಿ ನೋಡುವ ರೀತಿಯಲ್ಲಿ ಟಿವಿಯನ್ನು ಇಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸಂಪತ್ತಿನ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.
ಲಿವಿಂಗ್ ರೂಂನಲ್ಲಿ ಈ ದಿಕ್ಕಿನಲ್ಲಿರಲಿ ಟಿವಿ:
ನಿಮ್ಮ ಮನೆಯ ಲಿವಿಂಗ್ ರೂಂನ ಆಗ್ನೇಯ ದಿಕ್ಕಿನಲ್ಲಿ ಟಿವಿಯನ್ನು ಇಡುವುದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ. ಲಿವಿಂಗ್ ರೂಂನಲ್ಲಿ ಆಗ್ನೇಯ ದಿಕ್ಕಿನಲ್ಲಿ ಟಿವಿ ಇಡುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಪ್ರವೇಶಿಸುತ್ತದೆ. ಮಾತ್ರವಲ್ಲ, ಮನೆಯವರ ನಡುವಿನ ಭಿನ್ನಾಭಿಪ್ರಾಯವೂ ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಸೂರ್ಯ ಗ್ರಹಣದಂದು ಮಂಗಳ, ಬುಧರ ರಾಶಿ ಪರಿವರ್ತನೆ- ಈ ರಾಶಿಯವರಿಗೆ ಬಂಪರ್ ಯೋಗ
ಬೆಡ್ ರೂಂನಲ್ಲಿ ಟಿವಿಯನ್ನು ಈ ದಿಕ್ಕಿನಲ್ಲಿಡಿ:
ಕೆಲವರು ತಮ್ಮ ಮನೆಯ ಬೆಡ್ ರೂಂನಲ್ಲಿ ಟಿವಿಯನ್ನು ಇಡಲು ಇಷ್ಟಪಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಬೆಡ್ ರೂಂನ ಆಗ್ನೇಯ ದಿಕ್ಕಿನಲ್ಲಿ ಇಡುವುದು ಹೆಚ್ಚು ಸೂಕ್ತ ಎನ್ನಲಾಗುವುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.