ಗ್ರಹಗಳ ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯದ ಪ್ರಕಾರ ನವಗ್ರಹಗಳಲ್ಲಿನ ಸಣ್ಣ ಬದಲಾವಣೆಯೂ ಸಹ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಜನರ ಜೀವನದ ಮೇಲೆ ಅದರ ನೇರ ಪರಿಣಾಮ  ಉಂಟಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಮುಂದಿನ ನಾಲ್ಕು ತಿಂಗಳಲ್ಲಿ ಮೂರು ಪ್ರಮುಖ ಗ್ರಹಗಳ ಸ್ಥಿತಿಯು ತುಂಬಾ ವಿಶೇಷವಾಗಿರುತ್ತದೆ. ಇದು ನಾಲ್ಕು ರಾಶಿಯ ಜನರ ಮೇಲೆ ಆಶೀರ್ವಾದ ಸುರಿಸಲಿದ್ದು, ಈ ಸಮಯದಲ್ಲಿ ಅವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಯಾವ ರಾಶಿಯವರಿಗೆ ಇದರಿಂದ ಶುಭ ಫಲಗಳು ದೊರೆಯಲಿವೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಈ ಅವಧಿಯಲ್ಲಿ ಬುಧ, ಮಂಗಳ ಮತ್ತು ಗುರು ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. 21 ಆಗಸ್ಟ್ 2022 ರಂದು, ಬುಧ ಗ್ರಹವು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಕರ್ಕ ರಾಶಿಯನ್ನು ಪ್ರವೇಶಿಸಲಿದೆ. ಇದಾದ ನಂತರ ಮಂಗಳ ಗ್ರಹ ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ. ಇದು ನಾಲ್ಕು ರಾಶಿಯವರಿಗೆ ಭಾರೀ ಲಾಭವನ್ನು ನೀಡಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...


3 ಗ್ರಹಗಳ ಅನುಗ್ರಹದಿಂದ ಈ ನಾಲ್ಕು ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ:
ಮಿಥುನ ರಾಶಿ:
ಮುಂಬರುವ ನಾಲ್ಕು ತಿಂಗಳು ಮಿಥುನ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತ ಅವಧಿ. ಈ ಸಮಯದಲ್ಲಿ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಒಳ್ಳೆಯ ಜನರ ಸಂಪರ್ಕವು ಲಾಭವನ್ನು ತರುತ್ತದೆ.  ಪ್ರವಾಸಗಳು ಲಾಭದಾಯಕವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ವೃದ್ದಿಯಾಗಲಿದೆ.


ಇದನ್ನೂ ಓದಿ- Sun Transit 2022: ಸಿಂಹ ಸಂಕ್ರಮಣ ಯಾವಾಗ? ಈ ದಿನ ಒಂದು ಪದಾರ್ಥ ಸೇವನೆಯಿಂದ ಲಭಿಸುತ್ತದೆ ಅಪಾರ ಕೀರ್ತಿ-ಯಶಸ್ಸು


ಸಿಂಹ ರಾಶಿ: ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ನಿಮ್ಮ ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು, ಆರ್ಥಿಕವಾಗಿ ಬಲಗೊಳ್ಳುವಿರಿ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಲಿದೆ. ಹೊಸ ಮನೆ-ಕಾರು ಖರೀದಿಸುವ ಯೋಗವೂ ಇದೆ. ವ್ಯಾಪಾರಿಗಳಿಗೆ ದೊಡ್ಡ ಆರ್ಡರ್ ಸಿಗುವ ಸಾಧಯ್ತೆ ಇದ್ದು, ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಇದು ಶುಭ ಸಮಯ.


ತುಲಾ ರಾಶಿ: ತುಲಾ ರಾಶಿಯವರಿಗೆ ಈ ನಾಲ್ಕು ತಿಂಗಳು ತುಂಬಾ ಮಂಗಳಕರವಾಗಿರುತ್ತದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾಗಲಿದೆ. ವೃತ್ತಿ ಬದಲಾಯಿಸಲು ಚಿಂತಿಸುತ್ತಿರುವವರಿಗೂ ಇದು ಉತ್ತಮ ಸಮಯ. ಸ್ಥಳ ಬದಲಾವಣೆ ಸಾಧ್ಯತೆಯಿದ್ದು, ಇಷ್ಟು ದಿನಗಳ ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ.


ಇದನ್ನೂ ಓದಿ- Janmashtami 2022: ಜನ್ಮಾಷ್ಟಮಿಯ ದಿನ ನಿರ್ಮಾಣಗೊಳ್ಳುತ್ತಿದೆ ಈ ಅತ್ಯಂತ ಅಪರೂಪದ ಯೋಗ, ಧನವೃದ್ಧಿಗೆ ಈ ಉಪಾಯ ಅನುಸರಿಸಿ


ವೃಶ್ಚಿಕ ರಾಶಿ: ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಧರ್ಮ ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪರೀಕ್ಷೆ-ಸಂದರ್ಶನದಲ್ಲಿ ನೀವು ಯಶಸ್ವಿಯಾಗುತ್ತೀರಿ. ವೃತ್ತಿ ರಂಗದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ. ನಿಮ್ಮ ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದ್ದು, ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳಲಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.