Lucky Plant At Home: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಕೂಡ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡುವುದನ್ನು ತುಂಬಾ ಮಂಗಳಕರ ಎಂದು ಬಣ್ಣಿಸಲಾಗಿದೆ. ವಾಸ್ತವವಾಗಿ ಕೆಲವರು ಮನೆಯನ್ನು ಸುಂದರವಾಗಿಡಳು ಮನೆಯಲ್ಲಿ ಸಸ್ಯಗಳನ್ನು ನೆಡುತ್ತಾರೆ. ಇನ್ನೊಂದು ನಂಬಿಕೆಗಳ ಪ್ರಕಾರ, ಕೆಲವು ವಿಶೇಷ ಒಳಾಂಗಣ ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕತೆ ಹರಡುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ಕೆಲವು ಸಸ್ಯಗಳು ದುರಾದೃಷ್ಟವನ್ನೂ ಸಹ ಅದೃಷ್ಟವಾಗಿ ಬದಲಾಯಿಸಬಲ್ಲವು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಿದಿರಿನ ಸಸ್ಯವನ್ನು ನೆಡುವುದರಿಂದ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ, ಸಕಾರಾತ್ಮಕತೆಯನ್ನು ತುಂಬುತ್ತದೆ. ದುರಾದೃಷ್ಟದ ಬದಲಿಗೆ ಮನೆಯಲ್ಲಿ ಅದೃಷ್ಟವನ್ನು ತರಲಿದೆ. ಯಾವ ಮನೆಯಲ್ಲಿ ಬಿದಿರಿನ ಸಸ್ಯವನ್ನು ಇಡುತ್ತಾರೋ ಅಂತಹ ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಮೂಡಿ, ಸುಖ- ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯೂ ಇದೆ. ಹಾಗಿದ್ದರೆ, ಈ ಸಸ್ಯವನ್ನು ಮನೆಯ ಯಾವ ದಿಕ್ಕಿನಲ್ಲಿ ಸ್ಥಾಪಿಸಬೇಕು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ... 


ಮನೆಯಲ್ಲಿ ಬಿದಿರಿನ ಸಸ್ಯ ನೆಡುವ ಮೊದಲು ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ: 
>>  ಬಿದಿರಿನ ಸಸ್ಯದ ಬೇರುಗಳಲ್ಲಿ ಸದಾ ನೀರು ಇರುವಂತೆ ಗಮನವಹಿಸಿ. 
>> ಎಂದಿಗೂ ಕೂಡ ಬಿದಿರಿನ ಗಿಡ ಒಣಗಳು ಬಿಡಬೇಡಿ. 
>> ಬಿದಿರಿನ ಸಸ್ಯದ ಎಲೆಗಳಲ್ಲಿ ಧೂಳು ಕೂರಲು ಬಿಡಬೇಡಿ. 
>> ಒಂದೊಮ್ಮೆ ನೀವು ನೆಟ್ಟಿರುವ ಬಿದಿರಿನ ಸಸ್ಯ ಕುಂಡಕ್ಕಿಂತ ದೊಡ್ಡದಾಗಿದ್ದರೆ ಕೂಡಲೇ ಕುಂಡವನ್ನು ಬದಲಾಯಿಸಿ. 


ಇದನ್ನೂ ಓದಿ- Vastu Tips: ಮನೆಯಲ್ಲಿ ಈ 4 ಗಿಡಗಳಿದ್ದರೆ ಸಾಕು ಶನಿ-ರಾಹುವಿನ ದುಷ್ಟ ಕಣ್ಣು ನಿಮ್ಮ ಹತ್ತಿರವೂ ಸುಳಿಯಲ್ಲ


ಮನೆಯಲ್ಲಿ ಈ ದಿಕ್ಕಿನಲ್ಲಿರಲಿ ಬಿದಿರಿನ ಸಸ್ಯ: 
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಆಗ್ನೇಯ ದಿಕ್ಕಿನಲ್ಲಿ ಬಿದಿರಿನ ಸಸ್ಯವನ್ನು ಸ್ಥಾಪಿಸುವುದನ್ನು ತುಂಬಾ ಮಂಗಳಕರ ಎಂದು ನಂಗಲಾಗಿದೆ. ಇದರೊಂದಿಗೆ ಮನೆಯ ಯಾವ ಭಾಗದಲ್ಲಿ ಬಿದಿರಿನ ಸಸ್ಯವನ್ನು ಇಡುವುದರಿಂದ ಏನು ಫಲ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ. 


ಹಣದ ಆಕರ್ಷಣೆಗಾಗಿ: 
ಮನೆಯಲ್ಲಿ ಹಣವನ್ನು ಆಕರ್ಷಿಸಲು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮನೆಯ ಆಗ್ನೇಯ ದಿಕ್ಕಿನಲ್ಲಿ ಬಿದಿರಿನ ಸಸ್ಯವನ್ನು ಇಡುವುದರಿಂದ ಪರಿಹಾರ ದೊರೆಯಲಿದೆ.


ಸುಖ- ಶಾಂತಿಗಾಗಿ: 
ನೀವು ನಿಮ್ಮ ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಬೇಕು ಎಂದು ಬಯಸುವುದಾದರೆ ಮನೆಯ ಡೈನಿಂಗ್ ಟೇಬಲಿನ ಮಧ್ಯ ಭಾಗದಲ್ಲಿ ಬಿದಿರಿನ ಗಿಡವನ್ನು ಇಡಿ. ಇದರಿಂದ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ತುಂಬಿರಲಿದ್ದು, ಮನೆಯವರ ನಡುವೆ ಸಾಮರಸ್ಯ ಮೂಡುತ್ತದೆ ಎಂಬ ನಂಬಿಕೆ ಇದೆ. 


ಇದನ್ನೂ ಓದಿ- Vastu Tips: ಮನಿ ಪ್ಲಾಂಟ್ ಜೊತೆಗೆ ಈ ಚಿಕ್ಕ ಗಿಡ ನೆಡಿ, ಅದೃಷ್ಟ 4 ಪಟ್ಟು ಹೆಚ್ಚಾಗುತ್ತದೆ!


ಪಾಸಿಟಿವ್ ಎನರ್ಜಿ: 
ನೀವು ನಿಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರಬೇಕೆಂದು ಬಯಸಿದರೆ ಅದಕ್ಕಾಗಿ ಮನೆಯ ಮುಖ್ಯ ದ್ವಾರದ ಬಳಿ ಬಿದಿರಿನ ಗಿಡವನ್ನು ಇಡಿ. 


ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು: 
ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಮನೆಯ ಈಶಾನ್ಯ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ನೆಡುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರಿಂದ ವಿದ್ಯಾಭ್ಯಾಸದಲ್ಲಿ ಮಕ್ಕಳ ಆಸಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. 


ಕಚೇರಿಯಲ್ಲಿ ಈ ದಿಕ್ಕಿನಲ್ಲಿರಲಿ ಬಿದಿರಿನ ಸಸ್ಯ: 
ವಾಸ್ತು ಶಾಸ್ತ್ರದ ಪ್ರಕಾರ, ನೀವು ಕಚೇರಿಯಲ್ಲಿ ಬಿದಿರಿನ ಸಸ್ಯವನ್ನು ನೆಡಳು ಉದಕ್ಕೆ ಪೂರ್ವ ದಿಕ್ಕನ್ನು ಉತ್ತಮ ಎಂದು ಹೇಳಲಾಗುತ್ತದೆ. ಕಚೇರಿಯ ಪೂರ್ವ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ಸ್ಥಾಪಿಸುವುದರಿಂದ ವ್ಯಾಪಾರ- ವ್ಯವಹಾರದಲ್ಲಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.