ಶ್ರಾವಣದಲ್ಲಿ ಈ ಒಂದು ಸಸಿಯನ್ನು ಮನೆ ಮುಂದೆ ನೆಟ್ಟರೆ ಸಾಕು ದೂರವಾಗುವುದು ದಾರಿದ್ರ್ಯ ! ಒಲಿದು ಬರುವುದು ಧನ ಸಂಪತ್ತು
Tulsi Plant Significance:ಯಾವ ಮನೆಯಲ್ಲಿ ಶ್ರಾವಣದಲ್ಲಿ ತುಳಸಿ ಗಿಡ ನೆಡಲಾಗುತ್ತದೆಯೋ ಅಲ್ಲಿ ಬಡತನ ದೂರವಾಗಿ ಬಿಡುತ್ತದೆ. ಮಾತ್ರವಲ್ಲ ತುಳಸಿ ಗಿಡ ಇರುವ ಮನೆಯಲ್ಲಿ ಗಾಳಿ ಬೀಸಿದಾಗ ಇಡೀ ಮನೆ ತನ್ನ ಸುಗಂಧದಿಂದ ಪಾವನವಾಗುತ್ತದೆ.
ಬೆಂಗಳೂರು : Tulsi Plant Significance : ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಬಹುತೇಕ ಹಿಂದೂಗಳ ಮನೆಯಲ್ಲಿ ತುಳಸಿ ಸಸಿ ಇದ್ದೇ ಇರುತ್ತದೆ. ಈ ಸಸಿಯನ್ನು ಶ್ರಾವಣ ಮಾಸದಲ್ಲಿ ಮನೆ, ಅಂಗಳ ಅಥವಾ ತೋಟದಲ್ಲಿ ನೆಟ್ಟರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಕೂಡಾ ಇದೆ. ಪದ್ಮ ಪುರಾಣದ ಪ್ರಕಾರ, ತುಳಸಿ ಬೇರು ಬ್ರಹ್ಮನ ವಾಸಸ್ಥಾನ ಎಂದು ನಂಬಲಾಗಿದೆ. ಸಸ್ಯದ ಕಾಂಡದಲ್ಲಿ ಭಗವಾನ್ ನಾರಾಯಣ ನೆಲೆಸಿದರೆ ಅದರ ಬೀಜದಲ್ಲಿ ಸಾಕ್ಷಾತ್ ಈಶ್ವರ ಮನೆ ಮಾಡಿರುತ್ತಾನೆ ಎಂದು ಹೇಳಲಾಗುತ್ತದೆ.
ತುಳಸಿ ಗಿಡ ನೆಟ್ಟ ಮನೆಯಲ್ಲಿ ಸ್ವಯಂ ನಾರಾಯಣ ನೆಲೆಯಾಗುತ್ತಾನೆಯಂತೆ. ನಾರಾಯಣ ದೇವರು ನೆಲೆಯಾಗುತ್ತಾರೆ ಎಂದರೆ ಅಲ್ಲಿ ಬಡತನಕ್ಕೆ ಜಾಗ ಇರುವುದಿಲ್ಲ. ಯಾವ ಮನೆಯಲ್ಲಿ ಶ್ರಾವಣದಲ್ಲಿ ತುಳಸಿ ಗಿಡ ನೆಡಲಾಗುತ್ತದೆಯೋ ಅಲ್ಲಿ ಬಡತನ ದೂರವಾಗಿ ಬಿಡುತ್ತದೆ. ಮಾತ್ರವಲ್ಲ ತುಳಸಿ ಗಿಡ ಇರುವ ಮನೆಯಲ್ಲಿ ಗಾಳಿ ಬೀಸಿದಾಗ ಇಡೀ ಮನೆ ತನ್ನ ಸುಗಂಧದಿಂದ ಪಾವನವಾಗುತ್ತದೆ. ಆ ಮನೆಯ ಋಣಾತ್ಮಕತೆ ಮುಗಿದು ರೋಗಗಳು ಮನೆಯಿಂದ ಹೊರಗುಳಿಯುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ವೈಭವದಾತನ ಉದಯ, ಶುಕ್ರದೆಸೆಯಿಂದ ಈ ರಾಶಿಗಳ ಜನರ ಮೇಲೆ ಹಣದ ಸುರಿಮಳೆ!
ತುಳಸಿ ಯಾವಾಗಲೂ ಪವಿತ್ರವಾದ ಸಸ್ಯ. ತುಳಸಿ ತೋಟದ ದರ್ಶನ ಮಾಡುವುದರಿಂದ ಅಥವಾ ಸ್ಪರ್ಶದಿಂದ ಬ್ರಹ್ಮಹತ್ಯೆಯಂತಹ ಪಾಪಗಳು ಸಹ ನಾಶವಾಗುತ್ತವೆ. ಮೃತದೇಹಕ್ಕೆ ಬೆಂಕಿ ಸ್ಪರ್ಶ ಮಾಡುವಾಗ ತುಳಸಿ ಕಟ್ಟಿಗೆ ಬಳಸಿದರೆ ಮೃತ ವ್ಯಕ್ತಿ ನೇರವಾಗಿ ಸ್ವರ್ಗ ಸೇರುತ್ತಾರೆಯಂತೆ. ಮಾತ್ರವಲ್ಲ ಸತ್ತ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತವೆ ಎನ್ನುವುದು ನಂಬಿಕೆ.
ಇದನ್ನೂ ಓದಿ : Shani Deva: ನಿಮ್ಮ ಈ ಕೆಲಸಗಳು ಶನಿ ದೇವನ ಮುನಿಸಿಗೆ ಕಾರಣವಾಗಬಹುದು, ಎಚ್ಚರ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.