Guruvara Dina Bhavishya In Kannada:  ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ, ಬಾಲವ ಕರಣ. ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ವೈಯಕ್ತಿಕ ಜೀವನದಲ್ಲಿ ಒಂದು ನಿರ್ದಿಷ್ಟ ಅಧ್ಯಾಯ ಕೊನೆಗೊಳ್ಳುವ ಸಮಯ. ಜಟಿಲ ಸಮಸ್ಯೆಗಳು ಸರಾಗವಾಗಿ ಬಗೆಹರಿಯಲಿವೆ. ನೀವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ, ಅದರ ಪ್ರತಿಫಲವೂ ಒಳ್ಳೆಯದೇ ಆಗಿರಲಿದೆ. ಫಿಟ್‌ನೆಸ್ ವಿಷಯದಲ್ಲಿ ಗಮನವಹಿಸಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಭಾವನಾತ್ಮಕ ವಿಷಯಗಳು ಸಂತೋಷವನ್ನು ತರಲಿವೆ. ದೂರದ ಊರಿನಲ್ಲಿರುವವರಿಗೆ ಶುಭ ಸುದ್ದಿ ನಿರೀಕ್ಷಿಸಬಹುದು. ದೈನಂದಿನ ಜೀವನದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಉತ್ತಮ. ರೊಮ್ಯಾಂಟಿಕ್ ಮೂಡ್ ನಲ್ಲಿರುತ್ತೀರಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಬೇರೆಯವರ ಮಾತಿಗೆ ತಲೆಕೆಡಿಕೊಳ್ಳಬೇಡಿ. ನಿಮ್ಮ ಕೆಲಸದತ್ತ ನಿಗಾವಹಿಸಿ. ಸಾಧ್ಯವಾದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಕುಟುಂಬದೊಂದಿಗೆ ಪ್ರತ್ಯೇಕವಾಗಿ ಸುಂದರ ಸಮಯವನ್ನು ಕಳೆಯುವಿರಿ. ವಿದೇಶ ಪ್ರವಾಸ ಸಾಧ್ಯತೆ ಇದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಆಸ್ತಿ ವಿಷಯಗಳಲ್ಲಿ ಕಾನೂನು ಪ್ರಕ್ರಿಯೆಗಳಿಗೆ ಮುಂದಾಗದೆ ಕುಳಿತು ಮಾತನಾಡುವ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಪ್ರಬಲವಾದ ದಿನ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. 


ಇದನ್ನೂ ಓದಿ- ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ! 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಉದ್ಯೋಗಸ್ಥರು ಇಂದು ಉತ್ತಮ ಸಾಧನೆ ಮಾಡುವರು. ಆರೋಗ್ಯದ ದೃಷ್ಟಿಯಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ನೀವು ಕೈ ಹಾಕುವ ಹೊಸ ಕೆಲಸ ಕಾರ್ಯಗಳಲ್ಲಿ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಇಮೇಜ್ ಹೆಚ್ಚಾಗಲಿದೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವೃತ್ತಿ ವ್ಯವಹಾರ ನಿಮಿತ್ತ ಇಂದು ನೀವು ಪ್ರಯಾಣ ಕೈಗೊಳ್ಳಬೇಕಾಗಬಹುದು. ಹೊಸ ಮನೆ ನಿರ್ಮಿಸುವ ನಿಮ್ಮ ಕನಸಿಗೆ ಅಡಿಪಾಯ ಹಾಕುವ ಸಕಾಲ. ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಸಂತೋಷದ ವಾತಾವರಣವನ್ನು ಅನುಭವಿಸಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾಧನೆ ಮಾಡುವಿರಿ. ಆಪ್ತರಿಂದ ವಿಶೇಷ ಉಡುಗೊರೆ ಲಭ್ಯವಾಗಲಿದೆ. ಕುಟುಂಬಸ್ಥರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಹೊಸ ಆಸ್ತಿ ಖರೀದಿರುವ ನಿಮ್ಮ ಮನಸ್ಸಿನ ಲೆಕ್ಕಾಚಾರಕ್ಕೆ ಬೆಂಬಲ ದೊರೆಯಲಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ. ವೃತ್ತಿಪರರು ಇಂದು ಆರಾಮದಾಯಕವಾಗಿ ಸುರಕ್ಷಿತವಾಗಿರುತ್ತೀರಿ. ಹಣಕಾಸಿನ ವಿಚಾರಗಳು ಬಗೆಹರಿಯಲಿವೆ. ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರಿ. ಪ್ರತಿ ಕೆಲಸದಲ್ಲಿ ಕುಟುಂಬಸ್ಥರ ಬೆಂಬಲ ಪಡೆಯುವಿರಿ. 


ಇದನ್ನೂ ಓದಿ- ಬೆಳ್ಳಿ ಉಂಗುರ ಧರಿಸಿದರಷ್ಟೇ ಈ ರಾಶಿಯವರಿಗೆ ಜೀವನದಲ್ಲಿ ಪ್ರಗತಿ, ಧನಲಾಭ, ಭಾರೀ ಅದೃಷ್ಟ


ಧನು ರಾಶಿಯವರ ಭವಿಷ್ಯ (Sagittarius Horoscope):  
ಉದ್ಯೋಗ ರಂಗದಲ್ಲಿ ನೀವು ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಎಂತಹುದೇ ಸಂದರ್ಭದಲ್ಲಿ ನಿಮ್ಮ ಸ್ವಾಭಿಮಾನವನ್ನು ಬಿಟ್ಟುಕೊಡಬೇಡಿ. ಹಣಕಾಸಿನ ಮೂಲಗಳು ಹೆಚ್ಚಾಗುವವು. ಆರೋಗ್ಯ ಸುಧಾರಿಸಲಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಆರೋಗ್ಯದ ದೃಷ್ಟಿಯಿಂದ ಜಂಕ್ ಫುಡ್ ಗಳಿಂದ ದೂರ ಉಳಿದರೆ ಒಳಿತು. ಪ್ರಸ್ತುತ, ನಿಮ್ಮ ಸಣ್ಣ ತಪ್ಪು ಕೂಡ ಕುಟುಂಬದವರ ದೃಷ್ಟಿಯಲ್ಲಿ ಭಾರೀ ದೊಡ್ಡದಾಗಿ ಕಾಣಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಪ್ರವಾಸಕ್ಕಾಗಿ ಯೋಜಿಸುತ್ತಿರುವವರಿಗೆ ಮೋಜಿನ ದಿನ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಶೈಕ್ಷಣಿಕ ಗುರಿ ಸಾಧಿಸಲು ಮನಸ್ಸು ಬೇರೆಡೆ ಚಂಚಲಗೊಳ್ಳದಂತೆ ನಿಗಾವಹಿಸಿ. ಕೆಲಸದ ಒತ್ತಡ ಹೆಚ್ಚಾಗಲಿದೆ. ಆದರೂ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ವ್ಯಾಪಾರ ಸಂಬಂಧಿತ ಪ್ರವಾಸವು ಲಾಭದಾಯಕವಾಗಿರಲಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಭವಿಷ್ಯದ ದೃಷ್ಟಿಯಿಂದ ಉಳಿತಾಯಕ್ಕೆ ಪ್ರಾಮುಖ್ಯತೆ ನೀಡುವುದು ಒಳ್ಳೆಯದು. ಆಸ್ತಿಯಿಂದ ಲಾಭವಾಗಲಿದೆ. ಸಣ್ಣ ಪ್ರಯಾಣವು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.