Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿಯ ಈ ದಿನ ಬುಧವಾರ, ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ, ವಿಷ್ಟಿ ಕರಣ. ಇಂದಿನ ಎಲ್ಲಾ 12 ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮಗಿಂದು ದಿನ ಅಷ್ಟು ಉತ್ತಮವಾಗಿಲ್ಲ. ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಪ್ರವಾಸದಲ್ಲಿರುವವರು ಆರೋಗ್ಯದ ವಿಚಾರದಲ್ಲಿ ಸಂಪೂರ್ಣ ಗಮನಹರಿಸಿ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದರಷ್ಟೇ ಶುಭ ಫಲ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಜೊತೆಗಿದ್ದು ನಿಮಗೇ ಕೇಡು ಬಯಸುವವರ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಬಾಕಿ ಇರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ಪರಿಗಣಿಸಿ. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಗುಡ್ ನ್ಯೂಸ್ ಕೇಳಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹೊಸ ಉದ್ಯೋಗ ದೊರೆಯುವ ಸಂಭವ. ಪ್ರೀತಿಯಲ್ಲಿರುವವರಿಗೆ ಮನೆಯವರ ಸಹಕಾರ ದೊರೆಯಲಿದೆ. ಬಹಳ ದಿನಗಳ ಕನಸೊಂದು ಸಾಕಾರಗೊಳ್ಳುವ ದಿನ ಇದಾಗಿದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಯಾವುದೇ ರೀತಿಯ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕೌಟುಂಬಿಕ ಸಮಸ್ಯೆಗಳು ಕೊಂಚ ಮಟ್ಟಿಗೆ ಪರಿಹಾರವನ್ನು ಕಾಣಬಹುದು. ಇಂದು ಅದೃಷ್ಟ ನಿಮ್ಮೊಂದಿಗಿದ್ದು ನೀವು ಕಳೆದುಕೊಂಡಿದ್ದ ಬೆಲೆಬಾಳುವ ವಸ್ತು ಮತ್ತೆ ನಿಮ್ಮ ಕೈ ಸೇರಲಿದೆ. 


ಇದನ್ನೂ ಓದಿ- 30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ಕುಟುಂಬ ಸದಸ್ಯರೊಂದಿಗೆ ನಿಮಗಿದ್ದ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಉದ್ಯೋಗದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಸಂಬಂಧಿಕರೊಬ್ಬರು ಇಂದು ಮನೆಗೆ ಭೇಟಿ ನೀಡಬಹುದು. ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮಗಿಂದು ಶಾಂತಿಯುತವಾದ ದಿನ. ಕೆಲಸದಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ತೋರಬಹುದು. ವಾಹನ ಖರೀದಿಸುವ ಬಹಳ ದಿನಗಳ ನಿಮ್ಮ ಕನಸು ನನಸಾಗುವ ಸಮಯ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮಗಿಂದು ಮಿಶ್ರ ಫಲಗಳಿಂದ ಕೂಡಿದ ದಿನ. ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಹೊಸ ವ್ಯವಹಾರದಲ್ಲಿ ಕೈ ಹಾಕಲು ಯೋಚಿಸುತ್ತಿದ್ದರೆ ಇಂದು ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇದು ನಿಮಗೆ ಏರಿಳಿತಗಳಿಂದ ಕೂಡಿದ ದಿನ. ವೃತ್ತಿಪರರು ರಾಜಕೀಯ ಭಾಗವಾಗುವುದನ್ನು ತಪ್ಪಿಸಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಇರಬಹುದು. ಆದರೂ, ನಿಮ್ಮವರೊಂದಿಗೆ ಮನಬಿಚ್ಚಿ ಮಾತನಾಡುವುದರಿಂದ ಭಾವನಾತ್ಮಕ ಹೊರೆ ಕಡಿಮೆಯಾಗಲಿದೆ. 


ಇದನ್ನೂ ಓದಿ- ಮನೆಯ ಈ ಜಾಗದಲ್ಲಿ ನವಿಲುಗರಿ ಇಟ್ಟರೆ ದಾರಿದ್ರ್ಯ ದೂರವಾಗಿ, ಸಂಪತ್ತಿನಿಂದ ತುಂಬಿ ತುಳುಕುತ್ತೆ ಖಜಾನೆ..! 


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮಗಿಂದು ಸಂತೋಷದ ದಿನ. ವ್ಯವಹಾರದಲ್ಲಿ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರ ಭೇಟಿಯು ವಿಶೇಷ ಲಾಭವನ್ನು ತರಲಿದೆ. ಸಂಜೆ ವೇಳೆಗೆ ಶುಭ ಸುದ್ಧಿ ನಿರೀಕ್ಷಿಸಬಹುದು. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮಗಿಂದು ಸಾಮಾನ್ಯ ದಿನ. ಪ್ರೀತಿ-ಸಹಕಾರದ ಭಾವನೆಯಿಂದ ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಉದ್ಯೋಗವನ್ನು ಬದಲಾಯಿಸುವ ಆಲೋಚನೆಗಳನ್ನು ಸದ್ಯಕ್ಕೆ ಮುಂದೂಡುವುದು ಒಳ್ಳೆಯದು. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ದೂರ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ನಿಮ್ಮ ಬಹುದೊಡ್ಡ ಯೋಜನೆಯನ್ನು ಇಂದು ಯಶಸ್ವಿಯಾಗಿ ಜಾರಿಗೊಳಿಸುವಿರಿ. ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿಯ ದಿನವಾಗಿರುತ್ತದೆ. ಆದರೆ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ತಂದೆ ನಿಮಗಿಂದು ದೊಡ್ಡ ಜವಾಬ್ದಾರಿಯನ್ನು ನೀಡಬಹುದು. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಸ್ವಲ್ಪ ಬುದ್ದಿ ಉಪಯೋಗಿಸಿ ಕೆಲಸ ಮಾಡಿದರೆ ಸಾಕು. ಆದರೆ, ಇಂದು ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.