Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಸೋಮವಾರ, ಪೂರ್ವಾ ನಕ್ಷತ್ರ, ಬ್ರಹ್ಮಾ ಯೋಗ, ಕೌಲವ ಕರಣ ಇರಲಿದೆ. ಇಂದು ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ನಿಮಗೆ ಜ್ಞಾನೋದಯವಾಗುವ ಸಮಯ. ಬರವಣಿಗೆಯ ಯೋಜನೆಗಳನ್ನು ಪ್ರಾರಂಭಿಸುವುದರಿಂದ ಉತ್ಸಾಹ ಹೆಚ್ಚಾಗಲಿದೆ. ಭಾವನಾತ್ಮಕವಾಗಿ ಭಾರವೆನಿಸುವ ವಿಷಯಗಳನ್ನು ಪ್ರೀತಿಪಾತ್ರರೊಂದಿಗೆ ಹಚ್ಚಿಕೊಳ್ಳುವುದರಿಂದ ಮನಸ್ಸು ಹಗುರವಾಗಲಿದೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಹೃದಯದ ಆಂತರಿಕ ಒಳನೋಟವು ನಿಮ್ಮನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತದೆ. ಜೀವನದಲ್ಲಿ ಅತ್ಯುತ್ತಮವಾದುದನ್ನು ನೀವಿಂದು ಗಳಿಸುವಿರಿ. ಸಣ್ಣ-ಪುಟ್ಟ ಸಂತೋಷಗಳನ್ನು ಆನಂದಿಸುವ ನಿಮ್ಮ ಗುಣವೇ ಆರೋಗ್ಯವನ್ನು ವೃದ್ಧಿಸುತ್ತದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಜೀವನವು ನಿಮ್ಮನ್ನು ಸ್ಪರ್ಧಾತ್ಮಕ ಮನೋಭಾವದತ್ತ ಸೆಳೆಯಬಹುದು. ಪ್ರತಿ ವಿಷಯವೂ ನೀವಂದುಕೊಂಡಂತೆ ಇರುವುದಿಲ್ಲ. ಹೊಸ ಚಿತನ್ಯ, ಕೌಶಲ್ಯಗಳಿಂದ ಮುಂದುವರೆದರಷ್ಟೇ ಜೀವನದಲ್ಲಿ ಏಳ್ಗೆಯನ್ನು ಕಾಣಬಹುದು ಎಂಬುದನ್ನು ನೆನಪಿಡಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಬಹುದೊಡ್ಡ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತಿರಬಹುದು. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಸ್ವಂತ ವೇಗದಲ್ಲಿ ಜೀವನದುದ್ದಕ್ಕೂ ಕರೆದೊಯ್ಯಲು ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳುವ ಅವಶ್ಯಕತೆ ಇದೆ. 


ಇದನ್ನೂ ಓದಿ- ನವೆಂಬರ್‌ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ಅನುಭವ, ಪರಿಣಿತಿಯು ಇಂದು ನಿಮಗೆ ಕೊಡುಗೆ ನೀಡಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವಿದೆ. ವೇತನ ಹೆಚ್ಚಳದಿಂದ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಕಾಣುವಿರಿ. ಆಂತರಿಕ ಭಯವನ್ನು ಮೀರಿಸಲು ಧ್ಯಾನವನ್ನು ರೂಢಿಸಿಕೊಳ್ಳಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಜೀವನ ತುಂಬಾ ಸುಂದರವಾಗಿದೆ. ಕಣ್ಬಿಟ್ಟು ನೋಡಿ, ಜೀವನವನ್ನು ಆನಂದಿಸಿ. ನಗುನಗುತ್ತಾ ಸಮಸ್ಯೆಗಳನ್ನು ಎದುರಿಸಿ. ಇದು ನಿಮ್ಮ ಜೀವನದಲ್ಲಿ ದೊಡ್ಡ ಯಶಸ್ಸನ್ನು ನೀಡಲಿದೆ. ಹಣದ ಹರಿವು ಹೆಚ್ಚಾಗುವುದರಿಂದ ಕೆಲ ಸಮಸ್ಯೆಗಳು ಬಗೆಹರಿಯಲಿವೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ನೀವು ಉತ್ತಮ ಸ್ಥಿತಿಯಲ್ಲಿದ್ದೀರಿ ಎಂದು ಬೇರೆಯವರನ್ನು ನಿರ್ಲಕ್ಷ್ಯದಿಂದ ಕಾಣದಿರಿ. ದಯೆಯಿಲ್ಲದ ಧರ್ಮವೇ ಇರುವುದಿಲ್ಲ. ನಿಮ್ಮ ಮನಸ್ಸಿನಲ್ಲಿರುವ ದಯೆಯನ್ನು ಹೊರತನ್ನಿ. ಬೇರೆಯವರ ತಪ್ಪನ್ನು ಮನ್ನಿಸಿ ಮುನ್ನಡೆಯುವುದನ್ನು ಪರಿಗಣಿಸಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಜೀವನದ ಹೊಸ ದ್ವಾರಗಳು ನಿಮಗಾಗಿ ತೆರೆದುಕೊಳ್ಳಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ನಿಮ್ಮ ಸ್ವಾಭಿಮಾನಕ್ಕೆ ಎಂತಹವರೇ ಆದರೂ ತಲೆದೂಗುತ್ತಾರೆ. ನೀವು ಅಪೇಕ್ಷಿಸುತ್ತಿರುವಂತೆ ಕೆಲಸದಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು. 


ಇದನ್ನೂ ಓದಿ- ದೀಪಾವಳಿಗೂ ಮುನ್ನ ಈ 5 ವಸ್ತುಗಳನ್ನ ಮನೆಯಿಂದ ಹೊರಹಾಕಿದ್ರೆ ಸಂಪತ್ತಿನ ದೇವತೆ ಮನೆ ಪ್ರವೇಶಿಸುವುದು ಗ್ಯಾರಂಟಿ! 


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಜೀವನದಲ್ಲಿ ಇಂದು ಮಹತ್ತರ ಬದಲಾವಣೆಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮದೇ ಆದ ಹೊಸ ಗುರುತನ್ನು ಹೊಂದಲು ಇದು ಸಕಾಲವಾಗಿದೆ. ಇದಕ್ಕಾಗಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಹೃದಯ ಚೈತನ್ಯವು ನಿಮ್ಮ ಕಷ್ಟದ ಸಮಯದಲ್ಲಿ ದಾರಿದೀಪವಾಗಿ ಕಾರ್ಯನಿರ್ವಹಿಸಲಿದೆ. ವೃತ್ತಿ ಬದುಕಿನಲ್ಲಿ ನೀವು ಎದುರುನೋಡುತ್ತಿರುವ ಯಶಸ್ಸಿನತ್ತ ಗುರಿ ನೆಟ್ಟು ಮುಂದುವರೆಯಿರಿ. ಕಠಿಣ ಸಂದರ್ಭಗಳಲ್ಲಿ ಶಾಂತಚಿತ್ತತೆಯಿಂದ ಯೋಚಿಸುವುದರಿಂದ ಪರಿಹಾರ ಸಿಗಲಿದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಮನಸ್ಸು ಹೃದಯ ಎರಡೂ ಒಂದೇ ವಿಚಾರದ ಬಗ್ಗೆ ಚಿಂತಿಸಿದಾಗ ಮಾತ್ರ ನಿಮ್ಮ ಯೋಜನೆಗಳಲ್ಲಿ ಯಶಸ್ವಿಯಾಗುವಿರಿ. ಬೇರೆ ಯಾರೂ ಮಾಡದ ಆವಿಷ್ಕಾರವನ್ನು ನೀವು ಮಾಡಬಹುದು. ಗುರುಗಳತ್ತ ಉತ್ಸುಕರಾಗಿರಿ, ಯಶಸ್ಸು ನಿಮ್ಮದೇ ಆಗಲಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಆರೋಗ್ಯದ ದೃಷ್ಟಿಯಿಂದ ಇಂದು ಹೊರಗಿನ ಆಹಾರಗಳನ್ನು ತ್ಯಜಿಸಿ. ನಿಮ್ಮದಲ್ಲದ ಜವಾಬ್ದಾರಿಗೆ ಹೆಗಲು ಕೊಡಲು ಹೋಗಬೇಡಿ. ಬೇರೆಯವರ ವಿಷಯದಲ್ಲಿ ಸುಖಾಸುಮ್ಮನೆ ಮೂಗು ತೂರಿಸುವುದರಿಂದ ತೊಂದರೆಗಳು ಹೆಚ್ಚಾಗಲಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.