Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಮಂಗಳವಾರದ ಈ ದಿನ ಪೂರ್ವಾ ನಕ್ಷತ್ರ, ಶುಕ್ಲ ಯೋಗ ಯಾವ ರಾಶಿಯವರಿಗೆ ಶುಭವಾಗಿದೆ ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕೌಟುಂಬಿಕ ಸಮಸ್ಯೆಗಳು ಮರುಕಳಿಸಬಹುದಾದ್ದರಿಂದ ಮನಸ್ಸಿಗೆ ಕಿರಿಕಿರಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗದೇ ಇರಬಹುದು. ಇದರಿಂದ ನಿರಾಶೆ ಅನುಭವಿಸುವಿರಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ರಾಶಿಯವರು ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳಲ್ಲಿ ಅಸಡ್ಡೆ ತೋರಬೇಡಿ. ಇದು ಕುಟುಂಬ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹೊಸ ಉದ್ಯಮವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಇಂದು ಶುಭ ದಿನ. ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂತಸದ ಸಂಜೆ ಪಾರ್ಟಿ ಆಯೋಜಿಸಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಬಹು ದಿನಗಳ ನಿಮ್ಮ ಕನಸು ನನಸಾಗಬಹುದು. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯವರು ಇಂದು ವಿವಾದಗಳಿಂದ ದೂರ ಉಳಿದ್ರೆ ಒಳ್ಳೇದು. ಇಲ್ಲವೇ ದೊಡ್ಡ ಅಪಾಯದಲ್ಲಿ ಸಿಲುಕುವಿರಿ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳನ್ನು ಅನುಭವಿಸಬಹುದು. ಆದರೂ, ನಿಮ್ಮ ಬುದ್ದಿವಂತಿಕೆಯಿಂದ ಹಿಡಿದ ಕೆಲಸ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. 


ಇದನ್ನೂ ಓದಿ- ವಿಜಯದಶಮಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರಿಗೆ ಅಷ್ಟದಿಕ್ಕುಗಳಿಂದಲೂ ಅದೃಷ್ಟ!


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಾಶಿಯ ಜನರು ಇಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು.  ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಗೌರವ ಗಳಿಸುತ್ತಾರೆ. ಪೂರ್ವಜರ ಆಸ್ತಿಗೆ ಸಂಬಂಧಿದಂತೆ ಶುಭ ಸುದ್ದಿ ನಿರೀಕ್ಷಿಸಬಹುದು. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯವರಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗುವುದರಿಂದ ಪ್ರಕ್ಷುಬ್ಧತೆಯನ್ನು ಅನುಭವಿಸುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯುವುದು ಸೂಕ್ತ. ಯಾವುದೇ ರೀತಿಯ ಪ್ರಮುಖ ಹಣಕಾಸಿನ ವಹಿವಾಟನ್ನು ತಪ್ಪಿಸಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ಜನರಿಗೆ ಇಂದು ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಹಬ್ಬಕ್ಕಾಗಿ ಶಾಪಿಂಗ್ ಗಾಗಿ ಯೋಜಿಸಲು ಶುಭ ಸಮಯ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಆದರೆ, ಮಕ್ಕಳ ನಡವಳಿಕೆಯಿಂದ ಅಸಮಾಧಾನ ನಿಮ್ಮನ್ನು ಬಾಧಿಸಬಹುದು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯವರು ಇಂದು ಸಂಗಾತಿಯೊಂದಿಗೆ ಕೋಪದಿಂದ ವರ್ತಿಸುವುದನ್ನು ತಪ್ಪಿಸಿ. ಇದು ಅವರ ಭಾವನೆಗಳಿಗೆ ನೋವುಂಟು ಮಾಡಬಹುದು. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳು ಕಠಿಣ ಸ್ಪರ್ಧೆ ಒಡ್ಡಬಹುದು. ಇದಕ್ಕೆ ಸಿದ್ದವಾಗಿರಿ. ನಿಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ. 


ಇದನ್ನೂ ಓದಿ- Weekly Horoscope: ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ:  ಈ ವಾರ 4 ರಾಶಿಯವರಿಗೆ ಆಸ್ತಿ ಖರೀದಿ ಯೋಗ, ಸಂಪತ್ತು ವೃದ್ಧಿ 


ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯ ಜನರಿಗೆ ಇಂದು ಮಿಶ್ರ ಪ್ರತಿಫಲ ದಿನವಾಗಿರುತ್ತದೆ. ವ್ಯಾಪಾರದಲ್ಲಿ ವಿಶೇಷ ವ್ಯಕ್ತಿಗಳ ಪರಿಚಯದಿಂದ ಲಾಭವಾಗಲಿದೆ. ನಿಮ್ಮ ಸಂಗತಿಯೊಂದಿಗೆ ಕೋಪದಿಂದ ವರ್ತಿಸುವುದನ್ನು ತಪ್ಪಿಸಿ. ಕೆಲಸದಲ್ಲಿ ಸೋಮಾರಿತನವನ್ನು ತಪ್ಪಿಸಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯ ಜನರು ಇಂದು ಆಹ್ಲಾದಕರ ದಿನವನ್ನು ಆನಂದಿಸುವಿರಿ. ಕುಟುಂಬದಲ್ಲಿ ಪ್ರೀತಿ-ಸಹಕಾರ ತುಂಬಿರಲಿದೆ. ಕುಟುಂಬದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ದಿನವಾಗಿದೆ. ವಿದ್ಯಾರ್ಥಿಗಳಿಗೆ ಫಲಪ್ರದವಾದ ದಿನ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದ ಪ್ರತಿ ಹೆಜ್ಜೆಯನ್ನೂ ಇಡಬೇಕು. ಪ್ರತಿ ಹೆಜ್ಜೆಗೂ ಸವಾಲುಗಳಿರುತ್ತವೆ. ಇದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರಿ. ಕೆಲಸದಲ್ಲಿ ಅಪಾಯವನ್ನು ತೆಗೆದುಕೊಳ್ಳುವುದು ನಷ್ಟಕ್ಕೆ ಕಾರಣವಾಗಬಹುದು. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಕುಟುಂಬಸ್ಥರು ಅಚ್ಚರಿಯ ಪಾರ್ಟಿಯನ್ನು ಆಯೋಜಿಸಬಹುದು. ಹೊಸ ವಾಹನ ಖರೀದಿಸುವ ಬಹುದಿನಗಳ ನಿಮ್ಮ ಕನಸು ನನಸಾಗುವ ಸಾಧ್ಯತೆ ಇರುತ್ತದೆ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.