Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ, ತೈತಿಲ ಕರಣ. ಎಲ್ಲಾ 12 ರಾಶಿಯವರಿಗೆ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಕೆಲಸ ಕಾರ್ಯಗಳಲ್ಲಿ ವಿಳಂಬವು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಹುದು. ನಿಮ್ಮ ಯೋಜನೆಯಂತೆ ಯಾವುದೇ ಕೆಲಸಗಳು ನಡೆಯದೆ ಇರುವುದರಿಂದ ಮನಸ್ಸು ಗೊಂದಲಗೊಳ್ಳುವ ಸಾಧ್ಯತೆ ಇದೆ. ಆದರೆ, ಭರವಸೆಯನ್ನು ಕಳೆದುಕೊಳ್ಳಬೇಡಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಉತ್ತಮ ದಿನ. ಯಾವುದೇ ವಿಚಾರವಿರಲಿ ಮನಬಿಚ್ಚಿ ಮಾತನಾಡಲು ಹಿಂಜರಿಯಬೇಡಿ. ಮುಕ್ತ ಸಂವಾದದಲ್ಲಿ ತೊಡಗುವುದರಿಂದ ಸಂಪರ್ಕಗಳು ಹೆಚ್ಚಾಗುತ್ತವೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳು ನಿಮ್ಮ ಕಷ್ಟಕ್ಕೆ ಕರಗಬಹುದು. ಸವಾಲಿನ ಪರಿಸ್ಥಿತಿಗಳಲ್ಲಿ ನಿಮ್ಮ ಚಾತುರ್ಯದಿಂದ ಎಲ್ಲವನ್ನೂ ತಹಬದಿಗೆ ತರಲು ಯಶಸ್ವಿಯಾಗುವಿರಿ. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಕ್ಷಣಗಳನ್ನು ಆನಂದಿಸುವಿರಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳಿ. ಇಲ್ಲದಿದ್ದರೆ, ಇದು ಬಹು ದೊಡ್ಡ ಸಮಸ್ಯೆಯಾಗಿ ನಿಮ್ಮನ್ನು ಕಾಡಬಹುದು. ನಂಬಿಕೆಗೆ ಪೆಟ್ಟು ಬೀಳದಂತೆ ನಡೆದುಕೊಳ್ಳಿ. ಅನಿರೀಕ್ಷಿತ ಧನಾಗಮನವು ದಿನವನ್ನು ಬೆಳಗಲಿದೆ. 


ಇದನ್ನೂ ಓದಿ- ದೀಪಾವಳಿಯಲ್ಲಿ ಈ ರಾಶಿಯವರ ಬಾಳು ಬೆಳಗಳಿದ್ದಾನೆ 'ರಾಹು': ಲಕ್ಷ್ಮಿ ದಯೆಯಿಂದ ಹರಿದು ಬರಲಿದೆ ಅಪಾರ ಹಣ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಹಳೆಯ ಪ್ರಣಯ ವ್ಯಾಮೋಹ ಮರುಕಳಿಸಬಹುದು. ಇದು ನಿಮ್ಮ ತಿಳಿಯಾದ ಭಾವನೆಗಳನ್ನು ಕದಡುವ ಸಾಧ್ಯತೆ ಇದೆ. ಆದರೆ, ಬೇರೆಯವರು ನಿಮ್ಮ ಭಾವನೆಗಳೊಂದಿಗೆ ಆಟವಾಡಲು ಬಿಡಬೇಡಿ. ಸ್ವಂತ ಅಗತ್ಯತೆಗಳಿಗೆ ಪ್ರಾಮುಖ್ಯತೆ ನೀಡಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಹತಾಶೆಯ ದಿನವನ್ನು ಅನುಭವಿಸುವಿರಿ. ಕೆಲವು ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸ್ವಲ್ಪ ಸಮಯಾವಕಾಶವನ್ನು ನೀಡಿ. ಆತ್ಮಾವಲೋಕನಕ್ಕೆ ಪರಿಪೂರ್ಣವಾದ ದಿನ ಇದಾಗಿದೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಯಾವುದೇ ವ್ಯಕ್ತಿಯ ಬಗ್ಗೆ ನಿಮ್ಮದೇ ಅಭಿಪ್ರಾಯಕ್ಕೆ ಬರಬೇಡಿ. ಇದು ಪರಿಸ್ಥಿತಿಯನ್ನು ಕೈ ಮೀರುವಂತೆ ಮಾಡಬಹುದು. ವೈಯಕ್ತಿಕ ಬದುಕಿನಲ್ಲಿ ಕುಳಿತು ಮಾತನಾಡುವುದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇದಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಮೇಲಾಧಿಕಾರಿಗಳ ಅವಾಸ್ತವಿಕ ನಿರೀಕ್ಷೆಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಕುಟುಂಬದಲ್ಲೂ ಅನಗತ್ಯ ವಾದ-ವಿವಾದಗಳು ಘರ್ಷಣೆಗೆ ಕಾರಣವಾಗಬಹುದು. ಆದರೂ, ಅದೃಷ್ಟದ ಬೆಂಬಲ ಇರುವುದರಿಂದ ಎಲ್ಲವನ್ನೂ ಸಮರ್ಥವಾಗಿಯೇ ನಿಭಾಯಿಸುವಿರಿ. 


ಇದನ್ನೂ ಓದಿ- ಬೆಳ್ಳಿ ಉಂಗುರ ಧರಿಸಿದರಷ್ಟೇ ಈ  ರಾಶಿಯವರಿಗೆ ಜೀವನದಲ್ಲಿ ಪ್ರಗತಿ, ಧನಲಾಭ, ಭಾರೀ ಅದೃಷ್ಟ 


ಧನು ರಾಶಿಯವರ ಭವಿಷ್ಯ (Sagittarius Horoscope):  
ನೀವಿಂದು ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸನ್ನು ಗಳಿಸುವಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಸಂದರ್ಭದಲ್ಲಿ ಸತ್ಯವನ್ನು ಮರೆಮಾಚಲು ಬಿಡಬೇಡಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಬಹುದು. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಅವಕಾಶಗಳು ನಿಮಗಾಗಿ ಕಾದಿವೆ. ಜೀವನದಲ್ಲಿ ಹೊಸ ಆಯಾಮಕ್ಕಾಗಿ ನಿಮ್ಮನ್ನು ನೀವು ಸಿದ್ದರಾಗಿಸಿ. ಸಂಘಟಿತ ವ್ಯವಹಾರಸ್ಥರೊಂದಿಗೆ ವ್ಯವಹಾರಿಸುವಾಗ ಸಂಪೂರ್ಣ ತಯಾರಿ ಅಗತ್ಯವಾಗಿರುತ್ತದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮ್ಮ ಮಾತೇ ನಿಮಗೆ ಬಂಡವಾಳವಾಗಿದೆ. ಕೆಲವೊಂದು ಸಂದರ್ಭದಲ್ಲಿ ಸಂವಹನವು ನಿಮಗೆ ಸವಾಲೆನಿಸಬಹುದು. ಸಣ್ಣಪುಟ್ಟ ಅವಘಡಗಳು ಸಂಭವಿಸಬಹುದಾದ್ದರಿಂದ ಜಾಗರೂಕರಾಗಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಜೀವನದ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ದಿಢೀರ್ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಆದರೆ, ಸಂದರ್ಭದಲ್ಲಿ ಭಾವನಾತ್ಮಕವಾಗಿ ಯೋಚಿಸದೆ ಸರಿ-ತಪ್ಪುಗಳನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.