ಈ ರಾಶಿಯವರ ಬೆನ್ನಿಗೆ ನಿಂತು ಕಾಪಾಡುತ್ತಾನೆ ರಾಹು! ಸೋಲಿಲ್ಲದೆ ಮುನ್ನಡೆಸಿ, ಕರುಣಿಸುವ ಸಮೃದ್ದಿ
ರಾಹು ಅಂದ ಕೂಡಲೇ ಸಾಮಾನ್ಯವಾಗಿ ಕೆಟ್ಟ ಯಾವಾಗಲೂ ಕೆಟ್ಟದ್ದನ್ನೇ ಮಾಡುತ್ತಾನೆ ಎನ್ನುವ ಭಾವ ಸಹಜವಾಗಿ ಎಲ್ಲರಲ್ಲಿಯೂ ಮನೆ ಮಾಡಿರುತ್ತದೆ. ಆದರೆ ಅದು ನಿಜವಲ್ಲ.
ಬೆಂಗಳೂರು : ನವಗ್ರಹಗಳ ಪೈಕಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವೆಂದರೆ ಅದು ಶನಿ. ಶನಿಯ ನಂತರ ರಾಹು ನಿಧಾನವಾಗಿ ಚಲಿಸುವ ಗ್ರಹ ಎಂದು ಹೇಳಲಾಗುತ್ತದೆ. ಶನಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತೆರಳಲು ಎರಡೂವರೆ ವರ್ಷ ತೆಗೆದುಕೊಂಡರೆ ರಾಹು ಒಂದೂ ವರೆ ವರ್ಷದಲ್ಲಿ ತನ್ನ ರಾಶಿಯನ್ನು ಬದಲಿಸುತ್ತಾನೆ. ರಾಹುವು ಏಪ್ರಿಲ್ 12 2022 ರಂದು ಬೆಳಿಗ್ಗೆ 11.58 ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿದ್ದು, ಸದ್ಯ ಅದೇ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಅಕ್ಟೋಬರ್ 30 ರಂದು ಬೆಳಿಗ್ಗೆ 2.13 ರವರೆಗೆ ಮೇಷ ರಾಶಿಯಲ್ಲಿಯೇ ಇರುವ ರಾಹು ನಂತರ ಗುರುವಿನ ಅಧಿಪತ್ಯದ ಮೀನ ರಾಶಿಗೆ ಕಾಲಿಡುತ್ತಾನೆ. ರಾಹು ಮತ್ತು ಕೇತುಗಳನ್ನು ಮುಖ್ಯ ಗ್ರಹಗಳೆಂದು ಪರಿಗಣಿಸದಿದ್ದರೂ, ಅವುಗಳನ್ನು ಛಾಯಾ ಗ್ರಹಗಳು ಎಂದು ಕರೆಯಲಾಗುತ್ತದೆ.
ರಾಹು ಅಂದ ಕೂಡಲೇ ಸಾಮಾನ್ಯವಾಗಿ ಯಾವಾಗಲೂ ಕೆಟ್ಟದ್ದನ್ನೇ ಮಾಡುತ್ತಾನೆ ಎನ್ನುವ ಭಾವ ಸಹಜವಾಗಿ ಎಲ್ಲರಲ್ಲಿಯೂ ಮನೆ ಮಾಡಿರುತ್ತದೆ. ಆದರೆ ಅದು ನಿಜವಲ್ಲ. ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಬಲವಾದ ಸ್ಥಾನದಲ್ಲಿದ್ದಾಗ, ಆ ವ್ಯಕ್ತಿ ಆಗಸದೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಮೇಷ ರಾಶಿಯಲ್ಲಿ ರಾಹು ಇರುವಿಕೆಯಿಂದ ಕೆಲವು ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ.
ಇದನ್ನೂ ಓದಿ : Surya Grahana: ಈ ದಿನ ಸಂಭವಿಸಲಿದೆ ವರ್ಷದ ಎರಡನೇ ಸೂರ್ಯಗ್ರಹಣ, ನಾಲ್ಕು ರಾಶಿಯವರಿಗೆ ಭಾರೀ ನಷ್ಟ
ಕುಂಭ ರಾಶಿ :
ಈ ರಾಶಿಯ ಸಂಕ್ರಮಣ ಜಾತಕದ ಮೂರನೇ ಮನೆಯಲ್ಲಿ ರಾಹು ಕುಳಿತಿದ್ದಾನೆ. ಆದ್ದರಿಂದ, ಈ ಜನರ ವಿಶ್ವಾಸ ಕೂಡಾ ಆಕಾಶದೆತ್ತರಕ್ಕೆ ಇರುತ್ತದೆ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ. ಕೈ ತುಂಬಾ ಹಣ ಬಂದು ಒದಗುವುದು.
ವೃಶ್ಚಿಕ ರಾಶಿ :
ಸಂಕ್ರಮಣದ ನಂತರ ರಾಹು ವೃಶ್ಚಿಕ ರಾಶಿಯ ಆರನೇ ಮನೆಗೆ ಬಂದು ನೆಲೆಸಿದ್ದಾನೆ. ಆದ್ದರಿಂದ ಒಳ್ಳೆಯ ಉದ್ಯೋಗದ ಆಫರ್ ಪಡೆಯಬಹುದು. ಬಡ್ತಿ ಜೊತೆಗೆ ಇನ್ಕ್ರಿಮೆಂಟ್ ಕೂಡಾ ಸಿಗುತ್ತದೆ. ಆದರೆ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಇದನ್ನೂ ಓದಿ : ಅಕ್ಟೋಬರ್ ನಿಂದ ಮುಂದಿನ ಒಂದೂವರೆ ವರ್ಷ ಈ ರಾಶಿಯವರದ್ದೇ ಆಟ ! ಕಷ್ಟ ಎನ್ನುವುದು ಹತ್ತಿರವೂ ಸುಳಿಯದು
ಸಿಂಹ ರಾಶಿ :
ಈ ರಾಶಿಯ 10 ನೇ ಮನೆಯಲ್ಲಿ ರಾಹು ಕುಳಿತಿದ್ದಾನೆ. ಆದ್ದರಿಂದ ನೀವು ಉದ್ಯೋಗದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಅಂದುಕೊಂಡ ಕೆಲಸವನ್ನು ಸುಲಭವಾಗಿ ಸಾಧಿಸುವುದು ಸಾಧ್ಯವಾಗುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಪ್ರವಾಸಕ್ಕೆ ಹೋಗುವುದರಿಂದ ಹೆಚ್ಚಿನ ವೆಚ್ಚವಾಗಬಹುದು. ಶಿವಲಿಂಗದ ಮೇಲೆ ಜಲಾಭಿಷೇಕ ಮಾಡಿದರೆ ಇನ್ನೂ ಉತ್ತಮ ಫಲ ಸಿಗುವುದು.
ಕಟಕ ರಾಶಿ :
ಕರ್ಕಾಟಕ ರಾಶಿಯವರ ಕರ್ಮ ಭಾವದ 10ನೇ ಮನೆಯಲ್ಲಿ ರಾಹು ಕುಳಿತಿದ್ದಾನೆ. ಈ ಅವಧಿಯಲ್ಲಿ ಕರ್ಕಾಟಕ ರಾಶಿಯವರಿಗೆ ಯಾವುದೇ ಕೆಲಸ ಮಾಡಿದರೂ ಆರ್ಥಿಕ ಲಾಭ ದೊರೆಯುತ್ತದೆ. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಹೆಚ್ಚು ಪ್ರಯೋಜನಕಾರಿಯಾಗಿರಲಿದೆ. ವ್ಯಾಪಾರದಲ್ಲಿ ಲಾಭ ಗಳಿಸುವುದಿಉ ಸಾಧ್ಯವಾಗುತ್ತದೆ. ಇದಲ್ಲದೇ ರೋಗಗಳೂ ದೂರವಾಗುತ್ತವೆ.
ಇದನ್ನೂ ಓದಿ : ಹಸ್ತದಲ್ಲಿ ಈ ರೇಖೆ ಇದ್ದರೆ ಜೀವನದಲ್ಲಿ ಆಗುವುದು ಸಿರಿವಂತ ಸಂಗಾತಿಯ ಪ್ರವೇಶ ! ಅತ್ತೆ ಮನೆಯಿಂದ ಸಿಗುವುದು ಭರ್ಜರಿ ಆಸ್ತಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.