Rahu Dosh Parihar: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು ಪಾಪ, ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ನೆರಳು ಗ್ರಹ ರಾಹು ಉತ್ತಮ ಸ್ಥಾನದಲ್ಲಿ ಇರದಿದ್ದರೆ ಆ ವ್ಯಕ್ತಿಯ ಜೀವನವೂ ಸಂಕಷ್ಟಗಳ ಸರಮಾಲೆಯಿಂದ ತುಂಬಿರುತ್ತದೆ. ರಾಹುವಿನ ಸ್ಥಾನವು ಉತ್ತಮವಾಗಿಲ್ಲದಿದ್ದರೆ, ವ್ಯಕ್ತಿಯು ಅನಾರೋಗ್ಯ, ಆರ್ಥಿಕ ಮುಗ್ಗಟ್ಟು, ಮಾನಸಿಕ ಅಸ್ವಸ್ಥತೆಯಂತಹ ಹಲವು ಸಮಸ್ಯೆಗಳಿಂದ ಸುತ್ತುವರೆಯುತ್ತಾನೆ. 


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ರಾಹು ತನ್ನ ಕೆಟ್ಟ ಸ್ಥಿತಿಯನ್ನು ಸೂಚಿಸುವ ಬಗ್ಗೆ ಕೆಲವು ಸಂಕೇತಗಳನ್ನು ನೀಡುತ್ತಾನೆ. ಆದರೆ, ಇಂತಹ ಸಂಕೇತಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತೇವೆ. ವಾಸ್ತವವಾಗಿ, ಮನೆ ಬಾಗಿಲಿಗೂ ರಾಹುವಿಗೂ ವಿಶೇಷ ನಂಟಿದ್ದು ಕೆಲವೊಮ್ಮೆ ಮನೆಯ ಬಾಗಿಲಿನ ಮೂಲಕವೂ ರಾಹು ದೋಷದ ಬಗ್ಗೆ ಸೂಚನೆ ಸಿಗುತ್ತದೆ ಎನ್ನಲಾಗುತ್ತದೆ. 


ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯ ಬಾಗಿಲುಗಳಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಮಾತ್ರವಲ್ಲ, ಬಾಗಿಲುಗಳಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ  ರಾಹು ದೋಷದಿಂದ ಉಂಟಾಗುವ ಹಾನಿಯನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Budh Gochar 2024: ವಾರದ ಬಳಿಕ ಈ ಮೂರು ರಾಶಿಯವರ ಜೀವನದಲ್ಲಿ ಹರಿದುಬರಲಿದೆ ಧನ-ಸಂಪತ್ತು


ಮನೆ ಬಾಗಿಲುಗಳ ಈ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ: 
ಮನೆಯಲ್ಲಿರುವ ಬಾಗಿಲುಗಳು, ವಿಶೇಷವಾಗಿ ನೀವು ವಾಸಿಸುವ ಕೋಣೆಯ ಬಾಗಿಲುಗಳು ತೆರೆಯುವಾಗ ಮತ್ತು ಮುಚ್ಚುವಾಗ ಕರ್ಕಶ ಶಬ್ದ ಕೇಳಿಬರುತ್ತಿದ್ದರೆ ರಾಹು ನಿಮ್ಮ ಬದುಕಿನಲ್ಲಿ ನಕಾರಾತ್ಮಕ ಫಲಗಳನ್ನು ನೀಡಲಿದ್ದಾನೆ ಎಂದರ್ಥ. ಬಾಗಿಲು ಬಿರುಕು ಬಿಡುವುದು, ಬಾಗಿಲು ಹಾಕುವಾಗ ತೆರೆಯುವಾಗ ಶಬ್ಧ, ಬಣ್ಣ ಬದಲಾವಣೆ ಇವೆಲ್ಲವೂ ಜಾತಕದಲ್ಲಿ ರಾಹುವಿನ ಸ್ಥಾನ ಉತ್ತಮವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಇಂತಹ ವಿಷಯಗಳು ನಿಮ್ಮ ಗಮನಕ್ಕೆ ಬಂದ ಕೂಡಲೇ ತಡಮಾಡದೆ ಬಾಗಿಲುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು ಉತ್ತಮ ನ್ನಲಾಗುತ್ತದೆ. 


ರಾಹು ದೋಷದಿಂದ ಮುಕ್ತಿ ಪಡೆಯಲು ಸರಳ ಮಾರ್ಗಗಳು: 
* ನಿಮ್ಮ ಮನೆಯೊಳಗಿನ ಇತರ ಬಾಗಿಲುಗಳು ಮನೆಯ ಮುಖ್ಯ ಬಾಗಿಲಿಗಿಂತ ದೊಡ್ಡದಾಗಿರಬಾರದು ಎಂಬುದನ್ನು ನೆನಪಿಡಿ. 


* ಕಾಲಕಾಲಕ್ಕೆ ನಿಮ್ಮ ಮನೆಯ ಬಾಗಿಲುಗಳಿಗೆ ಬಣ್ಣ ಒಡೆಸುವುದನ್ನು ಮರೆಯಬೇಡಿ.  


* ಬಾಗಿಲು ಮನೆಯ ಬಾಯಿಯಾಗಿದ್ದು ಅದನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡಬೇಕು ಎಂಬುದನ್ನೂ ನೆನಪಿಡಿ. 


* ಬಾಗಿಲುಗಳಿಂದ ಬರುವ ಕರ್ಕಶ ಶಬ್ದವನ್ನು ಲಘುವಾಗಿ ತೆಗೆದುಕೊಳ್ಳಬಾರದು, ಆದ್ದರಿಂದ ಕೀಲುಗಳು ಜ್ಯಾಮಿಂಗ್ ಆಗದಂತೆ ತಡೆಯಲು ಆಗಾಗ್ಗೆ ಬಾಗಿಲುಗಳಿಗೆ ಎಣ್ಣೆಯನ್ನು ಅನ್ವಯಿಸಿ.


ಇದನ್ನೂ ಓದಿ- Vastu Tips For Prosperity: ಮನೆಯಲ್ಲಿನ ಹಣಕಾಸು ಮುಗ್ಗಟ್ಟು ನಿವಾರಣೆಗೆ ಈ ಉಪಾಯ ಮಾಡಿ ನೋಡಿ!


* ನೀವು ನಿಮ್ಮ ಮನೆಯಲ್ಲಿ ಕಬ್ಬಿಣದ ಬಾಗಿಲು ಹೊಂದಿದ್ದರೆ, ಬಾಗಿಲು ತುಕ್ಕು ಹಿಡಿಯದಂತೆ ವಿಶೇಷ ಎಚ್ಚರಿಕೆ ವಹಿಸಿ. 


* ಮುಖ್ಯದ್ವಾರದಲ್ಲಿ ಯಾವುದೇ ವಿಗ್ರಹದ ಫೋಟೋ ಇರಬಾರದು. ಆದಾಗ್ಯೂ,  ಸಾಂಕೇತಿಕ ಫೋಟೋಗಳು ಅಥವಾ ಸ್ವಸ್ತಿಕ, ಓಂ ಇತ್ಯಾದಿ ಚಿಹ್ನೆಗಳನ್ನು ಬಳಸಬಹುದು.


* ಕೆಲವರು ಬಾಗಿಲುಗಳ ಮೇಲೆ ಈಟಿಗಳನ್ನು ಜೋಡಿಸುವುದು ಇತ್ತೀಚಿನ ಟ್ರೆಂಡ್ ಆಗಿದೆ. ಆದರಿದರ ದಿಕ್ಕು ಒಳಮುಖವಾಗಿರಬಾರದು. ಈಟಿಗಳು ಯಾವಾಗಲೂ ಹೊರಗೆ ತೋರಿಸಬೇಕು ಎಂಬುದನ್ನು ನೆನಪಿನಲ್ಲಿಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.